ಬೆಂಗಳೂರು: ರಾಜ್ಯದಲ್ಲಿ ಕೊರೊನಾಗೆ ಮತ್ತೆ 102 ಮಂದಿ ಬಲಿಯಾಗಿದ್ದು, ಈ ಮೂಲಕ ಒಟ್ಟು 4,429 ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. 7,385 ಜನರಿಗೆ ಸೋಂಕು ಪತ್ತೆಯಾಗಿದ್ದು ಒಟ್ಟಾರೆ 2,56,975 ಸೋಂಕಿತರ ಏರಿಕೆ ಆಗಿದೆ. 6,231 ಜನರು ಗುಣಮುಖರಾಗಿದ್ದು, 1,70,381 ಇವರಿಗೆ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಗುಣಮುಖರಾಗುತ್ತಿರುವರ ಸಂಖ್ಯೆ ಹೆಚ್ಚಿದ್ದು, ಸಕ್ರಿಯ 82,149 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ತೀವ್ರ ನಿಗಾ ಘಟಕದಲ್ಲಿ 705 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 59,603 ಕೊರೊನಾ ಪರೀಕ್ಷೆ ಮಾಡಿಸಿದ್ದು, ಇಲ್ಲಿಯವರೆಗೆ 22,56,862 ಜನರು ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇತ್ತ 3,54,178 ಮಂದಿ ಸೋಂಕಿತರ ಸಂಪರ್ಕದಲ್ಲಿದ್ದು ಎಲ್ಲರೂ ಹೋಂ ಕ್ವಾರಂಟೈನ್ನಲ್ಲಿದ್ದಾರೆ.
ಉದ್ಯಾನನಗರಿಯಲ್ಲಿ ನಿಲ್ಲದ ಕೊರೊನಾ ಹಾವಳಿ:
ಬೆಂಗಳೂರಿನಲ್ಲಿ ಕೊರೊನಾ ಕಂಟ್ರೋಲ್ಗೆ ಬರುವ ಯಾವ ಲಕ್ಷಣಗಳೂ ಕಾಣ್ತಿಲ್ಲ. ಇಂದು ಕೂಡ 2,912 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 1,981 ಗುಣಮುಖರಾಗಿದ್ದಾರೆ. ಒಟ್ಟಾರೆ 99,822 ಖಚಿತ ಪ್ರಕರಣಗಳಲ್ಲಿ 64,022 ಗುಣಮುಖರಾಗಿದ್ದರೆ, 34,186 ಸಕ್ರಿಯ ಪ್ರಕರಣಗಳು ಇವೆ. 25 ಸೋಂಕಿತರು ಮೃತಪಟ್ಟಿದ್ದು, ಒಟ್ಟು 1,613 ಚಿಕಿತ್ಸೆ ಸಿಗದೇ ಕೊರೊನಾಗೆ ಬಲಿಯಾಗಿದ್ದಾರೆ. ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲೇ ಅತೀ ಹೆಚ್ಚು ಸೋಂಕಿತರ ಸಂಖ್ಯೆ ಇದ್ದು, ಇನ್ನು 24 ಗಂಟೆಯಲ್ಲಿ ಒಂದು ಲಕ್ಷ ದಾಟುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ನಿತ್ಯ 3 ಸಾವಿರ ಗಡಿ ದಾಟುತ್ತಿದ್ದು, ನಾಳೆ ಕೊರೊನಾ ಶಾಕ್ ನೀಡಲಿದೆ.
ಕೋವಿಡ್ ಕೇರ್ ಸೆಂಟರ್ಗಳ ಸಹವಾಸದಿಂದ ದೂರ:
ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆ ಕೋವಿಡ್ ಕೇರ್ ಸೆಂಟರ್ಗಳನ್ನು ಕೋಟ್ಯಂತರ ರೂ ಖರ್ಚು ಮಾಡಿ ನಿರ್ಮಿಸಲಾಯ್ತು. ಆದರೆ, ಕೋವಿಡ್ ಕೇರ್ ಸೆಂಟರ್ಗಳ ಸಹವಾಸ ಸಾಕು ಎನ್ನುತ್ತಿದ್ದಾರೆ ಅನ್ನೋ ಅನುಮಾನ ಕಾಡ್ತಿದೆ. ಕೋವಿಡ್ ಕೇರ್ ಸೆಂಟರ್ಗಿಂತ ಹೋಂ ಐಸೊಲೇಷನ್ ವಾಸಿ ಅಂತ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ ಬೆಂಗಳೂರಿನಲ್ಲಿ, 12 ಕೋವಿಡ್ ಸೆಂಟರ್ ನಿರ್ಮಾಣ ಮಾಡಿದ್ದು, 4,576 ಹಾಸಿಗೆ ವ್ಯವಸ್ಥೆ ಇದೆ. ಆದರೆ, ಇದರಲ್ಲಿ ಬಳಕೆ ಆಗಿರುವುದು 2,666 ಬೆಡ್ಗಳು ಮಾತ್ರ. ಬೆಂಗಳೂರಿನಲ್ಲಿ ದಿನಕ್ಕೆ 2 ಸಾವಿರಕ್ಕೂ ಹೆಚ್ಚು ಕೇಸ್ಗಳು ಪತ್ತೆಯಾಗುತ್ತಿವೆ. ಶೇ.70 ರಷ್ಟು ಮಂದಿಗೆ ರೋಗದ ಲಕ್ಷಣಗಳೇ ಇಲ್ಲ. ಹೀಗಾಗಿ, ಹೋಂ ಕೇರ್ ಮೊರೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎಲ್ಲೆಲ್ಲಿ ಎಷ್ಟು ಬೆಡ್ ಖಾಲಿ ಇವೆ ಗೊತ್ತಾ?
ಸ್ಥಳ | ಒಟ್ಟು | ಖಾಲಿ |
ಹಜ್ ಭವನ | 384 | 45 |
ಬಿಐಇಸಿ | 1500 | 877 |
ರವಿಶಂಕರ್ ಆಯುರ್ವೇದ | 170 | 20 |
ಜಿಕೆವಿಕೆ | 200 | 60 |
ಜಿಕೆವಿಕೆ ಕೃಷಿ | 600 | 129 |