ಬೆಂಗಳೂರು: ಇಂದು ರಾಜ್ಯದಲ್ಲಿ 4 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆಯಾಗಿದೆ. ಇಂದು ಬೆಳಗಾವಿಯಲ್ಲಿ 3 ಹೊಸ ಪ್ರಕರಣ ಪತ್ತೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ದೃಢಟ್ಟಿದೆ.
ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ 288 ಜನರ ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 200 ಜನರ ರಿಪೋರ್ಟ್ಸ್ ಬಂದಿದ್ದು, 187 ಜನರ ರಿಪೋರ್ಟ್ ನೆಗೆಟಿವ್, 13 ಮಾತ್ರ ಪಾಸಿಟಿವ್ ಬಂದಿದೆ. ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಅರ್ಧದಷ್ಟು ಪ್ರಕರಣ ಮಂಗಳೂರಿನಲ್ಲಿ ಕಂಡುಬಂದಿದೆ.
ಟ್ರಾವೆಲ್ ಹಿಸ್ಟರಿ ಹೀಗಿದೆ?
ರೋಗಿ-125: 75 ವರ್ಷದ ವೃದ್ಧ, ಬಾಗಲಕೋಟೆ ಜಿಲ್ಲೆಯ ನಿವಾಸಿಯಾಗಿದ್ದು, ಇವರ ವಿವರವಾದ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಇವರನ್ನು ಬಾಗಲಕೋಟೆ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.
ರೋಗಿ-126: ಬೆಳಗಾವಿಯಲ್ಲಿ 70 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ. ಇವರು ನಿಜಾಮುದ್ದೀನ್ ಸಭೆಗೆ ತೆರಳಿದ್ದ ವ್ಯಕ್ತಿ ಎಂದು ತಿಳಿದು ಬಂದಿದೆ. ಮಾರ್ಚ್ 13ರಿಂದ 18ರವರೆಗೂ ದೆಹಲಿಯಲ್ಲಿದ್ದು, ಸೋಂಕಿತನಿಗೆ ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ-127: ದೆಹಲಿಯ ನಿಜಾಮುದ್ದೀನ್ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ 26 ವರ್ಷದ ಯುವಕನಿಗೆ ಕೊರೊನಾ ಸೋಂಕು, ದೆಹಲಿಯಿಂದ ಬಂದ ಬಳಿಕ ಸೋಂಕು ಪತ್ತೆ.
ರೋಗಿ-128: ದೆಹಲಿಯ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಬೆಳಗಾವಿಯ 20 ವರ್ಷದ ಯುವಕನಿಗೆ ಕೊರೊನಾ ಸೋಂಕು, ಮಾರ್ಚ್ 13ರಿಂದ 18ರವರೆಗೂ ದೆಹಲಿಯಲ್ಲಿದ್ದ ಯುವಕನಿಗೆ ಸದ್ಯ ಬೆಳಗಾವಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಒಟ್ಟು ರಾಜ್ಯದಲ್ಲಿ 128 ಪ್ರಕರಣ ಪತ್ತೆ:
ಬೆಂಗಳೂರು - 51,
ಮೈಸೂರು - 21 ,
ಬೀದರ್ - 10,
ಚಿಕ್ಕಬಳ್ಳಾಪುರ - 7 ,
ದಕ್ಷಿಣ ಕನ್ನಡ - 9,
ಉತ್ತರ ಕನ್ನಡ - 8 ,
ಕಲಬುರಗಿ - 5,
ದಾವಣಗೆರೆ - 3 ,
ಉಡುಪಿ - 3 ,
ಬೆಳಗಾವಿ - 3,
ಬಳ್ಳಾರಿ - 4,
ಕೊಡಗು - 1 ,
ಧಾರವಾಡ - 1 ,
ತುಮಕೂರು - 1 ,
ಬಾಗಲಕೋಟೆ - 1 ಪ್ರಕರಣ.