ETV Bharat / state

ಬಾಕಿ ಉಳಿದಿರುವ 13,000 ರೈತರ ಸಹಕಾರ ಸಾಲಮನ್ನಾ ಮಾಡಲು ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆ : ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ - ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವ ಸೋಮಶೇಖರ್​​

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಡಿಸಿಸಿ ಮೂಲಕ 31.1.2021 ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲವನ್ನು 30.6.2021ರೊಳಗೆ ಪಾವತಿ ಮಾಡಿದ್ದರೆ, ಸಂಬಂಧಿಸಿದ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. 55,546 ರೈತರಿಗೆ 241 ಕೋಟಿ ರೂ. ಬಡ್ಡಿ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು..

S.T. Somashekhar
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್
author img

By

Published : Mar 28, 2022, 7:36 PM IST

ಬೆಂಗಳೂರು : ಷರತ್ತು ಪೂರೈಸದೇ ಬಾಕಿ ಉಳಿದಿರುವ 13,000 ರೈತರ ಸಹಕಾರ ಸಾಲ‌ಮನ್ನಾ ಮಾಡಲು ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆ. 2017-18ನೇ ಸಾಲಿನ ಬಾಕಿ ಇದ್ದ ಸಹಕಾರ ಸಂಘದಿಂದ ಪಡೆದ ಅಲ್ಪಾವಧಿ ಸಾಲ‌ಮನ್ನಾ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಒಂದು ಲಕ್ಷ ರೂ. ‌ಸಾಲಮನ್ನಾ ಮಾಡಲು 14.8.2018ರಲ್ಲಿ ಆದೇಶ ಹೊರಡಿಸಲಾಗಿತ್ತು. ಅದರಂತೆ 20.38 ಲಕ್ಷ ರೈತರಿಗೆ 9,448.62 ಕೋಟಿ ರೂ.‌ ಸಾಲ‌ಮನ್ನಾ ಮಾಡುವ ಅಂದಾಜು ಮಾಡಲಾಗಿತ್ತು. 18.95 ಲಕ್ಷ ರೈತರ ಸ್ವಯಂ ದೃಢೀಕರಣ ಪತ್ರ ಪಡೆಯಲಾಗಿದೆ. ಇದರಲ್ಲಿ 17.37 ಲಕ್ಷ ರೈತರಿಗೆ 8,154.98 ಕೋಟಿ ರೂ.‌ ರೈತರ ಸಾಲಮನ್ನಾ ಮಾಡಲು ಹಸಿರು ಪಟ್ಟಿ ತಯಾರಿಸಲಾಗಿದೆ. 2018-19ರಲ್ಲಿ 5.57 ಲಕ್ಷ ರೈತರಿಗೆ 2,600 ಕೋಟಿ ಸಾಲಮನ್ನಾ ಮಾಡಲಾಗಿದೆ ಎಂದು ವಿವರಿಸಿದರು.

2019-20ರಲ್ಲಿ 10.91 ಲಕ್ಷ ರೈತರಿಗೆ 5,092. 33 ಕೋಟಿ ರೂ.‌ ಸಾಲ ಮನ್ನಾ ಮಾಡಲಾಗಿದೆ. 2020-21ರಲ್ಲಿ 58 ಸಾವಿರ ರೈತರಿಗೆ 295.14 ಕೋಟಿ ಸಾಲಮನ್ನಾವಾಗಿದೆ. ಒಟ್ಟು 7,987.47 ಕೋಟಿ ರೂ. ಸಾಲಮನ್ನಾ ಮಾಡಲಾಗಿದೆ. 31 ಸಾವಿರ ರೈತರಿಗೆ 167.51 ಕೋಟಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 13,500 ಸಾವಿರ ರೈತರ ಅರ್ಹತೆ ಗುರುತಿಸುವುದು ಬಾಕಿ ಇದೆ. ಅದರ ಗ್ರೀನ್ ಲೀಸ್ಟ್ ಬಂದ ಬಳಿಕ ಅವರ ಸಾಲ ಮನ್ನಾ ಮಾಡಲಾಗುತ್ತದೆ ಎಂದರು.

ಇದನ್ನೂ ಓದಿ: ಕೊಳ್ಳೆಗಾಲದಿಂದ‌ ಔರಾದ್ ವರೆಗೆ ಎಲ್ಲಾ ನೀರಾವರಿ ಯೋಜನೆ ಪೂರ್ಣಗೊಳಿಸಲು ಯತ್ನಿಸುತ್ತೇವೆ: ಸಚಿವ ಕಾರಜೋಳ

29.3.2020 ಅಂತ್ಯಕ್ಕೆ ಹೊರ ಬಾಕಿ ಇರುವ 10,897 ಬೀದಿ ಬದಿ ವ್ಯಾಪಾರಿಗಳಿಗೆ 7.56 ಕೋಟಿ ಸಾಲ ಮನ್ನಾ ಮಾಡಿ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದ 50,000 ರೂ. ವರೆಗೆ ಮೀನುಗಾರರ ಸಾಲ ಮನ್ನಾ ಮಾಡಲು ಉದ್ದೇಶಿಸಲಾಗಿದೆ. 10,492 ಮೀನುಗಾರರಿಗೆ 49 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಡಿಸಿಸಿ ಮೂಲಕ 31.1.2021 ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲವನ್ನು 30.6.2021ರೊಳಗೆ ಪಾವತಿ ಮಾಡಿದ್ದರೆ, ಸಂಬಂಧಿಸಿದ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. 55,546 ರೈತರಿಗೆ 241 ಕೋಟಿ ರೂ. ಬಡ್ಡಿ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ಸಾಲ ವಿತರಣೆ ಬಗ್ಗೆ ಉತ್ತರಿಸಿದ ಅವರು 2018-19ರಲ್ಲಿ 20.15 ಲಕ್ಷ ರೈತರಿಗೆ ಸಾಲ ವಿತರಣೆಯ ಗುರಿ ಹೊಂದಲಾಗಿತ್ತು. 11,350 ಕೋಟಿ ರೂ. ಹಣ ಬಿಡುಗಡೆ ಮಾಡಲು ಅಂದಾಜಿಸಲಾಗಿತ್ತು. 2019-20ರಲ್ಲಿ 22.58 ಲಕ್ಷ ರೈತರಿಗೆ 13,577 ಕೋಟಿ ಸಾಲ ವಿತರಿಸಲಾಗಿದೆ. 2020-21 ಸಾಲಿನಲ್ಲಿ 26.19 ಲಕ್ಷ ರೈತರಿಗೆ 17,901 ಕೋಟಿ ರೂ. ಸಾಲ ನೀಡಲಾಗಿದೆ. 2021-22ರಲ್ಲಿ 30.86 ಲಕ್ಷ ರೈತರಿಗೆ 20,800 ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. 20 ಲಕ್ಷ ರೈತರಿಗೆ ವಾಣಿಜ್ಯ ಬ್ಯಾಂಕ್​ನಿಂದ ಸಾಲ ನೀಡಲಾಗಿದೆ.‌ 30 ಲಕ್ಷ ರೈತರಿಗೆ ಸಹಕಾರ ಸಂಘಗಳಿಂದ ಸಾಲ ನೀಡಾಗಿದೆ ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.