ನೆಲಮಂಗಲ: ಎರಡು ದಿನದ ಹಿಂದೆಯಷ್ಟೇ ನಿಶ್ಚಿತಾರ್ಥವಾದ ಯುವತಿ ಸಂಶಯಾಸ್ಪದ ರೀತಿಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಹೊಟ್ಟೆನೋವು ತಾಳಲಾರದೇ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆದರೆ ಯುವತಿ ಸಾವು ಹಲವು ಸಂಶಯಕ್ಕೆ ಕಾರಣವಾಗಿದೆ.
ಬೆಂಗಳೂರು ಉತ್ತರ ತಾಲೂಕು ಕುದುರೆಗೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಎಂಬಿಎ ಓದಿದ್ದ ಯುವತಿ ರೇಖಾ (23) ನೇಣಿಗೆ ಶರಣಾಗಿದ್ದಾಳೆ. ನೆಲಮಂಗಲದ ಯುವಕನ ಜೊತೆ ಮದುವೆ ನಿಶ್ಚಯ ಮಾಡಿದ್ದರು, ಎರಡು ದಿನದ ಹಿಂದೆಯಷ್ಟೇ ಅವರಿಬ್ಬರ ನಿಶ್ಚಿತಾರ್ಥ ಸಮಾರಂಭ ಸಹ ನಡೆದಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ, ಆಕೆಯ ಸಾವು ಈಗ ಹಲವು ಸಂಶಯಕ್ಕೆ ಕಾರಣವಾಗಿದೆ.
ಓದಿ:ಇನ್ಸ್ಟಾಗ್ರಾಂ ಲವ್: ಯುವತಿ ನಂಬಿಸಿ 2 ಲಕ್ಷ ರೂ. ಎಗರಿಸಿದ ನಯವಂಚಕ' - ನ್ಯಾಯಕ್ಕಾಗಿ ಯುವತಿ ಅಳಲು
ಮೃತ ಯುವತಿ ಮನೆಯವರು ಆಕೆ ಹೊಟ್ಟೆನೋವು ತಾಳಲಾರದೇ ನೇಣಿಗೆ ಶರಣಾಗಿದ್ದಾಳೆಂದು ಹೇಳುತ್ತಿದ್ದಾರೆ, ಆದರೆ ಮದುವೆ ನಿಶ್ಚಿತಾರ್ಥವಾದ ಎರಡನೇ ದಿನಕ್ಕೆ ಯುವತಿ ನೇಣಿಗೆ ಶರಣಾಗಿರುವುದು ಹಲವು ಸಂಶಯಕ್ಕೆ ದಾರಿ ಮಾಡಿದೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.