ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 115 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2,533 ಕ್ಕೆ ಏರಿಕೆಯಾಗಿದೆ. ಇಂದು 53 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 834 ಸೋಂಕಿತರು ಗುಣಮುಖರಾಗಿದ್ದಾರೆ. 1,650 ಕೊರೊನಾ ಆಕ್ಟೀವ್ ಕೇಸ್ಗಳು ರಾಜ್ಯದಲ್ಲಿದ್ದು, ಈವರೆಗೆ 47 ಸೋಂಕಿತರು ಮೃತಪಟ್ಟಿದ್ದಾರೆ.
ಬೆಂಗಳೂರು ನಗರ 9, ವಿಜಯಪುರ 2, ಕಲಬುರಗಿ 5, ರಾಯಚೂರು 1, ದಕ್ಷಿಣ ಕನ್ನಡ 24, ಉಡುಪಿ 29, ಹಾಸನ 13, ಚಿಕ್ಕಮಗಳೂರು 3, ಚಿತ್ರದುರ್ಗ 6 , ಯಾದಗಿರಿ 7, ಹಾವೇರಿ - 4, ಬೀದರ್ 12 ಸೇರಿದಂತೆ ಒಟ್ಟು 115 ಸೋಂಕಿತ ಪ್ರಕರಣಗಳು ಇಂದು ಪತ್ತೆಯಾಗಿವೆ. 115 ಸೋಂಕಿತರಲ್ಲಿ 95 ಪ್ರಕರಣ ಹೊರರಾಜ್ಯದಿಂದ ಬಂದವರದ್ದಾಗಿದ್ದು, ಇಬ್ಬರು ವಿದೇಶದಿಂದ ಬಂದಿದ್ದಾರೆ. ಇಂದು 10,239 ಕೊರೊನಾ ನೆಗಟಿವ್ ಬಂದಿದ್ದು, ಈವರೆಗೆ 2,46,115 ನೆಗಟಿವ್ ವರದಿಗಳು ಬಂದಿವೆ.
ಬಹುಪಾಲು ಪ್ರಕರಣ ಮಹಾರಾಷ್ಟ್ರ, ತಮಿಳುನಾಡಿನಿಂದ ಬಂದವರದ್ದಾಗಿದ್ದು, ಕೇರಳ, ದೆಹಲಿ, ಸೌದಿ ಅರೇಬಿಯಾದಿಂದ ಬಂದವರೂ ಇದ್ದಾರೆ, ಆದರೆ ಕೆಲವರ ಟ್ರಾವೆಲ್ ಹಿಸ್ಟರಿ ಸಿಕ್ಕಿಲ್ಲ. ಸಂಪರ್ಕ ಪತ್ತೆ ಹಚ್ಚುವ ಕಾರ್ಯ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಸಂಜೆಯ ಬುಲೆಟಿನ್ನಲ್ಲಿ ಮಾಹಿತಿ ನೀಡಿದೆ.