ETV Bharat / state

₹1 ಲಕ್ಷ ಹಣ, ಸ್ಕೂಟರ್ ಕಳೆದುಕೊಂಡ ಡೆಲಿವರಿ ಬಾಯ್‌: ಸಿಸಿಟಿವಿಯಲ್ಲಿ ಖದೀಮನ ಕೃತ್ಯ ಸೆರೆ - ಡೆಲಿವರಿ ಬಾಯ್ ಸ್ಕೂಟರ್ ಕಳ್ಳತನ

ಹೊಂಚು ಹಾಕಿ ಕುಳಿತ ಖದೀಮನೊಬ್ಬ ಸ್ಕೂಟರ್ ಮತ್ತು ಅದರಲ್ಲಿಟ್ಟಿದ್ದ 1 ಲಕ್ಷ ರೂಪಾಯಿ ಹಣವನ್ನು ಕದ್ದೊಯ್ದಿದ್ದಾನೆ.

Delivery boy scooter theft
ಖದೀಮ ಸ್ಕೂಟರ್ ಎಗರಿಸುವ ಸಿಸಿಟಿವಿ ದೃಶ್ಯ
author img

By

Published : Jun 23, 2021, 10:37 AM IST

ಬೆಂಗಳೂರು: ರಾಜಧಾನಿಯಲ್ಲಿ ಕೋವಿಡ್ ಅನ್‌ಲಾಕ್ ಬಳಿಕ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ದ್ವಾರಕಾನಗರದಲ್ಲಿ ಮತ್ತೊಂದು ಘಟನೆ ನಡೆದಿದೆ.

ಖದೀಮ ಸ್ಕೂಟರ್ ಎಗರಿಸುವ ಸಿಸಿಟಿವಿ ದೃಶ್ಯ

ತಡರಾತ್ರಿ ಫುಡ್ ಡೆಲಿವರಿ ಬಾಯ್​ ಒಬ್ಬ ಸಂಗ್ರಹಿಸಿದ ಹಣವನ್ನು ತನ್ನ ಡಿಯೋ ಸ್ಕೂಟರ್​ನಲ್ಲಿ ಇರಿಸಿದ್ದ. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಕಳ್ಳನೊಬ್ಬ ಗಾಡಿ ಸಮೇತ ಎಸ್ಕೇಪ್ ಆಗಿದ್ದಾನೆ. ಖದೀಮನ ಖತರ್ನಾಕ್ ಕೆಲಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ನಗ್ನ ಸ್ಥಿತಿಯಲ್ಲಿ ಯುವಕನ ಶವ ಪತ್ತೆ: ಸ್ನೇಹಿತರ ಪಾರ್ಟಿಯಲ್ಲಿ ಬಿತ್ತಾ ಹೆಣ?

ಡೆಲಿವರಿ ಬಾಯ್​ ಡಿಯೊ ಗಾಡಿಯಲ್ಲಿ 1 ಲಕ್ಷ ರೂಪಾಯಿ ಹಣ ಇಟ್ಟಿದ್ದ ವೇಳೆ ಇದನ್ನೇ ಗಮನಿಸುತ್ತಿದ್ದ ಕಳ್ಳ, ಹಣ ಮತ್ತು ಗಾಡಿಯನ್ನು ಕದ್ದೊಯ್ದಿದ್ದಾನೆ. ಘಟನೆ ಸಂಬಂಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಸ್ಕೂಟರ್​ ಕದ್ದೊಯ್ಯುವ ಸಿಸಿಟಿವಿ ಫುಟೇಜ್ ಅನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಆತನ ಬಂಧನಕ್ಕಾಗಿ ಶೋಧ ಆರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.