ETV Bharat / state

10 ಸಾವಿರ ವರ್ಷದ ಹಳೆಯ ತ್ರಿಶೂಲ, 3 ಸಾವಿರ ವರ್ಷದ ವಜ್ರಾಯುಧ ಪತ್ತೆ: ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅನಾವರಣ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಫಿಲಿಪ್ಪೀನ್ಸ್ ದೇಶದಲ್ಲಿ ಗಣಿಗಾರಿಕೆ ಮಾಡುವಾಗ ಪುರಾತನ ತ್ರಿಶೂಲ ಮತ್ತು ವಜ್ರಾಯುಧ ಪತ್ತೆ ಆಗಿತ್ತು.

ತ್ರಿಶೂಲ ಮತ್ತು ವಜ್ರಾಯುಧ ಪತ್ತೆ
ತ್ರಿಶೂಲ ಮತ್ತು ವಜ್ರಾಯುಧ ಪತ್ತೆ
author img

By

Published : Jun 8, 2023, 10:11 PM IST

ಬೆಂಗಳೂರು : ಅಂದಾಜು ಹತ್ತು ಸಾವಿರ ವರ್ಷಗಳ ಹಳೆಯದಾದ ಶಿವನ ತ್ರಿಶೂಲ ಮತ್ತು 3 ಸಾವಿರ ವರ್ಷಗಳಷ್ಟು ಪುರಾತನವಾದ ಇಂಧ್ರನ ವಜ್ರಾಯುಧ ಸಿಕ್ಕಿದೆ. 2015ರಲ್ಲಿ ಗಣಿ ಉದ್ಯಮಿ ಹಾಗು ಸಂಶೋಧಕ ಸಯ್ಯದ್ ಸಮೀರ್ ಹುಸೇನ್ ಅವರು ಫಿಲಿಪ್ಪೀನ್ಸ್ ದೇಶದಲ್ಲಿ ಗಣಿಗಾರಿಕೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಭೂ ಗರ್ಭದಲ್ಲಿ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ಮೌಲ್ಯವುಳ್ಳ ಅತ್ಯಂತ ಅಪರೂಪದ, ಅಮೂಲ್ಯ ಮತ್ತು ಭಾರತೀಯ ಪರಂಪರೆಯ ಈ ವಸ್ತುಗಳು ದೊರೆತಿದ್ದವು. ಇವು ದೈವಿಕ ಸ್ವರೂಪದ ಮೌಲ್ಯಗಳನ್ನು ಒಳಗೊಂಡಿವೆ.

ಇದೇ ಮೊದಲ ಬಾರಿಗೆ ನಗರದ ಪ್ರೆಸ್‌ಕ್ಲಬ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೂರುವರೆ ಅಡಿ ಎತ್ತರದ ತ್ರಿಶೂಲ ಮತ್ತು ಒಂದೂವರೆ ಅಡಿ ಉದ್ದದ ವಜ್ರಾಯುಧಗಳನ್ನು ಸಾರ್ವಜನಿಕರಿಗೆ ಸಯ್ಯದ್ ಸಮೀರ್ ಹುಸೇನ್ ಪ್ರದರ್ಶಿಸಿದರು. ವಜ್ರಾಯುಧ ಜಗತ್ತಿನ ಅತ್ಯಂತ ಶಕ್ತಿಶಾಲಿ ಅಸ್ತ್ರ. ಇದನ್ನು ಇಂಧ್ರ ಬಳಸುತ್ತಿದ್ದ. ತ್ರಿಶೂಲ ಶಿವನಿಗೆ ಪ್ರಿಯವಾದ ವಸ್ತು. ಇವುಗಳ ಬಗ್ಗೆ 20ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ದೈವಿಕ ವಸ್ತುಗಳ ಬಗ್ಗೆ ವ್ಯಾಪಕ ಸಂಶೋಧನೆ ನಡೆಯುತ್ತಿದ್ದು, ಭಾರತೀಯ ಪರಂಪರೆಗೆ ಅತ್ಯಂತ ಅಮೂಲ್ಯ ವಸ್ತುಗಳು ಎಂದು ಭಾರತೀಯ ಪುರಾತತ್ವ ಇಲಾಖೆ, ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗು ದೆಹಲಿಯ ಭಾರತೀಯ ವಸ್ತುಸಂಗ್ರಹಾಲಯ ಮಾನ್ಯತೆ ನೀಡಿದೆ ಎಂದು ಅವರು ತಿಳಿಸಿದರು.

