ETV Bharat / state

ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 1,791ಕ್ಕೆ ಏರಿಕೆ.. ತೀವ್ರ ನಿಗಾ ಘಟಕದಲ್ಲಿ 112 ರೋಗಿಗಳು - 113 ಕೊರೊನಾ ಪ್ರಕರಣಗಳು ಪತ್ತೆ

ಬಿಬಿಎಂಪಿ ವಾರ್ ರೂಂ ವರದಿ ಪ್ರಕಾರ, ಕೊರೊನಾ ಮೊದಲ ಪ್ರಕರಣ ಪತ್ತೆಯಾಗಿ 108 ದಿನವಾಗಿದ್ದು, ಈವರೆಗೆ 1,798 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ.

COVID-19 positive cases in Bangaluru
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 1,791ಕ್ಕೆ ಏರಿಕೆ
author img

By

Published : Jun 25, 2020, 10:45 PM IST

ಬೆಂಗಳೂರು: ನಗರದಲ್ಲಿ ಇಂದು 113 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಒಟ್ಟು ಸಂಖ್ಯೆ 1,791 ಕ್ಕೆ ಏರಿಕೆಯಾಗಿದೆ. ಇತ್ತ ಐಸಿಯುನಲ್ಲಿ ದಾಖಲಾದವರ ಪ್ರಮಾಣವೂ ಹೆಚ್ಚುತ್ತಿದ್ದು, 112 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿಲಿಕಾನ್​ ಸಿಟಿಯಲ್ಲಿ ಇಂದು 30 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ವರೆಗೆ 505 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಇಲ್ಲಿಯವರೆಗೆ 78 ಮಂದಿ ಮೃತಪಟ್ಟಿದ್ದಾರೆ. ಇಂದು ಪತ್ತೆಯಾದ 113 ಪ್ರಕರಣಗಳಲ್ಲಿ 10 ಮಂದಿಗೆ ಸೋಂಕಿತರ ಸಂಪರ್ಕದಿಂದ ಕೊರೊನಾ ಬಂದಿದೆ ಎಂದು ಗೊತ್ತಾಗಿದ್ದು, ಉಳಿದ ಎಲ್ಲಾ ಪ್ರಕರಣಗಳ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ.

ಕೊರೊನಾ ಆರಂಭವಾದ 108 ದಿನದಲ್ಲಿ 1,798 ಪ್ರಕರಣ

ಬಿಬಿಎಂಪಿ ವಾರ್ ರೂಂ ವರದಿ ಪ್ರಕಾರ, ಕೊರೊನಾ ಮೊದಲ ಪ್ರಕರಣ ಪತ್ತೆಯಾಗಿ 108 ದಿನವಾಗಿದ್ದು, ಈವರೆಗೆ 1,798 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಜೂನ್ ತಿಂಗಳಲ್ಲಿ 1,412 ಹೊಸ ಪ್ರಕರಣಗಳು ಕಂಡುಬಂದಿವೆ. 1,798 ಪ್ರಕರಣಗಲ್ಲಿ, 1,287 ಸಕ್ರಿಯ ಪ್ರಕರಣಗಳಿವೆ. ನಗರದ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ 554 ಕ್ಕೆ ಏರಿಕೆಯಾಗಿದೆ. ಜೂನ್ 20 ರಿಂದ ಸೋಂಕು ಹರಡುವಿಕೆ ಪ್ರಮಾಣ ಏಕಾಏಕಿ ಏರುಗತಿಯಲ್ಲಿ ಸಾಗಿದೆ. ನಗರದಲ್ಲಿ ಕೋವಿಡ್ ರೋಗಿಗಳ ಸಕ್ರಿಯ ಪ್ರಮಾಣ ಶೇಕಡಾ 72 ರಷ್ಟಿದ್ದು, ಗುಣಮುಖ ಪ್ರಮಾಣ ಶೇಕಡಾ 28 ರಷ್ಟಿದೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.