ETV Bharat / state

ಕೆಎಸ್​ಆರ್​​ಪಿಯ 13 ಸಿಬ್ಬಂದಿಗೆ ಕೊರೊನಾ: ಪಾದರಾಯನಪುರದಲ್ಲಿ ವಕ್ಕರಿಸಿದ ಮಹಾಮಾರಿ

ಪಾದರಾಯನಪುರ ಬಳಿ ಅತಿ ಹೆಚ್ಚು ಕೊರೊನಾ ಪ್ರಕರಗಳು ದಾಖಲಾಗಿವೆ ಹಾಗೂ ಅಲ್ಲಿನ ಜನ ಕಾನೂನು ನಿಯಮ ಉಲ್ಲಂಘಿಸಿರುವ ಕಾರಣ ಬಂದೋಬಸ್ತ್​ಗೆ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ 13 ಕೆಎಸ್​ಆರ್​​ಪಿ ಸಿಬ್ಬಂದಿಗೆ ಕೊರೊನಾ ದೃಢವಾಗಿದೆ.

KSRP file photo
ಕೆಎಸ್​ಆರ್​​ಪಿ ಸಾಂದರ್ಭಿಕ ಚಿತ್ರ
author img

By

Published : Jun 21, 2020, 1:22 PM IST

ಬೆಂಗಳೂರು: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಜಾಸ್ತಿಯಾಗ್ತಿದೆ. ಹೀಗಾಗಿ ಕಂಟೈನ್ಮೆಂಟ್ ಝೋನ್​ಗಳಲ್ಲಿ ಬಹಳಷ್ಟು ಮುಂಜಾಗ್ರ ಕ್ರಮವನ್ನು ಪೊಲೀಸರು ಕೈಗೊಳ್ತಿದ್ರು. ಆದ್ರೆ ಪೊಲೀಸ್ ಇಲಾಖೆಗೆ ಪಾದರಾಯನಪುರದ ನಂಜು ಕಾಡುತ್ತಿದೆ.

ಪಾದರಾಯನಪುರ ಬಳಿ ಅತಿ ಹೆಚ್ಚು ಕೊರೊನಾ ಪ್ರಕರಗಳು ದಾಖಲಾಗಿವೆ ಹಾಗೂ ಅಲ್ಲಿನ ಜನ ಕಾನೂನು ನಿಯಮ ಉಲ್ಲಂಘನೆ ಮಾಡಿರುವ ಕಾರಣ ಬಂದೋಬಸ್ತ್​ಗೆ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ 13 ಕೆಎಸ್​ಆರ್​​ಪಿ ಸಿಬ್ಬಂದಿಗೆ ಸದ್ಯ ಕೊರೊನಾ ದೃಢವಾಗಿದೆ.

KSRP
ಕೆಎಸ್​ಆರ್​​ಪಿ ವಾಹನ

ಪಾದಾರಯನಪುರದಲ್ಲಿ ಕರ್ತವ್ಯ ಮುಗಿಸಿ ಮತ್ತೆ ಮೈಸೂರಿಗೆ ಹೋಗಿ ಕೊರೊನಾ ಪರೀಕ್ಷೆಗೆ ಒಳಪಟ್ಟಾಗ ಕೊರೊನಾ ದೃಢವಾಗಿದೆ. ಈಗಾಗ್ಲೇ ಬೆಂಗಳೂರಿನ ಕೆಎಸ್ಆರ್​ಪಿ ತುಕಡಿಯವರು ಪಾದರಾಯನಪುರಕ್ಕೆ ತೆರಳಿ ಕಾರ್ಯನಿರ್ವಹಿಸಿದ್ದಾಗ ಕೊರೊನಾ ದೃಢವಾಗಿದ್ದು, ಪಾದಾರಯನಪುರಕ್ಕೆ ತೆರಳಿದ ಒಟ್ಟು 20 ಪೊಲೀಸರಲ್ಲಿ ಸೋಂಕು ಕಾಣಿಸಿಕೊಂಡಂತಾಗಿದೆ.

ಸದ್ಯ ಕೆಎಸ್ಆರ್​ಪಿ ಎಡಿಜಿಪಿ ಅಲೋಕ್ ಕುಮಾರ್ ಅವರು ಇಲಾಖೆಯ ಎಲ್ಲಾ ಸಿಬ್ಬಂದಿಗೆ ಅತಿ ಜಾಗೃತೆಯಿಂದ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ. ಕೆಎಸ್ಆರ್​ಪಿ ಸಿಬ್ಬಂದಿ ಕೆಎಸ್ಆರ್​ಪಿ ಬಸ್ಸುಗಳಲ್ಲಿ ಅಹಿತಕರ ಘಟನೆ ಸಂದರ್ಭ, ಬೇರೆ ಬೇರೆ ಕಡೆ ಘಟನಾ ಸ್ಥಳಕ್ಕೆ ತೆರಳಿ ಬಸ್ಸಿನಲ್ಲೇ ವಾಸ್ತವ್ಯ ಮಾಡ್ತಾರೆ. ಹಾಗಾಗಿ ಕೆಎಸ್ಆರ್​ಪಿ ಸಿಬ್ಬಂದಿಗೂ ಕೊರೊನಾ ಆತಂಕ ಶುರುವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.