ಬೆಂಗಳೂರು: ನಗರದ ಒಂದೇ ರಸ್ತೆಯ ಮೂರು ಮನೆಗಳ ಸದಸ್ಯರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇಲ್ಲಿನ ಬನಶಂಕರಿ ಮೊದಲ ಹಂತದ ಶ್ರೀನಿವಾಸನಗರದ 6ನೇ ಅಡ್ಡರಸ್ತೆಯಲ್ಲಿರುವ ಮನೆಯ ಸದಸ್ಯರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಜನತೆ ಆತಂಕಕ್ಕೆ ಒಳಗಾಗಿದ್ದಾರೆ.
ಶ್ರೀನಿವಾಸನಗರದ ಮೂರು ಮನೆಗಳಿಂದ ಒಟ್ಟು 10 ಮಂದಿಗೆ ಕೊರೊನಾ ಸೋಂಕು ಕಂಡು ಬಂದಿದೆ. ಮೂರು ಮನೆಗಳನ್ನು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಆಂಧ್ರದಲ್ಲಿ ಕಾರ್ಯಕ್ರಮಕ್ಕೆಂದು ಹೋಗಿದ್ದ ಕುಟುಂಬಸ್ಥರಿಗೆ ಸೋಂಕು ತಗುಲಿರುವ ಶಂಕೆ ಇದೆ. ಬಳಿಕ ಪಕ್ಕದ ಮನೆಯವರಿಗೂ ಸೋಂಕು ತಗುಲಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.
ನಂತರ ಪಕ್ಕದ ಮತ್ತೊಂದು ಮನೆಗೂ ಸೋಂಕು ತಗುಲಿದೆ ಎಂದಿರುವ ಪಾಲಿಕೆ ಅಧಿಕಾರಿಗಳು ಇಡೀ ರಸ್ತೆಯಲ್ಲಿ ಹೆಲ್ತ್ ಸರ್ವೇ ನಡೆಸಿ ಕೋವಿಡ್ ಟೆಸ್ಟ್ ನಡೆಸಲು ಮೂಂದಾಗಿದ್ದಾರೆ.
ಓದಿ: ಪಾರ್ಟಿಗೆ ಕರೆದು ಸ್ನೇಹಿತನನ್ನೇ ಹತ್ಯೆ ಮಾಡಿ ಶವ ಹೂತಿಟ್ಟರು.. ಮೈಸೂರಲ್ಲಿ ಆರೋಪಿಗಳು ಅರೆಸ್ಟ್