ETV Bharat / state

ಕೋವಿಡ್‌ ನಿಯಮ ಉಲ್ಲಂಘನೆ: ವರ್ಷದಲ್ಲಿ ಬಿಬಿಎಂಪಿ ಬೊಕ್ಕಸಕ್ಕೆ ₹ 11.35 ಕೋಟಿ ಜಮೆ

ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಪಾಡದವರಿಗೆ ಬಿಬಿಎಂಪಿ ತಲಾ 250 ರೂ. ದಂಡ ವಿಧಿಸಿಕೊಂಡು ಬರಲಾಗುತ್ತಿದೆ. ಕಳೆದ 2020ರ ಮೇ ತಿಂಗಳಿಂದ 2021ರ ಮೇ 13 ತನಕ ಒಟ್ಟು 4,77,991 ಮಂದಿಗೆ ದಂಡ ವಿಧಿಸಲಾಗಿದೆ. ಇವರಿಂದ ಒಟ್ಟು 11.35 ಕೋಟಿ ರೂ. ದಂಡ ಸಂಗ್ರಹ ಮಾಡಲಾಗಿದೆ.

violation of covid rule
violation of covid rule
author img

By

Published : May 14, 2021, 4:10 AM IST

ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್‌ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋವಿಡ್‌ ನಿಯಮ ಉಲ್ಲಂಘಿಸಿದ ಪ್ರಕರಣಗಳಿಂದ ಒಟ್ಟು 11.35 ಕೋಟಿ ರೂ.ಗಳಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ.

ಕಳೆದ ಒಂದು ವರ್ಷದಿಂದ ಕೋವಿಡ್ ಸೋಕು ಆರಂಭವಾದ ನಂತರದಿಂದ‌ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ನಗರದ ಜನನಿಬಿಡ ಪ್ರದೇಶಗಳಲ್ಲಿ ಪಾಲಿಕೆ ಮಾರ್ಷಲ್​ಗಳು ಜನರು ಮಾಸ್ಕ್ ಹಾಕುವ ನಿಯಮ ಪಾಲನೆ ಮಾಡುವಂತೆ ಎಚ್ಚರಿಸುತ್ತಾ ಬಂದಿದ್ದಾರೆ.‌

ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಪಾಡದವರಿಗೆ ತಲಾ 250 ರೂ. ದಂಡ ವಿಧಿಸಿಕೊಂಡು ಬರಲಾಗುತ್ತಿದೆ. ಕಳೆದ 2020ರ ಮೇ ತಿಂಗಳಿಂದ 2021ರ ಮೇ 13 ತನಕ ಒಟ್ಟು 4,77,991 ಮಂದಿಗೆ ದಂಡ ವಿಧಿಸಲಾಗಿದೆ. ಇವರಿಂದ ಒಟ್ಟು 11.35 ಕೋಟಿ ರೂ. ದಂಡ ಸಂಗ್ರಹ ಮಾಡಲಾಗಿದೆ.

ಇದರಲ್ಲಿ ಮಾಸ್ಕ್ ಹಾಕದವರಿಂದ 10.74 ಕೋಟಿ ರೂ. ಹಾಗೂ ಸಾಮಾಜಿಕ ಅಂತರ ಕಾಪಾಡದವರಿಂದ 61.20 ಲಕ್ಷ ರೂ. ಸಂಗ್ರಹಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.