3 ಸಾವಿರ ವರ್ಷದ ವಜ್ರಾಯುಧ
3 ಸಾವಿರ ವರ್ಷ ಹಳೆಯ ವಜ್ರಾಯುಧ

ಅಪರೂಪದಲ್ಲೇ ಅಪರೂಪದ ಈ ವಸ್ತುಗಳನ್ನು ಫಿಲಿಪ್ಪೀನ್ಸ್‌ನಿಂದ ಜೋಪಾನವಾಗಿ ಭಾರತಕ್ಕೆ ತಂದು ಸಂಬಂಧಪಟ್ಟ ಸಚಿವಾಲಯಗಳ ಅನುಮತಿಯೊಂದಿಗೆ ಸಂರಕ್ಷಿಸಲಾಗಿದೆ. ಇದನ್ನು ದೇಶದ ಜನರ ಎದುರಿಗೆ ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಗುತ್ತಿದೆ. ಪುರಾತತ್ವ ಇಲಾಖೆಯ ಜೊತೆಗೆ ಈಗಾಗಲೇ ಹಲವಾರು ಹಿಂದೂ ಧಾರ್ಮಿಕ ಸಂಸ್ಥೆಗಳು, ಟ್ರಸ್ಟ್‌ಗಳ ಮುಖ್ಯಸ್ಥರು ವಸ್ತುಗಳನ್ನು ಪರಿವೀಕ್ಷಿಸಿ ಇವು ಭಾರತೀಯ ಪರಂಪರೆಗೆ ಅತ್ಯಂತ ಅಗತ್ಯ ವಸ್ತುಗಳೆಂದು ಋಜುವಾತುಪಡಿಸಿದ್ದಾರೆ. ಹಲವಾರು ರಾಜಕೀಯ ಮುತ್ಸದ್ದಿಗಳೂ ಸಹ ಈ ವಸ್ತುಗಳು ಮತ್ತು ಮಹತ್ವದ ಬಗ್ಗೆ ಮುಕ್ತ ಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಇವು ಮೌಲ್ಯ ಕಟ್ಟಲಾಗದ ಸರ್ವಶ್ರೇಷ್ಠ ನಿಧಿಯಾಗಿದ್ದು, ಇಂತಹ ವಸ್ತುಗಳು ಭಾರತವಷ್ಟೇ ಅಲ್ಲದೇ ಇಡೀ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ ಎಂಬುದು ಸತತ 7 ವರ್ಷಗಳ ಕಾಲ ಕೈಗೊಂಡ ಸಂಶೋಧನೆಯಿಂದ ಋಜುವಾತಾಗಿದೆ. ಇವು ಹಿಂದೂ ಪುರಾಣದೊಂದಿಗೆ ಸಂಬಂಧ ಬೆಸೆದುಕೊಂಡ ವಸ್ತುಗಳು ಎಂಬುದನ್ನು ಸಾಕಷ್ಟು ಮಂದಿ ಹಿಂದೂ ಪಂಡಿತರು ಹೇಳಿರುವುದಾಗಿ ಸಯ್ಯದ್ ಸಮೀರ್ ಹುಸೇನ್ ಮಾಹಿತಿ ನೀಡಿದರು.

