ETV Bharat / state

ರೆಮ್ಡಿಸಿವರ್ ಹೆಚ್ಚು ಪೂರೈಕೆ ಬಗ್ಗೆ ಮಾತುಕತೆ ನಡೆಸಲಾಗಿದೆ : ಕೇಂದ್ರ ಸಚಿವ ಸದಾನಂದ ಗೌಡ - Remdisiver

ಮೇ ತಿಂಗಳ ಹೊತ್ತಿಗೆ ಇಪ್ಪತ್ತೈದು ಲಕ್ಷ ವಿಯಾಲ್ಸ್ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತದೆ. ರೆಮ್ಡಿಸಿವರ್ ಔಷಧಿ ಸಹ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿಯೇ ಇರುವ ರೆಮ್ಡಿಸಿವರ್ ತಯಾರಿಕಾ ಕಂಪನಿ ಮೈಲಾನ್​ಗೆ ಭೇಟಿ ನೀಡಲಾಗಿದೆ..

Union Minister Sadananda Gowda
ಕೇಂದ್ರ ಸಚಿವ ಸದಾನಂದ ಗೌಡ
author img

By

Published : Apr 23, 2021, 4:48 PM IST

ಆನೇಕಲ್ : ರಾಜ್ಯ ಸರ್ಕಾರದ ಬೇಡಿಕೆಯಂತೆ ಕೇಂದ್ರ ಆರೋಗ್ಯ ಸಚಿವರ ಜೊತೆ ಚರ್ಚಿಸಿ ಹೆಚ್ಚುವರಿ 25 ಸಾವಿರ ವಿಯಾಲ್ಸ್ ಅಕ್ಸಿಜನ್ ನೀಡಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.

ಆಕ್ಸಿಜನ್‌ ಪೂರೈಕೆ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯೆ..

ಆನೇಕಲ್ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಮೈಲಾನ್ ಫಾರ್ಮಾ ಕಂಪನಿಗೆ ಭೇಟಿ ನೀಡಿ ಮಾತನಾಡಿದ ಅವರು, ಆಕ್ಸಿಜನ್ ಉತ್ಪಾದಿಸುವ ಸಂಸ್ಥೆಗಳು ಜನರ ಆರೋಗ್ಯ ದೃಷ್ಟಿಯಿಂದ ಆಯಾ ರಾಜ್ಯಗಳಿಗೆ ಪೂರೈಕೆ ಮಾಡಲು ಪ್ರಧಾನಿ ಸೂಚನೆ ನೀಡಿದ್ದಾರೆ.

ಉತ್ಪಾದನೆಯ ಶೇ. 70 ರಷ್ಟು ಅಕ್ಸಿಜನ್ ಕೇಂದ್ರ ಸರ್ಕಾರದ ಆದೇಶದಂತೆ ವಿತರಣೆ ಮಾಡಬೇಕು. ಶೇ 30 ರಷ್ಟು ಮಾತ್ರ ತಮ್ಮ ಬೇಡಿಕೆಗಳಿಗೆ ಬಳಕೆ ಮಾಡಬೇಕು. ಕಳೆದ ವಾರ ಕೇಂದ್ರ ಸರ್ಕಾರ 25 ಸಾವಿರ ವಿಯಾಲ್ಸ್ ಅಕ್ಸಿಜನ್ ರಾಜ್ಯಕ್ಕೆ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಎರಡು ಲಕ್ಷ ವಿಯಾಲ್ಸ್ ಆಕ್ಸಿಜನ್ ಬೇಡಿಕೆ ಇಟ್ಟಿದೆ.

ಮೇ ತಿಂಗಳ ಹೊತ್ತಿಗೆ ಇಪ್ಪತ್ತೈದು ಲಕ್ಷ ವಿಯಾಲ್ಸ್ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತದೆ. ರೆಮ್ಡಿಸಿವರ್ ಔಷಧಿ ಸಹ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿಯೇ ಇರುವ ರೆಮ್ಡಿಸಿವರ್ ತಯಾರಿಕಾ ಕಂಪನಿ ಮೈಲಾನ್​ಗೆ ಭೇಟಿ ನೀಡಲಾಗಿದೆ.

ರೆಮ್ಡಿಸಿವರ್ ಹೆಚ್ಚು ಉತ್ಪಾದನೆ ಮತ್ತು ಪೂರೈಕೆ ಬಗ್ಗೆ ಆಡಳಿತ ಮಂಡಳಿ ಜೊತೆ ಚರ್ಚೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೆಮ್ಡಿಸಿವರ್ ಪೂರೈಕೆ ಬಗ್ಗೆ ಚರ್ಚೆ ನಡೆಸಲಾಗುವುದು. ಕಂಪನಿಯವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದಿದ್ದಾರೆ ಅಂತ ಕೇಂದ್ರ ಸಚಿವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.