ETV Bharat / state

ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ 10 ಮಂದಿ ಆರೋಪಿಗಳು ಅರೆಸ್ಟ್​ - cricket betting in t 20 match

ಇಂಡಿಯಾ ಹಾಗೂ ನ್ಯೂಜಿಲ್ಯಾಂಡ್ ನಡುವೆ ನಡೆದ ನಾಲ್ಕನೇ ಟಿ-ಟ್ವೆಂಟಿ ಪಂದ್ಯದ ವೇಳೆ ನಗರದಲ್ಲಿ‌ ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ 10 ಮಂದಿ ದಂಧೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ ನಗದು ಹಾಗೂ 10 ಮೊಬೈಲ್​ಗಳನ್ನು ವಶಪಡಿಸಿಕೊಂಡಿದ್ದಾರೆ.

10 gamblers arrested after cricket betting in Bangalore!
ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ 10 ಮಂದಿ ಜೂಜುಕೋರರು ಬಂಧನ!
author img

By

Published : Feb 1, 2020, 12:36 PM IST

ಬೆಂಗಳೂರು: ಶುಕ್ರವಾರ ನಡೆದ ಇಂಡಿಯಾ ಹಾಗೂ ನ್ಯೂಜಿಲ್ಯಾಂಡ್​ ನಡುವೆ ನಡೆದ ನಾಲ್ಕನೇ ಟಿ-ಟ್ವೆಂಟಿ ಪಂದ್ಯದ ವೇಳೆ ನಗರದಲ್ಲಿ‌ ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ 10 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚೇತನ್, ಅರವಿಂದ್, ನಿತಿನ್, ಮಹಮ್ಮದ್ ಫಹಾದ್, ನವೀನ್, ಲಕ್ಷ್ಮಣ್ ದಾಸ್, ಪ್ರತೀಕ್, ಪವನ್, ಕಿಶನ್ ಹಾಗೂ ವೈಭವ್ ಬಂಧಿತರು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕ್ಲಬ್​ವೊಂದರಲ್ಲಿ ಪಂದ್ಯದ ಸೋಲು-ಗೆಲುವಿನ ಬಗ್ಗೆ ಇವರು ಜೂಜಾಟ ನಡೆಸುತ್ತಿದ್ದರು ಎನ್ನಲಾಗ್ತಿದೆ.

ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ವಿಶೇಷ ವಿಚಾರಣಾದಳ ವಿಭಾಗದ ಎಸಿಪಿ ವಿರುಪಾಕ್ಷಪ್ಪ ಅವರ ನೇತೃತ್ವದ ತಂಡವು ಖಚಿತ ಮಾಹಿತಿ ಹಿನ್ನೆಲೆಯಲ್ಲಿ‌ ದಾಳಿ ನಡೆಸಿ ಹತ್ತು ಮಂದಿ‌ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ 87,200 ನಗದು ಹಾಗೂ 10 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಸದ್ಯ ಈ ಸಂಬಂಧ ಆರೋಪಿಗಳ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.