ಆನೇಕಲ್/ಬೆಂಗಳೂರು: ಆನೇಕಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಂಟು ವೆಂಟಿಲೇಟರ್ ಹಾಸಿಗೆಗಳನ್ನು ಸಂಸದ ಡಿಕೆ ಸುರೇಶ್ ಹಾಗೂ ಜಿಲ್ಲಾಧಿಕಾರಿ ಜೆ ಮಂಜುನಾಥ್ರಿಂದ ಲೋಕಾರ್ಪಣೆಗೊಳಿಸಿದರು.
ಈಗಾಗಲೇ 43 ಹಾಸಿಗೆಗಳು ಕೋವಿಡ್ಗಾಗಿ ಮೀಸಲಿಡಲಾಗಿದ್ದು, ಇದೀಗ ಎಂಟು ವೆಂಟಿಲೇಟರ್ ಹಾಸಿಗೆಗಳು ಸೇರ್ಪಡೆಗೊಂಡಿವೆ. ಆನೇಕಲ್ ಭಾಗದಲ್ಲಿ ಸೋಂಕಿತರಿಗೆ ಆಮ್ಲಜನಕ ಹಾಸಿಗೆಗಳ ಕೊರತೆ ಹೆಚ್ಚಾಗಿರುವ ಕಾರಣ ಒತ್ತಡದ ಮೇರೆಗೆ ಸರ್ಕಾರ ಇದೀಗ ಕಣ್ಣು ತೆರೆದಿದೆ. ಬಿಐಎ ಸಹಯೋಗದಲ್ಲಿ 13 ಪಿಎಚ್ಸಿಗಳಿಗೆ 2000 ಮೆಡಿಕಲ್ ಕಿಟ್ಗಳ ಹಂಚಿಕೆ ಜೊತೆಗೆ ನೂತನ ಕೊವಿಡ್ ಕೇರ್ ಸೆಂಟರ್ಗೂ ಚಾಲನೆ ಸಿಕ್ಕಿತು.
ಆನೇಕಲ್ನ ಸರ್ಕಾರಿ ವಸತಿ ಗೃಹವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಸುಮಾರು 50 ಬೆಡ್ಗಳ ವ್ಯವಸ್ಥೆ ಮಾಡಲಾಗಿದ್ದು, ಕೊರೊನಾ ರೋಗಿಗಳಿಗೆ ಐಸೋಲೆಷನ್ ವ್ಯವಸ್ಥೆಗೆ ಅನುವು ಮಾಡಿಕೊಡಲಾಯಿತು.
ಓದಿ:ಸೋಂಕಿತರ ತುರ್ತು ಚಿಕಿತ್ಸೆಗಾಗಿ ಮೊಬೈಲ್ ಆಕ್ಸಿಜನ್ ಬಸ್.. ಬಿಎಂಟಿಸಿ ಹೊಸ ಪ್ರಯೋಗ