ETV Bharat / state

ದೊಡ್ಡಬಳ್ಳಾಪುರ: ಫೋಟೋಶೂಟ್​ ವಿಚಾರಕ್ಕೆ ಗುಂಪುಗಳ ನಡುವೆ ಜಗಳ, ಯುವಕನ ಕೊಲೆ - ​ ETV Bharat Karnataka

ಫೋಟೋಶೂಟ್ ಮಾಡುವಾಗ ಆರಂಭವಾದ ಜಗಳದಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಫೋಟೋಶೂಟ್​ ವಿಚಾರಕ್ಕೆ ಯುವಕನ ಕೊಲೆ
ಫೋಟೋಶೂಟ್​ ವಿಚಾರಕ್ಕೆ ಯುವಕನ ಕೊಲೆ
author img

By ETV Bharat Karnataka Team

Published : Nov 13, 2023, 9:55 AM IST

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ) : ಫೋಟೋಶೂಟ್ ಮಾಡುವ ವೇಳೆ ಎರಡು ಗುಂಪುಗಳ ನಡುವೆ ಜಗಳವಾಗಿದ್ದು, ಗಲಾಟೆಯ ಅವೇಶದಲ್ಲಿ ಯುವಕನ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವದ ಬಳಿ ಇರುವ ಡಾಬಾದ ಮುಂಭಾಗದಲ್ಲಿ ಭಾನುವಾರ ಸಂಜೆ ಘಟನೆ ನಡೆದಿದ್ದು, ಘಟನೆಯಲ್ಲಿ ದೊಡ್ಡಬಳ್ಳಾಪುರ ನರಗದ ಕಚೇರಿಪಾಳ್ಯದ ನಿವಾಸಿ ಸೂರ್ಯ (22) ಕೊಲೆಗೀಡಾಗಿದ್ದಾನೆ.

ಮೃತ ಯುವಕ ಐಟಿಐ ವಿದ್ಯಾರ್ಥಿಯಾಗಿದ್ದು, ದೀಪಾವಳಿಯ ರಜೆ ಹಿನ್ನೆಲೆ ಫೋಟೋಶೂಟ್​ಗಾಗಿ ಹೋಗಿದ್ದ ವೇಳೆ ಘಟನೆ ನಡೆದಿದೆ. ಕೊಲೆಯಾದ ಯುವಕ ಸೂರ್ಯ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಗಳನ್ನು ಮಾಡುತ್ತಿದ್ದನು. ಹೀಗಾಗಿ ರೀಲ್ಸ್​ಗಾಗಿ ವಿಡಿಯೋ ಮತ್ತು ಫೋಟೋ ಶೂಟ್ ಮಾಡಲು ಸ್ನೇಹಿತರ ಜೊತೆ ರಾಮೇಶ್ವರ ಗ್ರಾಮದ ಬಳಿಯ ಡಾಬಾಕ್ಕೆ ಹೋಗಿದ್ದನು.

ಇದನ್ನೂ ಓದಿ : ರೌಡಿಶೀಟರ್ ಸಹದೇವ ಹತ್ಯೆ ಪ್ರಕರಣ: ಬೆಂಗಳೂರಲ್ಲಿ ಎಂಟು ಮಂದಿ ಆರೋಪಿಗಳ ಬಂಧನ

ಅಲ್ಲಿ ಡಾಬಾದ ಮುಂಭಾಗ ಅಲಂಕಾರಿಕ ಸೀನರಿ ಮುಂದೆ ಫೋಟೋಶೂಟ್ ಮಾಡಲಾಗುತ್ತಿತ್ತು. ಈ ವೇಳೆ ಯುವಕರ ಮತ್ತೊಂದು ಗುಂಪು ಫೋಟೋ ತೆಗೆಯುವಂತೆ ಕಿರಿಕ್ ತೆಗೆದಿದೆ. ಈ ಗಲಾಟೆಯಲ್ಲಿ ಅಪರಿಚಿತ ಗ್ಯಾಂಗ್​ನಲ್ಲಿದ್ದ ಯುವಕನೊಬ್ಬ ಸೂರ್ಯನ ಎದೆಗೆ ಚಾಕುವಿನಿಂದ ಚುಚ್ಚಿದ್ದಾನೆ. ಗಾಯಗೊಂಡಿದ್ದ ಸೂರ್ಯನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ತೀವ್ರ ರಕ್ತಸ್ರಾವದಿಂದ ಸೂರ್ಯ ಸಾವನ್ನಪ್ಪಿದ್ದಾನೆ. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಅಪಘಾತ ವಿಚಾರಕ್ಕೆ ಯುವಕನ ಹತ್ಯೆ : ನವೆಂಬರ್ 6ರ ಸೋಮವಾರ ತಡರಾತ್ರಿ ಪುತ್ತೂರು ಪೇಟೆಯ ನೆಹರೂ ನಗರದಲ್ಲಿ ಪ್ರಸಿದ್ಧ ಹುಲಿ ವೇಷ ಕುಣಿತ ತಂಡದ ಸಾರಥ್ಯ ವಹಿಸಿದ್ದ ಅಕ್ಷಯ್‌ ಕಲ್ಲೇಗ ಹತ್ಯೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬನ್ನೂರು ಕೃಷ್ಣನಗರ ನಿವಾಸಿ ಹಾಗೂ ಖಾಸಗಿ ಬಸ್ ಚಾಲಕ ಚೇತನ್, ದಾರಂದಕುಕ್ಕು ನಿವಾಸಿ ಮನೀಶ್, ಪಡೀಲು ನಿವಾಸಿ ಕೇಶವ ಮತ್ತು ಬನ್ನೂರು ನಿವಾಸಿ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದರು. ಸೋಮವಾರ ​ಸಂಜೆ ವಾಹನ ಅಪಘಾತದ ವಿಚಾರದಲ್ಲಿ ಅಕ್ಷಯ್‌ ಹಾಗೂ ಆರೋಪಿಗಳ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಅಪಘಾತ ನಷ್ಟದ ಬಾಬ್ತು ಮಾತನಾಡಲೆಂದು ಪುನಃ ಆರೋಪಿಗಳು ಅಕ್ಷಯ್‌ನನ್ನು ರಾತ್ರಿ 11.30 ಗಂಟೆಯ ಸುಮಾರಿಗೆ ನೆಹರೂ ನಗರದ ಬಳಿ ಕರೆದು ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿದ್ದವು.

ಇದನ್ನೂ ಓದಿ : ಉಡುಪಿ: ತಾಯಿ, ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.