ETV Bharat / state

ನೆಲಮಂಗಲ: ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ 13 ಕ್ಲಿನಿಕ್‌ಗಳು​ ಸೀಜ್ - ಬಯೋಮೆಡಿಕಲ್​ ವೇಸ್ಟ್​

Unauthorized clinics seized: ಕೆಪಿಎಂಇ ಆ್ಯಕ್ಟ್ ಪ್ರಕಾರ, ಯಾವುದೇ ಖಾಸಗಿ ಕ್ಲಿನಿಕ್​/ಆಸ್ಪತ್ರೆ, ಲ್ಯಾಬ್​ಗಳು ಪ್ರಾರಂಭವಾಗುವುದಕ್ಕೂ ಮೊದಲೇ ಪರವಾನಗಿ ಪಡೆದುಕೊಳ್ಳಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಹೇಮಾವತಿ ಹೇಳಿದ್ದಾರೆ.

Health officer seizes 13 clinics across taluk
ತಾಲೂಕಿನಾದ್ಯಂತ 13 ಕ್ಲಿನಿಕ್​ ಸೀಜ್​ ಮಾಡಿದ ಆರೋಗ್ಯಾಧಿಕಾರಿ
author img

By ETV Bharat Karnataka Team

Published : Dec 15, 2023, 4:27 PM IST

Updated : Dec 15, 2023, 5:23 PM IST

ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ 13 ಕ್ಲಿನಿಕ್‌ಗಳು​ ಸೀಜ್

ನೆಲಮಂಗಲ: ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್​ಗಳ ಮೇಲೆ ತಾಲೂಕು ವೈದ್ಯಾಧಿಕಾರಿ ಡಾ.ಹೇಮಾವತಿ ಹಾಗೂ ಅಧಿಕಾರಿಗಳ ತಂಡ ಗುರುವಾರ ದಾಳಿ ನಡೆಸಿದ್ದು, 13 ಕ್ಲಿನಿಕ್​ಗಳಿಗೆ ಬೀಗ ಜಡಿದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಟಿಹೆಚ್​ಒ ಡಾ.ಹೇಮಾವತಿ, "ಸೋಂಪುರ ಹೋಬಳಿಯಲ್ಲಿ 5 ಸೇರಿದಂತೆ ತಾಲೂಕಿನಾದ್ಯಂತ 13 ಅನಧಿಕೃತ ಕ್ಲಿನಿಕ್​ಗಳ ಮೇಲೆ ದಾಳಿ ಮಾಡಿದ್ದು, ಎಲ್ಲಾ ಕ್ಲಿನಿಕ್‌ಗಳಿಗೂ ಬೀಗ ಜಡಿಯಲಾಗಿದೆ. ಬಾಗಿಲಿನ ಮೇಲೆ ನೋಟಿಸ್​ ಹಚ್ಚಲಾಗಿದೆ. ಪರವಾನಗಿ ಇಲ್ಲದೆ ಅನಧಿಕೃತವಾಗಿ 'ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಶ್​ಮೆಂಟ್​ ಆ್ಯಕ್ಟ್ 2009' ಪ್ರಕಾರ ನಮೂದಿಸದೇ ಇದ್ದ ಕ್ಲಿನಿಕ್​ಗಳಿಗೆ ನೋಟಿಸ್​ ನೀಡಲಾಗಿತ್ತು. ಆದರೆ ಕೆಲವು ಕ್ಲಿನಿಕ್​ಗಳು ನೋಟಿಸ್ ನೀಡಿದರೂ ಸ್ಪಂದಿಸಿರಲಿಲ್ಲ. ಅಂತಹ ಕ್ಲಿನಿಕ್​ಗಳಾದ, ಸೋಂಪುರದ ಮೂಲವ್ಯಾಧಿ ಚಿಕಿತ್ಸಾಲಯ, ಪೆಮ್ಮನಹಳ್ಳಿಯ ಶ್ರೀ ತಿರುಮಲ ಕ್ಲಿನಿಕ್, ನಿಡವಂದದ ಸಿದ್ಧಗಂಗಾ, ಶ್ರೀ ಮಾರುತಿ, ಶ್ರೀ ನಂದಿ ಹಾಗೂ ನರಸೀಪುರದ ಮಾರುತಿ ಕ್ಲಿನಿಕ್​ಗಳನ್ನು ಸೀಜ್ ಮಾಡಲಾಗಿದೆ" ಎಂದು ತಿಳಿಸಿದರು.

