ETV Bharat / state

ಕಸ ಹಾಕುತ್ತಿದ್ದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು - ಟಿಪ್ಪರ್ ಲಾರಿ ವಶ

ಆನೇಕಲ್​ನ ಮೈಲಸಂದ್ರ ಗ್ರಾಮದಲ್ಲಿ ಅಕ್ರಮವಾಗಿ ಕಸ ಸುರಿದು ಹೋಗುತ್ತಿದ್ದ 5 ಟಿಪ್ಪರ್ ಲಾರಿಗಳನ್ನು ಗ್ರಾಮಸ್ಥರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಕಸದ ಗಾಡಿ
author img

By

Published : Nov 6, 2019, 4:09 AM IST

ಆನೇಕಲ್: ಯಾರಿಗೂ ಗೊತ್ತಾಗದ ಹಾಗೆ ತಡರಾತ್ರಿ ವೇಳೆ ಗ್ರಾಮಸ್ಥರ ಕಣ್ಣುತಪ್ಪಿಸಿ ಅಕ್ರಮವಾಗಿ ಕಸವನ್ನು ಸುರಿದು ಸಾಗುತ್ತಿದ್ದ ವಾಹನಗಳನ್ನು ಗ್ರಾಮಸ್ಥರು ಹಿಡಿದಿರುವ ಘಟನೆ ದೊಡ್ಡ ತೋಗೂರು ಪಂಚಾಯಿತಿಯ ಮೈಲಸಂದ್ರ ಗ್ರಾಮದಲ್ಲಿ ನಡೆದಿದೆ.

ಕಸ ಹಾಕುತ್ತಿದ್ದವರನ್ನು ನೇರವಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ತಡರಾತ್ರಿ ಮೈಲಸಂದ್ರ ಗ್ರಾಮದಲ್ಲಿ ಕಸ ಸುರಿದು ಹೋಗುತ್ತಿದ್ದ 5 ಟಿಪ್ಪರ್ ಲಾರಿಗಳನ್ನು ಗ್ರಾಮದ ಯುವಕರು ಹಿಡಿದಿದ್ದಾರೆ. ಈ ವೇಳೆ ಲಾರಿ ಚಾಲಕರು ಗ್ರಾಮಸ್ಥರ ಕೈಗೆ ಸಿಗದೆ ಪರಾರಿಯಾಗಿದ್ದಾರೆ.

ಇದೇ ರೀತಿಯಾಗಿ ಕಳೆದ ಮೂರು-ನಾಲ್ಕು ತಿಂಗಳಿಂದ ಅಕ್ರಮವಾಗಿ ಕಸ ಡಂಪ್ ಆಗುತ್ತಿದ್ದುದು ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಇದಕ್ಕಾಗಿ ರಾತ್ರಿ ವೇಳೆ ತಂಡೋಪತಂಡವಾಗಿ ಕಾದು ಕುಳಿತರೂ ಕಸ ಸುರಿಯುತ್ತಿದ್ದ ಮಾಹಿತಿ ಸಿಕ್ಕಿರಲಿಲ್ಲ. ಹೀಗಿರುವಾಗ ಗುರುವಾರ ರಾತ್ರಿಯಿಡೀ ಮಾಹಿತಿ ಬಹಿರಂಗವಾಗದಂತೆ ಗುಪ್ತವಾಗಿ ಕಾವಲು ಕಾಯುತ್ತಿದ್ದು, ಕೊನೆಗೂ ಟಿಪ್ಪರ್ ಸಿಕ್ಕಿ ಹಾಕಿಕೊಂಡಿದೆ.