2012ರಿಂದಲೂ ಫಿಲಿಪ್ಪೀನ್ಸ್‌ನಲ್ಲಿ ಕಬ್ಬಿಣ ಮತ್ತು ಚಿನ್ನದ ಗಣಿಗಾರಿಕೆ ನಡೆಸುತ್ತಿದ್ದೇನೆ. 2015 ರ ಮೇ 5 ರಂದು ಅಪರೂಪದ ವಸ್ತುಗಳು ಒಟ್ಟಿಗೆ ದೊರೆತಿವೆ. ಇವುಗಳನ್ನು ನೀರಿನಿಂದ ತೊಳೆದು ಪರಿಶೀಲಿಸಿದಾಗ ನಿಜಕ್ಕೂ ಅಚ್ಚರಿಯಾಯಿತು. ನಮ್ಮ ಗಣಿ ಪ್ರದೇಶ ಬೆಟ್ಟಗುಟ್ಟಗಳಿಂದ ಕೂಡಿದ ದುರ್ಗಮ ತಾಣವಾಗಿದ್ದು, ಒಂದು ಕಾಲದಲ್ಲಿ ಇದು ಹಿಮಾಲಯ ಪರ್ವತಶ್ರೇಣಿಗೆ ಸೇರಿತ್ತು ಎಂಬ ಪ್ರತೀತಿ ಇದೆ. ಸುಮಾರು 200 ಅಡಿ ಆಳದಲ್ಲಿ ದೊರೆತ ಈ ನಿಧಿಯನ್ನು ನಂತರ ಭಾರತಕ್ಕೆ ತಂದು ಭಾರತೀಯ ಪುರಾತತ್ವ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತೋರಿಸಿ ಅಲ್ಲಿ ನೋಂದಣಿ ಮಾಡಿಸಿದ್ದೇನೆ.

10 ಸಾವಿರ ವರ್ಷದ ಹಳೆಯ ತ್ರಿಶೂಲ
10 ಸಾವಿರ ವರ್ಷದಷ್ಟು ಹಳೆಯ ತ್ರಿಶೂಲ

ಕೇಂದ್ರ ಸಂಸ್ಕೃತಿ ಸಚಿವಾಲಯ, ದೆಹಲಿಯ ಭಾರತೀಯ ವಸ್ತುಸಂಗ್ರಹಾಲಯಗಳು ಮಾನ್ಯತೆ ನೀಡಿವೆ. ನಂತರ ಮುಂಬೈನಲ್ಲಿರುವ ಪ್ರಾಚೀನ ವಸ್ತುಗಳ ವಿಭಾಗದಲ್ಲಿಯೂ ಸಹ ನೋಂದಣಿ ಮಾಡಿಸಲಾಗಿದೆ ಎಂದರು. ಭಾರತೀಯ ಪುರಾತತ್ವ ಇಲಾಖೆ ಒಪ್ಪಿಗೆ ಪಡೆದು ಈ ವಸ್ತುಗಳನ್ನು ಇದೀಗ ಜನರ ಬಳಿ ತಂದಿದ್ದು, ದೇಶದ ಜನತೆ, ಧಾರ್ಮಿಕ ಪಂಡಿತರು, ಪ್ರಮುಖ ಮುಖಂಡರ ಸಲಹೆ ಪಡೆದು ಮುಂದೇನು ಮಾಡಬೇಕು ಎನ್ನುವುದರ ಕುರಿತು ನಿರ್ಧರಿಸಲಾಗುವುದು ಎಂದು ಸಯ್ಯದ್ ಸಮೀರ್ ಹುಸೇನ್ ಹೇಳಿದರು.

ಇದನ್ನೂ ಓದಿ : ಜ್ಞಾನವಾಪಿ ಮಸೀದಿ ವಿವಾದ: ಶಿವಲಿಂಗದ ಕಾರ್ಬನ್ ಡೇಟಿಂಗ್ ಸೇರಿ ವೈಜ್ಞಾನಿಕ ಸಮೀಕ್ಷೆ ಮುಂದೂಡಿದ ಸುಪ್ರೀಂ ಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.