"ಕೆಪಿಎಂಇ ಆ್ಯಕ್ಟ್ 2009ರ​ ಪ್ರಕಾರ ಯಾವುದೇ ಖಾಸಗಿ ಕ್ಲಿನಿಕ್​ ಅಥವಾ ಆಸ್ಪತ್ರೆ, ಲ್ಯಾಬ್​ಗಳು ಪ್ರಾರಂಭ ಆಗುವುದಕ್ಕೂ ಮೊದಲೇ ಪರವಾನಗಿ ಪಡೆದುಕೊಳ್ಳಬೇಕು. ಇದರಡಿಯಲ್ಲಿ ಅವರು ಕೆಲವು ನಿಯಮ ಹಾಗೂ ನಿಬಂಧನೆಗಳನ್ನು ಯಾವ ರೀತಿ ಪಾಲಿಸುತ್ತಾರೆ, ವಿದ್ಯಾರ್ಹತೆ ಏನು, ಬಯೋಮೆಡಿಕಲ್​ ವೇಸ್ಟ್​ ಏನು, ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ಅವರಿಗೆ ರಿಜಿಸ್ಟ್ರೇಷನ್​ಗೆ ಅವಕಾಶ ಕೊಡುತ್ತೇವೆ. ಇದರಿಂದ ಸಾರ್ವಜನಿಕರಿಗೆ ಸುಧಾರಿತ ಆರೋಗ್ಯ ಸೇವೆ ದೊರಕಲು ಸಾಧ್ಯವಾಗುತ್ತದೆ."

"ಆದರೆ ಕೆಲವೊಂದು ಸಂಸ್ಥೆಗಳು ಈ ಪರವಾನಗಿ ಪಡೆಯದೇ ಕೆಲಸ ನಿರ್ವಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅಂತಹ ಸಂಸ್ಥೆಗಳಿಗೆ, ರಿಜಿಸ್ಟ್ರೇಸನ್​ ಮಾಡಿಸಿಕೊಳ್ಳುವಂತೆ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ನಾವು ನೋಟಿಸ್​ ಕೊಟ್ಟಿದ್ದೆವು. ಆದರೆ ಕೆಲವು ಕ್ಲಿನಿಕ್​ಗಳು ನೋಟಿಸ್​ಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಹಾಗೇ ಕಾರ್ಯ ನಿರ್ವಹಿಸುತ್ತಿದ್ದವು. ಜಿಲ್ಲಾಧಿಕಾರಿ ಹಾಗೂ ಡಿಹೆಚ್​ಒ ಆದೇಶದ ಮೇಲೆ ಅಂತಹ ಕ್ಲಿನಿಕ್​ಗಳ ಮೇಲೆ ತಂಡದ ಜೊತೆ ದಾಳಿ ನಡೆಸಿ, ಸೀಜ್​ ಮಾಡಿದ್ದೇವೆ."