ಮುಂಜಾನೆ 10 ಲಾರಿಗಳು ಕಸದೊಂದಿಗೆ ಯುವಕರ ಗುಂಪಿಗೆ ಸಿಕ್ಕಿದ್ದು, ಲಾರಿ ಚಾಲಕರು ಐದು ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಲಾರಿ ಟೈರ್​ಗಳ ಗಾಳಿ ತೆಗೆದು ಕ್ವಾರಿ ಬಳಿಯೇ ನಿಲ್ಲಿಸಲಾಗಿದೆ. ಈ ಸಂಬಂಧ ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Intro:Kn_bng_01_05_kasa gaadi_pkg_ka10020.
ಕಸ ಹಾಕುತ್ತಿದ್ದವರನ್ನು ನೇರವಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು.
ಆನೇಕಲ್,
ಆಂಕರ್,
ಹಿಂದಿನ ಸರ್ಕಾರದಿಂದ ಸ್ವಚ್ಚ ಭಾರತ ಅಭಿಯಾನ ಯೋಜನೆ ಕಾರ್ಯರೂಪಕ್ಕಿಂತ ಪ್ರಚಾರದ ಭರಾಟೆಯೇ ಹೆಚ್ಚು ಸದ್ದು ಮಾಡಿತ್ತು. ದೂರದ ಪಟ್ಟಣಗಳಿರಲಿ ನಗರ ಪ್ರದೇಶದಲ್ಲಿಯೇ ಕಸದ ಗಬ್ಬು ಹೆಚ್ಚಾಯ್ತು. ವಿಕೇವಾರಿಯಾಗದ ಕಸದಿಂದ ಗಾರ್ಡನ್ ಸಿಟಿ ಬದಲು ಗಾರ್ಬೆಜ್ ಸಿಟಿಯಾಗಿ ಜಗಜಾಹೀರಾಯ್ತು. ಹೀಗಾಗಿ ಕಸ ಹಾಕುವ ಸ್ಥಳ ಸಿಗದೇ ಕಳ್ಳಸಾಗಣೆ ಮೂಲಕ ಅಕ್ರಮವಾಗಿ ಕದ್ದು ಮುಚ್ಚಿ ಕಸ ಡಂಪ್ ಮಾಡಲು ಶುರು ಮಾಡಿದಾಗ ಗ್ರಾಮಸ್ಥರ ಕೈಗೆ ಸಿಕ್ಕಿ ಹೈರಾಣಾದ ಕತೆಯೇ ಈ ವರದಿ……
ವಿಶ್ಯುಯಲ್ಸ್ ಫ್ಲೋ…….
Body:ವಾಒ1: ಹೀಗೆ ಕಾಣ್ತಿರೋ ವಾಹನಗಳು ತಡರಾತ್ರೀ ವೇಳೆ ಗ್ರಾಮಸ್ಥರ ಕಣ್ಣು ತಪ್ಪಿಸಿ ಅಕ್ರಮವಾಗಿ ಕಸ ಅನಾಮತ್ತಾಗಿ ಸುರಿದು ಪರಾರಿಯಾಗುತ್ತಿದ್ದ ವಾಹನಗಳಿವು. ತಡರಾತ್ರಿ ದೊಡ್ಡ ತೋಗೂರು ಪಂಚಾಯಿತಿಯ ಮೈಲಸಂದ್ರ ಗ್ರಾಮದಲ್ಲಿ ಕಸದ ತಂಡವನ್ನು ಹಿಡಿದು . 5 ಟಿಪ್ಪರ್ ಲಾರಿಗಳು ಐವರು ಕಾರ್ಮಿಕರನ್ನು ಗ್ರಾಮಸ್ಥರು ಹಿಡಿದಿದ್ದಾರೆ. ಇದೇ ರೀತಿಯಾಗಿ ಕಳೆದ ಮೂರು-ನಾಲ್ಕು ತಿಂಗಳಿಂದ ಕಸ ಡಂಪ್ ಆಗುತ್ತಿದ್ದುದು ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಇದಕ್ಕಾಗಿ ರಾತ್ರಿ ವೇಳೆ ತಂಡೋಪತಂಡವಾಗಿ ಕಾದು ಕುಳಿತರೂ ಕಸ ಸುರಿಯುತ್ತಿದ್ದ ಮಾಹಿತಿ ಸಿಕ್ಕಿರಲಿಲ್ಲ. ಹೀಗಿರುವಾಗ ಗುರುವಾರ ರಾತ್ರಿಯಿಡೀ ಮಾಹಿತಿ ಬಹಿರಂಗವಾಗದಂತೆ ಗುಪ್ತವಾಗಿ ಕಾವಲು ಕಾಯುತ್ತಿದ್ದು ಕೊನೆಗೂ ಟಿಪ್ಪರ್ ಸಿಕ್ಕಿ ಹಾಕಿಕೊಂಡಿದೆ.
