ETV Bharat / state

ವೆಲ್ಡಿಂಗ್​​ಗೆ ಬಂದು ಆಂಟಿ ಜೊತೆ ಬಾಂಡಿಂಗ್ ಶುರು ಮಾಡ್ದ.. ಮತ್ತೊಬ್ಬನ ಹಿಂದೆ ಬಿದ್ದಿದ್ದಕ್ಕೆ ಅವಳನ್ನೇ ಅಂತ್ಯ ಮಾಡಿದ! - ದೊಡ್ಡಬಳ್ಳಾಪುರದಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಕೊಲೆ

ಸಂಬಂಧಿಕರ ಗೃಹಪ್ರವೇಶಕ್ಕೆ ಎಂದು ಮುಂಜಾನೆ 5 ಗಂಟೆಗೆ ಮನೆಯಿಂದ ಹೊರಟ ಗಂಡನನ್ನ ಬೀಳ್ಕೊಟ್ಟ ನಂತರ ಆಕೆ ಮೊಬೈಲ್ ಕರೆಯಲ್ಲಿ ತಲ್ಲೀನಳಾಗಿದ್ದಳು. ಚಾಕು ಹಿಡಿದು ಬಂದ ಆತ ಆಕೆಯ ಮೇಲೆ ಮನಸ್ಸೋ ಇಚ್ಛೆ ತಿವಿದು ಅಲ್ಲಿಂದ ಪರಾರಿಯಾಗಿದ್ದ. ತಾಯಿಯ ಚೀರಾಟದ ಧ್ವನಿ ಕೇಳಿ ಮಲಗಿದ್ದ ಮಕ್ಕಳು ಹೊರಗೆ ಬಂದು ನೋಡುವಷ್ಟರಲ್ಲಿ ರಕ್ತದ ಮಡುವಿನಲ್ಲೇ ಪ್ರಾಣ ಬಿಟ್ಟಿದ್ದಳು.

ಆರೋಪಿ
ಆರೋಪಿ
author img

By

Published : May 27, 2022, 7:34 PM IST

ದೊಡ್ಡಬಳ್ಳಾಪುರ: ಅಂಗಡಿಯ ವೆಲ್ಡಿಂಗ್​​ ಮಾಡೋಕೆ ಬಂದವರು ಆಂಟಿ ಜೊತೆ ಬಾಂಡಿಂಗ್ ಶುರು ಮಾಡಿದ್ದ. ಅವನು 27ರ ಪ್ರಾಯದ ಯುವಕ. ಅವರು 35ರ ಆಂಟಿ, ಕದ್ದು ಮುಚ್ಚಿ ಇಬ್ಬರು ಮನೆಯಲ್ಲೇ ಪಲ್ಲಂಗದಾಟ ಶುರುಮಾಡಿದ್ರು. ರೂಮ್​ನ ವೆಂಟಿಲೇಟರ್ ಮೂಲಕ ಕಳ್ಳ ಬೆಕ್ಕಿನಂತೆ ಬಂದು ಆಂಟಿ ಜೊತೆ ಸರಸವಾಡಿ ಹೋಗುತ್ತಿದ್ದ ಅವನು ಒಂದು ದಿನ ಆಕೆಯ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ.