ಮಧ್ಯವರ್ತಿಗಳು ಬೇಡ: "ಅವರ ವಿದ್ಯಾರ್ಹತೆ ಸರಿ ಇಲ್ಲದೇ ಇದ್ದು, ನಾವು ರಿಜೆಕ್ಟ್​ ಮಾಡುತ್ತೇವೆಂದು ರಿಜಿಸ್ಟ್ರೇಷನ್​ ಮಾಡಿಸಿಕೊಳ್ಳದೇ ಇರಬಹುದು. ಆನ್​ಲೈನ್​ನಲ್ಲಿ ಹೇಗೆ ಮಾಡೋದು ಎನ್ನುವುದು ಗೊತ್ತಿಲ್ಲದೇ ಇರಬಹುದು. ಅದಕ್ಕೆ ನಾವು ಸಹಾಯ ಮಾಡುತ್ತೇವೆ. ಆದರೆ ಕೆಲವು ನಮ್ಮ ಬಳಿ ಬರದೆ ಮಧ್ಯವರ್ತಿಗಳ ಬಳಿ ಹೋಗುತ್ತದೆ. ಮಧ್ಯವರ್ತಿಗಳ ಬಳಿ ಹೋಗದೆ, ಆನ್​ಲೈನ್​ನಲ್ಲಿ ಯಾವ ರೀತಿ ಮಾಡಬೇಕು ಎನ್ನುವುದಕ್ಕೆ ಮಾಹಿತಿ ಇದೆ. ಅದಲ್ಲದೇ ಇದ್ದರೆ, ನಮ್ಮ ಆರೋಗ್ಯ ಇಲಾಖೆ ಅವರಿಗೆ ಸಹಾಯ ಮಾಡುತ್ತದೆ" ಎಂದು ಮನವಿ ಮಾಡಿದರು.

"ಟಿಹೆಚ್‌ಒ ಹೆಸರು ಬಳಸಿ, ಕ್ಲಿನಿಕ್​ಗಳ ಮೇಲೆ ಕೆಲ ವ್ಯಕ್ತಿಗಳು ಮತ್ತು ಸಂಘಟನೆಯವರು ನಕಲಿ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಇಲ್ಲ. ಒಂದು ವೇಳೆ ಹಣಕ್ಕಾಗಿ ನಕಲಿ ದಾಳಿ ನಡೆಸಿರುವ ಬಗ್ಗೆ ಸಾಕ್ಷ್ಯ ಮತ್ತು ದಾಖಲೆ ಸಿಕ್ಕಿದರೆ, ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸುತ್ತೇವೆ ಮತ್ತು ಪೊಲೀಸರಿಗೆ ದೂರು ನೀಡುತ್ತೇನೆ" ಎಂದರು.

ಬುಧವಾರ ಕೂಡ ತಾಲೂಕಿನ ಯಂಟಗಾನಹಳ್ಳಿ, ಕುಲುವನಹಳ್ಳಿ, ವಾಜರಹಳ್ಳಿಯಲ್ಲಿ ಕ್ಲಿನಿಕ್​ಗಳಿಗೆ ಬೀಗ ಜಡಿದ ಹಿನ್ನೆಲೆಯಲ್ಲಿ ಗುರುವಾರ ಎಲ್ಲಾ ಕ್ಲಿನಿಕ್​ಗಳು ಬೀಗ ಹಾಕಿ, ನಕಲಿ ವೈದ್ಯರು ಪರಾರಿಯಾಗಿದ್ದರು.

ಈ ದಾಳಿಯಲ್ಲಿ ಆರೊಗ್ಯ ನಿರೀಕ್ಷಣಾಧಿಕಾರಿ ನಾಗೇಶ್, ಸಿಬ್ಬಂದಿ ಮಂಜುನಾಥ್, ನಾಗರ್ಜುನ್, ಚಾಲಕ ಗಿರೀಶ್, ಪೊಲೀಸ್ ಕಾನ್ಸ್‌ಟೆಬಲ್‌ ಪೀರ್ ಸಾಬ್ ಸೇರಿದಂತೆ ಇನ್ನಿತರರಿದ್ದರು.

ಇದನ್ನೂ ಓದಿ: ಬೀದರ್ : ನಕಲಿ ಕ್ಲಿನಿಕ್​ಗಳ ಮೇಲೆ ವೈದ್ಯಾಧಿಕಾರಿಗಳಿಂದ ದಿಢೀರ್ ದಾಳಿ, ಪರಿಶೀಲನೆ

Last Updated : Dec 15, 2023, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.