ಆನೇಕಲ್: ಸಾಲು ಮರದ ಅಮ್ಮ ಡಾ.ತಿಮ್ಮಕ್ಕ ಸಾಧನೆ ಎಲ್ಲ ಪ್ರಶಸ್ತಿಗಳಿಗೂ ಮಿಗಿಲು. ಇದು ಇಂದಿನ ಸಮಾಜಕ್ಕಕೆ ಮಾದರಿಯಾಗಬೇಕು ಎಂದು ಸಿಎಂ ಪ್ರಶಸ್ತಿ ವಿಜೇತ ಕೆ. ವಿಶ್ವನಾಥ್ ಹೇಳಿದರು.
ಮಹಿಳಾ ದಿನಾಚರಣೆ ಅಂಗವಾಗಿ ಆನೇಕಲ್ನ ಜೀವಿತಾ ಮಹಿಳಾ ಅಭಿವೃದ್ದಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ದಿನ ಒಂದಲ್ಲ ಒಂದು ವಿಶೇಷ-ವಿಶಿಷ್ಟ ದಿನ ಜಗತ್ತಿನಲ್ಲಿ ಇದ್ದೇ ಇರುತ್ತದೆ. ವರ್ಷದಿಂದ ವರ್ಷಕ್ಕೆ ಅದು ಸಂಖ್ಯೆಗಳಷ್ಟೇ ಕಳೀತಾ ಹೋಗ್ತಿದೆ. ಆದ್ರೆ ಈ ಮಹಿಳಾ ದಿನಾಚರಣೆಗಾದ್ರೂ ಸಾಲು ಮರದ ತಿಮ್ಮಕ್ಕನ ಸಾಧನೆ ಒಂದು ಜೀವಂತ ಮಾದರಿಯಾಗಬೇಕೆಂದು ದಕ್ಷ ಅಧಿಕಾರಿ, ಸಿಎಂ ಪ್ರಶಸ್ತಿ ವಿಜೇತ ಕೆ.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಮಹಿಳಾ ಸಾಧಕಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೆ ಮಹಿಳೆಯರಿಗೆ ಮರಗಳ ಸಿರಿವಂತ ಒಡತಿ ನಾಡೋಜ ಸಾಲುಮರದ ಡಾ.ತಿಮ್ಮಕ್ಕ ರಂತವರು ಮಾರ್ಗದರ್ಶಿಯಾಗಬೇಕೆಂದು ಕಾರ್ಯಕ್ರಮದಲ್ಲಿ ಸನ್ಮಾನ ನಡೆಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಆನೇಕಲ್-ಜಿಗಣಿಯ ನಿಸರ್ಗ ಬಡಾವಣೆಯಲ್ಲಿನ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಚಿತ್ರಕಲೆ ವಿವಿಧ ಆಟ-ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಿದರು. ಜೀವಿತಾ ಮಹಿಳಾ ಅಭಿವೃದ್ಧಿ ಸಂಸ್ಥೆಯಿಂದ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದರು.
ಮುಂದಿನ ಪೀಳಿಗೆಯಲ್ಲಿ ಹೆಣ್ಣು ಮಕ್ಜಳನ್ನೇ ಹೆಚ್ಚು ಪಡೆಯುವಂತಾಗಬೇಕು ವೇದಿಕೆಯಿಂದ ಕರೆ ನೀಡಲಾಯಿತು. ಅಕ್ಷರಮಾತೆ ಸಾವಿತ್ರಿಬಾಯಿ ಪುಲೆ ಪ್ರಥಮವಾಗಿ ಮಹಿಳೆಯರಿಗೆ ಅಕ್ಷರ ಕಲಿಸಿದ್ರೆ, ಡಾ ಬಿ.ಆರ್.ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ಪ್ರಸ್ತಾವನೆ ಮುಂದಿಟ್ರು ಹೀಗೆ ಫೆಮಿನಿಸ್ಟ್ ಆಗಿಯೂ ಅಂಬೇಡ್ಕರ್ ಮಹಿಳೆಯರಿಗೆ ಸಮಾಜದಲ್ಲಿ ಪ್ರಾಧಾನ್ಯತೆ ಹೆಚ್ಚಬೇಕೆಂದು ಪ್ರತಿ ಅನಿಸಿಕೆಯಲ್ಲೂ ಪ್ರತಿಧ್ವನಿಸಿದರು. ಒಟ್ಟಾರೆ ಮಹಿಳಾ ಸಾಧನೆಗಳಿಗೆ ವೇದಿಕೆಯಾಗಿ ಕಾರ್ಯಕ್ರಮ ನಾಗರೀಕರ ಶ್ಲಾಘನೆಗೆ ಸಾಕ್ಷಿಯಾಯ್ತು.