ETV Bharat / state

ರಾಜಧಾನಿಯಲ್ಲಿ ಓಲಾ, ಉಬರ್ ಕ್ಯಾಬ್  ಆಟೋ ಸೇವೆಯಿಂದ ನಿತ್ಯ 10 ಕೋಟಿ ಆದಾಯ - ಓಲಾ ಉಬರ್​ ಆ್ಯಪ್​ ಕಂಪನಿಗಳ ಸೇವೆ ಸ್ಥಗಿತ

ಓಲಾ ಉಬರ್ ಆ್ಯಪ್ ಕಂಪನಿಗಳು ಬೆಂಗಳೂರು ಒಂದರಲ್ಲೇ ನಿತ್ಯ 10 ಕೋಟಿ ರೂ. ಆದಾಯ ಗಳಿಸುತ್ತಿವೆ ಎಂದು ಆಟೋ ಚಾಲಕರ ಯೂನಿಯನ್‌ಗಳು ಆರೋಪಿಸಿವೆ.

KN_BNG_04_O
ಓಲಾ ಉಬರ್
author img

By

Published : Oct 13, 2022, 6:26 PM IST

ಬೆಂಗಳೂರು: ಪರವಾನಗಿ ಪಡೆಯದೇ ಅನಧಿಕೃತವಾಗಿ ಆಟೋರಿಕ್ಷಾ ಸೇವೆ ನೀಡುತ್ತಿರುವ ಓಲಾ, ಉಬರ್ ಆ್ಯಪ್ ಕಂಪನಿಗಳು ಇದರಿಂದಲೇ ರಾಜಧಾನಿಯಲ್ಲಿ ನಿತ್ಯ ಅಂದಾಜು ಸುಮಾರು 10 ಕೋಟಿ ರೂಪಾಯಿ ಆದಾಯ ಗಳಿಸುತ್ತಿವೆ ಎಂದು ಆಟೋ ಚಾಲಕರ ಯೂನಿಯನ್‌ಗಳು ಆರೋಪಿಸುತ್ತಿವೆ.

ಕ್ಯಾಬ್ ಸೇವೆ ನೀಡಲು ಈ ಕಂಪನಿಗಳು ಪಡೆದಿರುವ ಪರವಾನಗಿ ಕೂಡ ಮುಗಿದು ಒಂದು ವರ್ಷ ಕಳೆದಿದೆ. ಈ ಕ್ಯಾಬ್ ಸೇವೆಯಿಂದಲೇ ನಿತ್ಯ ಕೋಟಿಗಟ್ಟಲೆ ಆದಾಯ ಪಡೆಯುತ್ತಿದ್ದಾರೆ. ಈ ಮೂಲಕ ಅನಧಿಕೃತವಾಗಿ ಉದ್ಯಮ ನಡೆಸುತ್ತಾ, ಚಾಲಕರು ಮತ್ತು ಸಾರ್ವಜನಿಕರಿಗೆ ಪ್ರಯಾಣ ದರ ವಂಚನೆ ಮಾಡುತ್ತಿವೆ ಎಂದಿವೆ.

ಸದ್ಯ ಓಲಾ ಮತ್ತು ಉಬರ್ ಆ್ಯಪ್ ಸಂಸ್ಥೆಗಳು ಆಟೋರಿಕ್ಷಾ ಚಾಲಕರಿಂದ ಪ್ರಯಾಣದ ದರದಲ್ಲಿ ಶೇ.30 ರಷ್ಟು ಕಮಿಷನ್, ನಿತ್ಯ 20 ರೂಪಾಯಿ ಪ್ಲಾಟ್‌ಫಾರಂ ಶುಲ್ಕ ಹಾಗೂ ಸರ್‌ಚಾರ್ಜ್ (ದಟ್ಟಣೆ/ಬೇಡಿಕೆ ಅವಧಿಯ ಹೆಚ್ಚುವರಿ ದರ) ಮೊತ್ತ ಪಡೆಯುತ್ತವೆ. ನಿತ್ಯ 1 ಆಟೋರಿಕ್ಷಾ ಚಾಲಕ 10 ಟ್ರಿಪ್ ಮಾಡಬೇಕು.

ಪ್ರೋತ್ಸಾಹ ಧನ ಬೇಕೆಂದರೆ 20 ಟ್ರಿಪ್ ಮಾಡಬೇಕು. ಈ ಮೂಲಕ ಒಂದು ಆಟೋರಿಕ್ಷಾದಿಂದ ಕನಿಷ್ಠ 500 ರಿಂದ ಗರಿಷ್ಠ 800 ಆದಾಯ ಪಡೆಯುತ್ತಿದೆ. ಸದ್ಯ ನಗರದಲ್ಲಿ 1.1 ಲಕ್ಷ ಆಟೋಗಳು ಓಲಾ ಮತ್ತು ಉಬರ್ ಜತೆ ಕಾರ್ಯಾಚರಣೆ ನಡೆಸುತ್ತಿವೆ. ಈ ಲೆಕ್ಕಚಾರದಂತೆ ನಿತ್ಯ ಆಟೋರಿಕ್ಷಾ ಸೇವೆಯಿಂದಲೇ ಈ ಕಂಪನಿಗಳಿಗೆ 5 ರಿಂದ 6 ಕೋಟಿ ರೂಪಾಯಿ ಆದಾಯ ಬರುತ್ತಿದೆ ಎಂಬುದು ಆಟೋಚಾಲಕ ಯೂನಿಯನ್‌ಗಳ ವಿವರಣೆಯಾಗಿದೆ.

