ETV Bharat / state

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡ್ರೋನ್‌ ಹಾರಾಟ: ತನಿಖೆ ಪ್ರಾರಂಭ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಪ್ರದೇಶದಲ್ಲಿ ಅಪರಿಚಿತ ಡ್ರೋನ್​ ಹಾರಾಟ ಮಾಡಿ ಕೆಲಕಾಲ ಆತಂಕ ಸೃಷ್ಟಿಸಿದ್ದ ಘಟನೆ ನಡೆದಿದೆ.

known-drone-flies-at-kempegowda-airport-in-devanahalli
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡ್ರೋನ್‌ ಹಾರಾಟ: ತನಿಖೆ ಪ್ರಾರಂಭ
author img

By ETV Bharat Karnataka Team

Published : Sep 27, 2023, 7:06 PM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಪ್ರದೇಶದಲ್ಲಿ ಅಪರಿಚಿತ ಡ್ರೋನ್​ ಹಾರಾಟ ಮಾಡಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಪರಿಚಿತ ಡ್ರೋನ್​ ಹಾರಾಟವನ್ನು ಪತ್ತೆ ಮಾಡಲು ತನಿಖೆಯನ್ನು ಆರಂಭಿಸಲಾಗಿದೆ.

ರನ್ ವೇ ಪ್ರದೇಶದಿಂದ 6 ನಾಟಿಕಲ್ ದೂರದಲ್ಲಿ ಡ್ರೋನ್​ ಹಾರಾಟ ಕಂಡು ಬಂದಿದೆ. ಡ್ರೋನ್​ ಹಾರಾಟ ಕಂಡು ಬಂದ ತಕ್ಷಣವೇ ವಿಮಾನದ ಪೈಲಟ್ ಎಟಿಸಿಗೆ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದ ಸುತ್ತಮುತ್ತ ಸಾಕಷ್ಟು ಭದ್ರತೆ ಇದ್ದರೂ ಅಪರಿಚಿತ ಡ್ರೋನ್​ ಹಾರಾಟ ಕೆಲಕಾಲ ಆತಂಕದ ಉಂಟುಮಾಡಿತ್ತು. ಅಪರಿಚಿತ ಡ್ರೋನ್​ ಪತ್ತೆ ಮಾಡುವ ಕಾರಣಕ್ಕೆ ಪೊಲೀಸರಿಗೆ ದೂರು ಸಹ ನೀಡಲಾಗಿದ್ದು, ತನಿಖೆ ಪ್ರಾರಂಭವಾಗಿದೆ.

ನಕಲಿ ಪಾಸ್​ಪೋರ್ಟ್​ ಮೂಲಕ ವಿದೇಶಕ್ಕೆ ತೆರಳುತ್ತಿದ್ದವನ ಬಂಧನ: ಇತ್ತೀಚಿಗೆ, ನಕಲಿ ಪಾಸ್​ಪೋರ್ಟ್​ ಮೂಲಕ ವಿದೇಶಕ್ಕೆ ತೆರಳುತ್ತಿದ್ದವನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಬಂಧಿಸಿದ್ದರು. ನೇಪಾಳ ಮೂಲದ ಉತ್ತಮ್ ಹಮಾಲ್ ಬಂಧಿತ ಆರೋಪಿ. ಬಂಧಿತ ಉತ್ತಮ್ ಹಮಾಲ್ ಬೆಂಗಳೂರಿನಿಂದ ಬ್ಯಾಂಕಾಕ್​ಗೆ ತೆರಳುತ್ತಿದ್ದ. ನೇಪಾಳ ಮೂಲದವನಾಗಿದ್ದರು ಕೇರಳ ಮೂಲದವನು ಎಂದು ನಕಲಿ ಪಾಸ್​ಪೋರ್ಟ್ ‌ಮಾಡಿಸಿಕೊಂಡಿದ್ದ. ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಬ್ಯಾಂಕಾಕ್​ಗೆ ಹಾರಲು ಯತ್ನ ನಡೆಸಿದ್ದ.

ಆದರೆ, ಅನುಮಾನ ಬಂದು ಇಮಿಗ್ರೇಷನ್​ ಅಧಿಕಾರಿಗಳು ವಶಕ್ಕೆ ಪಡೆದು ಏರ್ಪೋರ್​ಪೋರ್ಟ್​ ಪೊಲೀಸರಿಗೆ ಒಪ್ಪಿಸಿದ್ದರು. ಇನ್ನು ತನ್ನ ಜೊತೆಯಲ್ಲಿ ಮತ್ತಿಬ್ಬರಿಗೆ ಕೆಲಸ‌ ಕೊಡಿಸುವುದಾಗಿ‌ ಬಂಧಿತ ಆರೋಪಿ ಕರೆದುಕೊಂಡು ಹೋಗುತ್ತಿದ್ದ ಎನ್ನಲಾಗಿತ್ತು. ಭಾರತ ಮೂಲದ ಮಹಿಳೆ ಹಾಗೂ ನೇಪಾಳಿ ಮೂಲದ ಮಹಿಳೆ ಜೊತೆ ಆರೋಪಿ ತೆರಳುತ್ತಿದ್ದ ಎಂಬುದು ತಿಳಿದುಬಂದಿತ್ತು. ತಲಾ ಒಬ್ಬೊಬ್ಬರಿಂದ 8 ಲಕ್ಷ ಹಾಗೂ 1.5 ಲಕ್ಷ ಹಣ ಪಡೆದು ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್​ಗೆ ತೆರಳಲು ಯತ್ನಿಸಿದ ವೇಳೆ ಬಂಧಿಸಲಾಗಿತ್ತು. ಆರೋಪಿಯನ್ನ ಬಂಧಿಸಿ ಮತ್ತಿಬ್ಬರನ್ನು ಪೊಲೀಸರು ವಾಪಸ್ ಕಳುಹಿಸಿದ್ದರು.

ನಕಲಿ ಪಾಸ್ ಪೋರ್ಟ್ ಜಾಲ ಪ್ರಕರಣ: ನಕಲಿ‌ ದಾಖಲಾತಿ ಸೃಷ್ಟಿಸಿ ಅಕ್ರಮವಾಗಿ ವಿದೇಶಿಯರಿಗೆ ಪಾಸ್ ಪೋರ್ಟ್ ಮಾಡಿಕೊಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ್ದ ಪೊಲೀಸರು 9 ಮಂದಿ ಆರೋಪಿಗಳನ್ನು (ಫೆಬ್ರವರಿ 1-2023) ಬಂಧಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ವಿಚಾರಣೆ ವೇಳೆ ಸಿಕ್ಕಿದ ಸುಳಿವಿನ ಮೇರೆಗೆ ಗುಜರಾತ್ ಮೂಲದ‌ ಪ್ರಮುಖ ಆರೋಪಿಯನ್ನು ಬಂಧಿಸಿದ್ದರು. ಗುಜರಾತ್ ಮೂಲದ ಶಿಬು ಬಂಧಿತ ಆರೋಪಿ ಎಂದು ತಿಳಿದುಬಂದಿತ್ತು.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​​​ನಲ್ಲಿ 4 ಕೋಟಿ ಮೌಲ್ಯದ ಅಕ್ರಮ ಚಿನ್ನ ಸಾಗಣೆ: ಓರ್ವನ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.