ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯ ಇಲಾಖೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಡಿಜಿಟಲೀಕರಣಕ್ಕೆ ಒತ್ತು ನೀಡಲು ಕಿವಿಯೋಲೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 1 ಲಕ್ಷ 87 ಸಾವಿರ ರಾಸುಗಳಿಗೆ, ಮನುಷ್ಯನಿಗೆ ಆಧಾರ್ ಕಾರ್ಡ್ ಸಂಖ್ಯೆಯಂತೆ ಗೋವುಗಳ ಕಿವಿಗೆ ಓಲೆ ಹಾಕಿ, 12 ಸಂಖ್ಯೆಯ ಡೈಸ್ ಅಳವಡಿಸಿ ಡಿಜಿಟಲೀಕರಣಕ್ಕೆ ಒತ್ತು ನೀಡಿದ್ದಾರೆ. ಇದರಿಂದ ಗೋವುಗಳ ಬಗೆಗಿನ ಮಾಹಿತಿಯಾದ ಲಸಿಕೆ, ಗರ್ಭಧಾರಣೆ, ಪಶುವಿನ ಹೆರಿಗೆ, ಕಾಲುಬಾಯಿ ಜ್ವರದ ಲಸಿಕೆ ಹಾಗೂ ಇನ್ನಿತರ ಮಾಹಿತಿಯನ್ನು ಕಂಪ್ಯೂಟರೀಕರಣದ ಮೂಲಕ ಆ್ಯಪ್ ಸಿದ್ಧಪಡಿಸಿ ಕಾರ್ಯನಿರ್ವಹಿಸಲಾಗುತ್ತದೆ.
ಇನಫ್ ಗೋ ಕಿವಿಯೋಲೆ ಯೋಜನೆ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಮತ್ತು ಮಣ್ಣೆ ಪಶು ವೈದ್ಯಾಧಿಕಾರಿಗಳು ಉತ್ತಮವಾಗಿ ಅನುಷ್ಠಾನಗೊಳಿಸಿದ್ದಾರೆ. ವಿಶೇಷವೆಂದರೆ, ಒಂದು ವೇಳೆ ರಾಸುಗಳು ಕಳೆದು ಹೋದರೆ, ಮಾಲೀಕ ಬದಲಾದರೆ, ಆ ಗೋವು ಯಾವ ಪ್ರದೇಶದಲ್ಲಿದೆ ಎಂಬ ಮಾಹಿತಿಯನ್ನು ತಿಳಿಯಬಹುದಾಗಿದೆ.
ಇನಫ್ ಯೋಜನೆಯಡಿ ಜಿಲ್ಲೆಯ 1 ಲಕ್ಷದ 87 ಸಾವಿರ ರಾಸುಗಳಿಗೆ ಹಾಗೂ ಗೋವುಗಳಿಗೆ ಕಿವಿಯೋಲೆ ಹಾಕಲಾಗಿದೆ. ಇದು ಆ್ಯಪ್ ಮೂಲಕ ಕಂಪ್ಯೂಟರೀಕರಣದ ಜೊತೆಗೆ ಡಿಜಟಲೀಕರಣಕ್ಕೂ ಒತ್ತು ನೀಡಿದೆ. ರಾಸುಗಳ ಸಂಪೂರ್ಣ ಇತಿಹಾಸವನ್ನು ವೈದ್ಯರು ಮತ್ತು ಗೋವಿನ ಪಾಲಕರು ತಿಳಿಯಲು ನೆರವಾಗಲಿದೆ.
ಕೈ ಬೆರಳಿನಂಚಿನಲ್ಲಿ ಮಾಹಿತಿ ಎಂಬಂತೆ, ಕೇಂದ್ರ ಸರ್ಕಾರದ ಡಿಜಟಲೀಕರಣ ಭಾಗವಾಗಿ ಈ ಇನಫ್ ಆ್ಯಪ್ನಿಂದಾಗಿ ಗೋವುಗಳ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.