ಕ್ಯಾಬ್‌ಗಳಿಂದ 4 ಕೊಟಿಗೂ ಅಧಿಕ ಆದಾಯ: ನಗರದಲ್ಲಿ 40 ಸಾವಿರ ಕಾರುಗಳು ಓಲಾ ಮತ್ತು ಉಬರ್ ಜೊತೆ ಕಾರ್ಯಾಚರಣೆ ನಡೆಸುತ್ತಿವೆ. ಕ್ಯಾಬ್‌ಗಳಿಗೆ ಸರ್ಕಾರ ನಿಗದಿ ಪಡಿಸಿದಂತೆ ಕನಿಷ್ಠ ದರ ಪ್ರತಿ ಕಿ.ಮೀ ಗೆ 21 ರೂಪಾಯಿ ನೀಡುತ್ತಿದ್ದಾರೆ. ಉಳಿದಂತೆ ಹಣವನ್ನು ಕಂಪನಿಗಳೇ ಉಳಿಸಿಕೊಳ್ಳುತ್ತಿವೆ. ಪ್ರತಿ ಕ್ಯಾಬ್‌ಗಳಿಂದ ಕಮಿಷನ್, ಸರ್‌ಜಾರ್ಜ್ ಸೇರಿ ಕನಿಷ್ಠ 1,000 ರೂಪಾಯಿ ಆದಾಯವನ್ನು ಆ್ಯಪ್ ಕಂಪನಿಗಳು ಪಡೆಯುತ್ತಿವೆ. ಈ ಲೆಕ್ಕಾಚಾರದಂತೆ 40 ಸಾವಿರ ಕ್ಯಾಬ್‌ಗಳಿಂದ ನಿತ್ಯ 4 ಕೋಟಿ ರೂ ಗಿಂತಲೂ ಅಧಿಕ ಆದಾಯ ಆ್ಯಪ್‌ಗಳ ಪಾಲಾಗುತ್ತಿದೆ ಎಂದು ಓಲಾ, ಉಬರ್ ಅಸೋಸಿಯೇನ್ ಪದಾಧಿಕಾರಿಗಳು ಹೇಳುತ್ತಿದ್ದಾರೆ.

ಸಾರ್ವಜನಿಕರಿಗೆ ಮಾತ್ರ ದಂಡ, ಜಪ್ತಿ, ಜೈಲು: ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ನಿಯಮ 2016ರ ಪ್ರಕಾರ ರಾಜ್ಯದಲ್ಲಿ ಆ್ಯಪ್ ಆಧಾರಿತ (ಅಗ್ರಿಗೇಟರ್ಸ್) ಯಾವುದೇ ಆಟೋರಿಕ್ಷಾ ಸೇವೆಯ ಅನುಮತಿ ಇಲ್ಲ. ಆದರೂ ಓಲಾ, ಉಬರ್ ಆಟೋ ಸೇವೆ ಲಭ್ಯವಿದೆ. ಸಾರಿಗೆ ಇಲಾಖೆಯು, ಸಾರ್ವಜನಿಕರು ನಿಯಮ ಉಲ್ಲಂಘಿಸಿದರೆ ಸಾವಿರಾರು ರೂಪಾಯಿ ದಂಡ ಹಾಕಿ ವಾಹನ ಜಪ್ತಿ, ಜೈಲು ಶಿಕ್ಷೆಯಂತಹ ಕ್ರಮಕೈಗೊಳ್ಳುತ್ತದೆ. ಆದರೆ, ಪರವಾನಗಿ ಪಡೆಯದೇ ಆಟೋರಿಕ್ಷಾ ಬಳಸಿಕೊಂಡು ಉದ್ಯಮ ನಡೆಸುತ್ತಾ ಚಾಲಕರು ಮತ್ತು ಸಾರ್ವಜನಿಕರಿಗೆ ಪ್ರಯಾಣ ದರ ವಂಚನೆ ಮಾಡಲಾಗುತ್ತಿದೆ.

ನಿತ್ಯ ಕೋಟ್ಯಾಂತರ ಆದಾಯಗಳಿಸುತ್ತಿರುವ ಓಲಾ, ಉಬರ್ ಕಂಪನಿಗಳ ವಿರುದ್ಧ ಸಾರಿಗೆ ಇಲಾಖೆ ಅಥವಾ ರಾಜ್ಯ ಸರ್ಕಾರ ಯಾವುದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳತ್ತಿಲ್ಲ. ಅಕ್ರಮ ಆದಾಯಕ್ಕೆ ನೆರವು ನಿಡುತ್ತಿವೆ ಎಂದು ಸಾರ್ವಜನಿಕರು, ಆಟೋಚಾಲಕರ ಸಂಘಗಳು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಓಲಾ, ಉಬರ್, ರಾಪಿಡೊ ಕಂಪನಿಗಳ ಆ್ಯಪ್ ಆಟೋ ಸೇವೆ ಬ್ಯಾನ್​.. ಓಡಿಸಿದರೆ ದಂಡ ಎಷ್ಟು ಗೊತ್ತಾ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.