ಎಸ್​ಪಿ ಕೋನಾವಂಶಿ ಅವರು ಮಾತನಾಡಿದರು

ಮುಂಜಾನೆ ಮನೆ ಮುಂದೆ ಹರಿದ ನೆತ್ತರು: ಸಂಬಂಧಿಕರ ಗೃಹಪ್ರವೇಶಕ್ಕೆ ಎಂದು ಮುಂಜಾನೆ 5 ಗಂಟೆಗೆ ಮನೆಯಿಂದ ಹೊರಟ ಗಂಡನನ್ನ ಬೀಳ್ಕೊಟ್ಟ ನಂತರ ಆಕೆ ಮೊಬೈಲ್ ಕರೆಯಲ್ಲಿ ತಲ್ಲೀನಳಾಗಿದ್ದಳು. ಚಾಕು ಹಿಡಿದ ಬಂದ ಆತ ಆಕೆಯ ಮೇಲೆ ಮನಸ್ಸೋ ಇಚ್ಛೆ ತಿವಿದು ಅಲ್ಲಿಂದ ಪರಾರಿಯಾಗಿದ್ದ. ತಾಯಿಯ ಚೀರಾಟದ ಧ್ವನಿ ಕೇಳಿ ಮಲಗಿದ್ದ ಮಕ್ಕಳು ಹೊರಗೆ ಬಂದು ನೋಡುವಷ್ಟರಲ್ಲಿ ಆಕೆ ರಕ್ತದ ಮಡುವಿನಲ್ಲೇ ಪ್ರಾಣ ಬಿಟ್ಟಿದ್ದಳು.

ಮೇ 15ರ ಮುಂಜಾನೆ ದೊಡ್ಡಬಳ್ಳಾಪುರ ತಾಲೂಕಿನ ವಡಗೆರೆ ಗ್ರಾಮದಲ್ಲಿ ನಡೆದ ಭೀಕರ ಕೊಲೆಗೆ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು. 35 ವರ್ಷದ ಭಾಗ್ಯಶ್ರೀ ಮನೆಯ ಮುಂಭಾಗದಲ್ಲಿ ಹೆಣವಾಗಿದ್ದರು. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ದೊಡ್ಡಬೆಳವಂಗಲ ಪೊಲೀಸರಿಗೆ ಹಂತಕನ ಸುಳಿವು ಅದಾಗಲೇ ಸಿಕ್ಕಿತ್ತು. ಆದರೆ, ಆರೋಪಿ ಘಟನೆ ನಂತರ ಪರಾರಿಯಾಗಿದ್ದ. ಆರೋಪಿಯ ಬೆನ್ನಟ್ಟಿದ ಪೊಲೀಸರು ಘಟನೆಯಾದ 9 ನೇ ದಿನಕ್ಕೆ ರಾಯಚೂರಿನಲ್ಲಿ ಆರೋಪಿ ರಿಯಾಜ್​ (27) ಎಂಬಾತನನ್ನು ಬಂಧಿಸಿ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಭಾಗ್ಯಶ್ರೀ ಮತ್ತು ರಿಯಾಜ್ ನಡುವೆ ಬೆಳೆದಿತ್ತು ನಂಟು: ಕೊಲೆಯಾದ ಭಾಗ್ಯಶ್ರೀ ಮತ್ತು ಆಕೆಯ ಗಂಡ ಚನ್ನಬಸವಯ್ಯ ಮನೆ ಮುಂದೆ ಅಂಗಡಿ ಹಾಕುವ ತೀರ್ಮಾನಕ್ಕೆ ಬಂದಿದ್ದರು. ಊರಿನ ವೆಲ್ಡಿಂಗ್ ಕೆಲಸಗಾರ ರಿಯಾಜ್ ಎಂಬಾತನನ್ನು ಕೆಲಸಕ್ಕೆ ಕರೆಸಿದ್ದಾರೆ. ಕೆಲಸ ಮಾಡುವ ನೆಪದಲ್ಲಿ ಭಾಗ್ಯಶ್ರೀ ಮತ್ತು ರಿಯಾಜ್ ನಡುವೆ ನಂಟು ಬೆಸೆದಿದೆ. ಇದೇ ನಂಟು ಇಬ್ಬರ ಅನೈತಿಕ ಸಂಬಂಧಕ್ಕೂ ದಾರಿ ಮಾಡಿ ಕೊಟ್ಟಿತ್ತು.