ಮುಂಜಾನೆ 10 ಲಾರಿಗಳು ಕಸದೊಂದಿಗೆ ಯುವಕರ ಗುಂಪಿಗೆ ಸಿಲುಕಿದ್ದು ಲಾರಿ ಚಾಲಕರು ಐದು ಲಾರಿ ಬಿಟ್ಟು ಪರಾರಿಯಾದರು. ಲಾರಿ ಟೈರ್ಗಳ ಗಾಳಿ ತೆಗೆದು ಕ್ವಾರಿ ಬಳಿಯೇ ನಿಲ್ಲಿಸಲಾಗಿದೆ. ಈ ಸಂಬಂಧ ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೈಟ್1: ದಾಸ್, ಮೈಲಸಂದ್ರ ನಿವಾಸಿ.
ವಾಒ2: ಮಕ್ಕಳಿಗೆ ವಾಂತಿಭೇದಿ ಆಗುತ್ತಿದ್ದು, ಇದ್ದಕ್ಕಿದ್ದಂತೆ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದ್ದು. ಗಬ್ಬು ವಾಸನೆ ಬೀರುತಿತ್ತು. ಗ್ರಾಮಸ್ಥರು. ಪರಿಶೀಲಿಸಲಾಗಿ, ಕ್ವಾರಿಯಲ್ಲಿ ಕಸ ಸುರಿದು ಮೇಲೆ ಮಣ್ಣು ಮುಚ್ಚುತ್ತಿದ್ದರು. ವಾರದ ಹಿಂದೆಯೂ ಬೇಗೂರು ವಾರ್ಡ್ ನ ದೊಡ್ಡಕಮ್ಮನಹಳ್ಳಿ ಬಳಿ ಬಿಬಿಎಂಪಿ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದರು.
ಅನೇಕ ತಿಂಗಳುಗಳಿಂದ ನೈಸ್ ರಸ್ತೆ ಬಳಿಯ ಬಸಾಪುರ, ದೊಡ್ಡ ಕಮ್ಮನಹಳ್ಳಿ ಹಾಗು ಕೊಪ್ಪರಸ್ತೆಯಲ್ಲಿ ಕಸ ಸುರಿದು ಹೋಗುತ್ತಿರುವುದು ಗಮನಕ್ಕೆ ಬಂದಿತ್ತು, ರಾತ್ರಿ ಕಾವಲು ಕಾದ ಬಿಬಿಎಂಪಿ ಸಿಬ್ಬಂದಿ ಮೇಲೆ ಧಮಕಿ ಹಾಕಿ ಪರಾರಿಯಾಗಿದ್ದರು, ಈ ಕಸ ಸಿಟಿ ಮಾರ್ಕೆಟ್ ನಿಂದ ಬಂದಿದ್ದು ಎಂದು ಹೇಳಿಕೆ ಕೊಟ್ಟಿದ್ದಾನೆ’ ಎಂದು ಆರೋಗ್ಯ ನಿರೀಕ್ಷಕರು ದೃಢಪಡಿಸುತ್ತಾರೆ.
ಬೈಟ್2: ದಾಸ್, ಮೈಲಸಂದ್ರ ವಾಸಿ.
Conclusion:ವಾಒ3: ಪಾಲಿಕೆ ಸದಸ್ಯರು ಹಾಗು ಅಧಿಕಾರಿಗಳ ಜತೆಗಿನ ಹೊಂದಾಣಿಕೆಯಿಂದ ಬಿಬಿಎಂಪಿಯ ಲ್ಯಾಂಡ್ ಫಿಲ್ಲಿಂಗ್ ಜಾಗದಲ್ಲೇ ಕಸ ಸುರಿಯಲಾಗುತ್ತಿದೆ, ಇನ್ನೂ ಕೆಲವರು ಕೆರೆ ದಂಡೆ, ಕ್ವಾರಿ, ಹಳ್ಳಗಳಲ್ಲಿ ಹೂತು ಹಾಕಿ ಹೋಗುತ್ತಿದ್ದಾರೆ, ಜತೆಗೆ ಕೆಲವರು ಬಿಬಿಎಂಪಿಯ ಅನುಮತಿ ಪತ್ರವೂ ಇಲ್ಲದೆಯೂ ಕಂಪನಿ ನಡೆಸುತ್ತಿರುವ ವರದಿಗಳಿವೆ ಎಂದು ಆ ಅಧಿಕಾರಿ ಕಸ ಮಾಫಿಯಾದ ಎಳೆಯನ್ನು ಬಿಡಿಸಿಡುತ್ತಾರೆ.
-ಮುನಿರಾಜು, ಈಟಿವಿ ಭಾರತ್, ಆನೇಕಲ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.