ಬೆಂಗಳೂರು : ಪಾಲಿಕೆಯ ತ್ಯಾಜ್ಯ ನಿರ್ವಹಣೆ ಘಟಕ ಮುಂದಿನ 45 ದಿನಗಳಲ್ಲಿ ನಗರದಲ್ಲಿ ಹಲವು ಭಾಗಗಳಲ್ಲಿ ಬ್ಲಾಕ್ ಸ್ಟಾಟ್‌ಗಳನ್ನು ಗುರುತಿಸಿ, ಅದನ್ನು ಸ್ವಚ್ಛಗೊಳಿಸುವ ಮೂಲಕ ಸುಂದರ ಬೆಂಗಳೂರು ನಿರ್ಮಾಣ ಕಾರ್ಯದಲ್ಲಿ ದಾಪುಗಾಲನ್ನಿಟ್ಟಿದೆ.

ದಿ ಹಂಗ್ಲಿ ಇಂಡಿಯನ್ ಸಹಯೋಗದೊಂದಿಗೆ ತ್ಯಾಜ್ಯ ನಿರ್ವಹಣೆ ಘಟಕ ಫೆ.15ರಿಂದ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲು ಆರಂಭಿಸಿದೆ. ಮಾ. 31ರ ವೇಳೆಗೆ ನಗರದ 100 ಕಡೆಗಳಲ್ಲಿ ಬ್ಲಾಕ್ ಸ್ಟಾಟ್‌ಗಳನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಲಾಗಿದೆ.

ನಗರದ ಮುಖ್ಯ ರಸ್ತೆಗಳ ಪ್ರಮುಖ ಜಂಕ್ಷನ್‌ಗಳಲ್ಲಿ ಇದ್ದ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ, ಅದನ್ನು ನಿಗದಿತ ಸಮಯದಲ್ಲಿ ಸ್ವಚ್ಛಗೊಳಿಸಿದ್ದೇವೆ. ನಾಗರಿಕರು ನಗರದ ಅಂದ ಹೆಚ್ಚಿಸುವ ನಿಟ್ಟಿನಲ್ಲಿ ಅಭಿಯಾನಕ್ಕೆ ಸಾಥ್ ನೀಡಬೇಕು. ಯಾವುದೇ ಕಾರಣಕ್ಕೂ ಸ್ವಚ್ಛಗೊಳಿಸಲಾದ ಬ್ಲಾಕ್ ಸ್ಪಾಟ್‌ಗಳಲ್ಲಿ ಕಸ ಸುರಿಯಬಾರದು.
ಒಂದು ವೇಳೆ ತ್ಯಾಜ್ಯ ಹಾಕಿದರೆ ಅಂಥವರಿಗೆ ದಂಡ ವಿಧಿಸಲಾಗುತ್ತದೆ. ಅಭಿಯಾನದ ಭಾಗವಾಗಿ ಮುಂದಿನ ವರ್ಷದ ಏಪ್ರಿಲ್ ವೇಳೆಗೆ ನಗರದ 500 ಬ್ಲಾಕ್ ಸ್ಟಾಟ್‌ಗಳನ್ನು ತೆರವುಗೊಳಿಸಿ, ಸ್ವಚ್ಛಗೊಳಿಸುವ ಗುರಿ ಹೊಂದಿದ್ದೇವೆ ಎಂದು 'ದಿ ಅಗ್ಲಿ ಇಂಡಿಯನ್' ಸಂಸ್ಥೆಯ ಸ್ವಯಂ ಸೇವಕರು ತಿಳಿಸಿದ್ದಾರೆ.

ಯಲಹಂಕ ವಲಯದ 11, ಪಶ್ಚಿಮ ವಿಭಾಗ 20, ದಕ್ಷಿಣ 21, ಆರ್‌ಆರ್‌ನಗರ 3, ಮಹದೇವಪುರ 9, ಪೂರ್ವ 26, ದಾಸರಹಳ್ಳಿ 2, ಬೊಮ್ಮನಹಳ್ಳಿ 10 ಕಡೆಗಳಲ್ಲಿ ಬ್ಲಾಕ್ ಸ್ಪಾಟ್ ತೆರವು ಕಾರ್ಯಾಚರಣೆ ನಡೆಸಲಾಗಿದೆ.