ಗಂಡ ಮತ್ತು ಮಕ್ಕಳು ಬೇರೆ ಕಡೆ ಮಲಗಿದ್ದರೆ, ಭಾಗ್ಯಶ್ರೀ ರೂಮ್ ನಲ್ಲಿ ಒಬ್ಬಳೇ ಮಲಗುತ್ತಿದ್ದಳು. ರಾತ್ರಿಯಾಗುವುದನ್ನೆ ಕಾಯುತ್ತಿದ್ದ ರಿಯಾಜ್ ರೂಮ್ ನ ವೆಂಟಿಲೇಟರ್ ಮೂಲಕ ಬಂದು ಭಾಗ್ಯಶ್ರೀ ಜೊತೆ ಪಲ್ಲಂಗದಾಟ ಆಡುತ್ತಿದ್ದ. 4 ವರ್ಷಗಳಿಂದ ಇಬ್ಬರ ಲವ್ವಿ ಡವ್ವಿ ನಡೆಯುತ್ತಲೇ ಇತ್ತು.

ವೆಲ್ಡರ್ ಬಿಟ್ಟು ಡ್ರೈವರ್ ಜೊತೆ ನಂಟು ಬೆಳೆಸಿದ ಆಂಟಿ: ಮನೆಯಲ್ಲಿ ಇದ್ದ ಭಾಗ್ಯಶ್ರೀ ಗಾರ್ಮೆಂಟ್ಸ್ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಗಾರ್ಮೆಂಟ್ಸ್​ನ ವ್ಯಾನ್ ಡ್ರೈವರ್ ಜೊತೆ ಸಂಬಂಧ ಬೆಳೆಸಿದ ಭಾಗ್ಯಶ್ರೀ ರಿಯಾಜ್ ನನ್ನ ಅವೈಡ್ ಮಾಡುತ್ತಿದ್ದರು. ಇದೇ ವಿಚಾರವಾಗಿ ರಿಯಾಜ್ ಮತ್ತು ಭಾಗ್ಯಶ್ರೀ ನಡುವೆ ಹಲವು ಬಾರಿ ಗಲಾಟೆಯಾಗಿತ್ತು. ತಾನು ನೀಡಿದ ಹಣ ವಾಪಸ್ ನೀಡುವಂತೆ ಕೇಳಿದ ರಿಯಾಜ್ ಮಾತಿಗೆ ಭಾಗ್ಯಶ್ರೀ ಡೋಂಟ್​ ಕೇರ್ ಮಾಡಿದ್ಳು. ಇದರಿಂದ ಸೇಡು ತೀರಿಸಿಕೊಳ್ಳಲು ಮುಂದಾದ ರಿಯಾಜ್ ಆಕೆಯ ಕೊಲೆಗೆ ಸ್ಕೆಚ್ ಹಾಕಿದ.

ಮೇ 15 ರ ಮುಂಜಾನೆ 5 ಗಂಟೆಗೆ ಭಾಗ್ಯಶ್ರೀ ಗಂಡ ಗೃಹಪ್ರವೇಶ ಕಾರ್ಯಕ್ರಮಕ್ಕಾಗಿ ಮನೆಯಿಂದ ಹೊರಟಿದ್ದಾನೆ. ಇದೇ ಸಮಯಕ್ಕೆ ಕಾದಿದ್ದ ರಿಯಾಜ್ ಮನೆಯ ಮುಂದೆ ಪೋನ್ ನಲ್ಲಿ ಮಾತನಾಡುತ್ತಿದ್ದ ಆಕೆಯನ್ನ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ. ಮಾಡಿದ ತಪ್ಪಿಗೆ ಶಿಕ್ಷೆಯಾಗಿ ರಿಯಾಜ್ ಜೈಲು ಸೇರಿದ್ದಾನೆ. ಪರಪುರುಷನ ತೆಕ್ಕೆಗೆ ಬಿದ್ದ ತಪ್ಪಿಗೆ ಭಾಗ್ಯಶ್ರಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಓದಿ: ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಹತ್ಯೆ: ಇಬ್ಬರು ಆರೋಪಿಗಳು ಅರೆಸ್ಟ್​

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.