ETV Bharat / state

ದಿನಗೂಲಿ ನೌಕರರಿಗೂ ತುಟ್ಟಿಭತ್ಯೆ-ವೇತನ ಸಹಿತ ರಜೆ ಅನ್ವಯ : ಹೈಕೋರ್ಟ್ ಆದೇಶ - highcourt order to Vacation with pay for Coolie workers

ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿ ಆದೇಶ ಮತ್ತು ಸುತ್ತೋಲೆ ಹೊರಡಿಸಲು ಸಾಧ್ಯವಿಲ್ಲ. ಕಾಯ್ದೆಯ ನಿಯಮ ಮೀರಿ ಹೊರಡಿಸಿರುವ ಆದೇಶವನ್ನು ಸಮ್ಮತಿಸಿದರೆ, "ಬಾಲವೇ ನಾಯಿಯನ್ನು ಅಲ್ಲಾಡಿಸಿದಂತಾಗುತ್ತದೆ ಹೊರತು ನಾಯಿ ಬಾಲವನ್ನು ಅಲ್ಲಾಡಿಸಿದಂತಾಗುವುದಿಲ್ಲ' ಎಂದು ಸರ್ಕಾರದ ಕ್ರಮವನ್ನು ಟೀಕಿಸಿದೆ..

coolie-workers
ದಿನಗೂಲಿ ನೌಕರರು
author img

By

Published : Jun 14, 2021, 9:47 PM IST

Updated : Jul 23, 2022, 3:06 PM IST

ಬೆಂಗಳೂರು : ಸರ್ಕಾರಿ ನೌಕರರಿಗೆ ಇರುವಂತೆಯೇ ಸರ್ಕಾರದ ವಿವಿಧ ಇಲಾಖೆಗಳು ಮತ್ತು ನಿಗಮಗಳಲ್ಲಿ ಕಾರ್ಯ ನಿರ್ವಹಿಸುವ ದಿನಗೂಲಿ ನೌಕರರಿಗೂ ಶೇ.100ರಷ್ಟು ತುಟ್ಟಿ ಭತ್ಯೆ ಮತ್ತು ವರ್ಷಕ್ಕೆ 30 ವೇತನ ಸಹಿತ ರಜೆ (ಇಎಲ್) ನೀಡಬೇಕಿದೆ. ಅವರು ಕೂಡ ಈ ಸೌಲಭ್ಯಗಳಿಗೆ ಅರ್ಹರಿದ್ದಾರೆ ಎಂದು ಹೈಕೋರ್ಟ್ ಆದೇಶಿಸಿದೆ.

ದಿನಗೂಲಿ ನೌಕರರಿಗೆ "ರಾಜ್ಯ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆ-2012" ಅಡಿ ಲಭ್ಯವಾಗುತ್ತಿದ್ದ ಶೇ.100ರಷ್ಟು ತುಟ್ಟಿ ಭತ್ಯೆ ಹಾಗೂ ಗಳಿಕೆ ರಜೆಯನ್ನು ಕಡಿತಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ದಿನಗೂಲಿ ನೌಕರರ ಒಕ್ಕೂಟ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಕಾಯ್ದೆಯ ನಿಯಮಗಳ ಪ್ರಕಾರ ಸರ್ಕಾರಿ ನೌಕರ ರೀತಿಯಲ್ಲೇ ದಿನಗೂಲಿ ನೌಕರರು ಕೂಡ ತುಟ್ಟಿ ಭತ್ಯೆ ಹಾಗೂ ಗಳಿಕೆ ರಜೆ ಪಡೆಯಲು ಅರ್ಹತೆ ಹೊಂದಿದ್ದಾರೆ. ಈ ಸೌಲಭ್ಯವನ್ನು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸುವ ಮೂಲಕ ಕಡಿತ ಮಾಡಲು ಸಾಧ್ಯವಿಲ್ಲ. ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿ ಆದೇಶ ಮತ್ತು ಸುತ್ತೋಲೆ ಹೊರಡಿಸಲು ಸಾಧ್ಯವಿಲ್ಲ. ಕಾಯ್ದೆಯ ನಿಯಮ ಮೀರಿ ಹೊರಡಿಸಿರುವ ಆದೇಶವನ್ನು ಸಮ್ಮತಿಸಿದರೆ, "ಬಾಲವೇ ನಾಯಿಯನ್ನು ಅಲ್ಲಾಡಿಸಿದಂತಾಗುತ್ತದೆ ಹೊರತು ನಾಯಿ ಬಾಲವನ್ನು ಅಲ್ಲಾಡಿಸಿದಂತಾಗುವುದಿಲ್ಲ' ಎಂದು ಸರ್ಕಾರದ ಕ್ರಮವನ್ನು ಟೀಕಿಸಿದೆ.

ಅಲ್ಲದೆ, ರಾಜ್ಯ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆಯನ್ನು ಸುದೀರ್ಘ ಕಾಲ ಸರ್ಕಾರಿ ಸೇವೆ ಸಲ್ಲಿಸುವ ದಿನಗೂಲಿ ನೌಕರರಿಗೆ ಉತ್ತಮ ವೇತನ ಹಾಗೂ ಸಾಮಾಜಿಕ ಭದ್ರತೆ ಕಲ್ಪಿಸಲೆಂದೇ ಜಾರಿಗೊಳಿಸಲಾಗಿದೆ. ಹೀಗಾಗಿ, ಅವನ್ನು ಕಡಿತಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ, ತುಟ್ಟಿ ಭತ್ಯೆಯನ್ನು ಶೇ.90ಕ್ಕೆ ಸೀಮಿತಗೊಳಿಸಿ ಹಾಗೂ 30 ದಿನಗಳ ಗಳಿಕೆ ರಜೆ ಸ್ಥಗಿತಗೊಳಿಸಿ ರಾಜ್ಯ ಸರ್ಕಾರ 2020ರ ಜನವರಿ 10 ಮತ್ತು ಜುಲೈ 12ರಂದು ಹೊರಡಿಸಿರುವ ಸುತ್ತೋಲೆಗಳು ಕಾಯ್ದೆಗೆ ವಿರುದ್ಧವಾಗಿದ್ದು, ರದ್ದುಗೊಳಿಸಲಾಗುವುದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಅದೇ ರೀತಿ, ದಿನಗೂಲಿ ನೌಕರರು ಕಾಯ್ದೆಯ ಪ್ರಕಾರ ಕಾಲ ಕಾಲಕ್ಕೆ ಸರ್ಕಾರ ನಿಗದಿಪಡಿಸಿದ ಎಕ್ಸ್ಗ್ರೇಷಿಯಾ ಪಡೆಯಲು ಅರ್ಹರಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಓದಿ: ಕಲ್ಯಾಣ ಮಂಟಪ ಪ್ರಕರಣಕ್ಕೆ ಕ್ಲೀನ್​​​ಚಿಟ್​​: ಚಾಲೆಂಜ್ ಗೊತ್ತಿದೆಯಾ ಎಂದು ಸಿಂಧೂರಿ ವಿರುದ್ದ ಸಾ ರಾ ಮಹೇಶ್​ ಗುಡುಗು

Last Updated : Jul 23, 2022, 3:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.