ETV Bharat / state

ವಿದೇಶಿ ಯುವತಿ ಕಿಡ್ನಾಪ್​​ ಪ್ರಕರಣ: ಕೊನೆಗೂ ಸಿಕ್ಕಿ ಬಿದ್ದ ಆರೋಪಿಗಳು ಅಂದರ್​​ - ಉಗಾಂಡ ಮೂಲದ ಯುವತಿ ಅಪಹರಣ ಸುದ್ದಿ

ಬೆಂಗಳೂರಿನಲ್ಲಿ ಉಗಾಂಡ ದೇಶದ ಯುವತಿಯನ್ನು ಕಿಡ್ನಾಪ್​ ಮಾಡಿ ಹಣ ದೋಚಿದ್ದ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

uganda lady kidnapped accuses arrested
ಹಣ ದೋಚಿದ ಆರೋಪಿಗಳು ಅಂದರ್​​
author img

By

Published : Jan 23, 2020, 11:42 PM IST

ದೊಡ್ಡಬಳ್ಳಾಪುರ: ಬೆಂಗಳೂರಿನಲ್ಲಿ ಉಗಾಂಡ ದೇಶದ ಯುವತಿಯನ್ನು ಕಿಡ್ನಾಪ್​ ಮಾಡಿ ಆಕೆಯ ಹಣ ದೋಚಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಿಡ್ನಿಸ್ಟೋನ್ ಚಿಕಿತ್ಸೆಗಾಗಿ ದೂರದ ಉಗಾಂಡ ದೇಶದಿಂದ ಯುವತಿಯೊಬ್ಬಳು ಬೆಂಗಳೂರಿಗೆ ಬಂದಿದ್ಲು. ರಾತ್ರಿ 10ರ ಸಮಯದಲ್ಲಿ ಓಲಾ ಕ್ಯಾಬ್ ಬುಕ್ ಮಾಡಿ ಆಕೆ ಕಮ್ಮನಹಳ್ಳಿಯಿಂದ ಕೊತ್ತನೂರಿನ ಕಡೆ ಹೋಗುವಂತೆ ಕ್ಯಾಬ್ ಡ್ರೈವರ್ ಗೆ ಹೇಳಿದ್ಲು. ಆದರೆ, ಚಾಲಕ ತನ್ನ ಮೂವರು ಸ್ನೇಹಿತರ ಜೊತೆಯಾಗಿ ಗಾಡಿ ತಿರುಗಿಸಿದ್ದು ದೊಡ್ಡಬಳ್ಳಾಪುರದತ್ತ. ಆಗ ಓಲಾ ಡ್ರೈವರ್ ಮತ್ತು ಆತನ ಮೂವರು ಸ್ನೇಹಿತರ ಕೈಗೆ ಸಿಕ್ಕ ಒಂಟಿ ವಿದೇಶಿ ಯುವತಿಯನ್ನು ಇವರು ಬೆತ್ತಲಾಗಿಸಿದ್ರು.

ಹಣ ದೋಚಿದ ಆರೋಪಿಗಳು ಅಂದರ್​​

ಅಂದು ನಡೆದಿದ್ದಾದರೂ ಏನು? : ಜ. 16ರ ರಾತ್ರಿ 10 ಗಂಟೆಗೆ ಕಮ್ಮನಹಳ್ಳಿಯಿಂದ ನವಜ್ಯೋತಿ ಸ್ಟ್ರೀಟ್ ಗೆ ಹೋಗಲು ಓಲಾ ಕ್ಯಾಬ್ ಬುಕ್ ಮಾಡಿದ್ದ ಯುವತಿ. ಕ್ಯಾಬ್ ಹತ್ತು ಕಿ.ಮೀ ನಷ್ಟು ದೂರ ಸಾಗಿತಾಗ, ಕ್ಯಾಬ್ ಚಾಲಕನ ಮೂವರು ಸ್ನೇಹಿತರು ಕಾರ್​ ಹತ್ತಿದ್ರು. ಆಕೆ ಹೇಳಿದ ಸ್ಥಳಕ್ಕೆ ಹೋಗದೆ ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರ ಕಡೆಗೆ ಬಂದಿದ್ರು. ದೊಡ್ಡಬಳ್ಳಾಪುರದ ಆಲಹಳ್ಳಿಯ ಬಳಿ ಕಾರು ನಿಲ್ಲಿಸಿದ್ದ ಅವರು ಆಕೆಗೆ ಚಾಕುವಿನಿಂದ ಹೆದರಿಸಿ, ಕುತ್ತಿಗೆ ಹಿಡಿದು ಯುವತಿಯ ಬಳಿ ಇದ್ದ ಮೊಬೈಲ್, ಪರ್ಸ್, ಚಿನ್ನದ ಒಡವೆ, ಹಣ ಕಿತ್ತುಕೊಂಡಿದ್ದರು. ನಂತರ ಆಕೆ ಧರಿಸಿದ್ದ ಬಟ್ಟೆ ಬಿಚ್ಚಿಸಿ ಕಾರಿನಿಂದ ಹೊರ ತಳ್ಳಿ ಅಲ್ಲಿಂದ ಪರಾರಿಯಾಗಿದ್ದರು. ಆಗ ನಸುಕಿನ 4 ಗಂಟೆಯ ಸಮಯದ ಆ ಕತ್ತಲಲ್ಲಿ ತೋಟದ ಮನೆಗೆ ತೆರಳಿದ್ದ ಸಂತ್ರಸ್ತೆ ಅಲ್ಲಿದ್ದವರ ಸಹಾಯ ಪಡೆದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಳು. ದೈಹಿಕ ಹಲ್ಲೆ, ಲೈಂಗಿಕ ದೌರ್ಜನ್ಯ, ಹಣ ಒಡವೆ ಕಿತ್ತುಕೊಂಡ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚನೆಯಾಗಿತ್ತು. ಒಂದು ವಾರದೊಳಗೆ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳ್ಳತನ ಪ್ರಕರಣಗಳಲ್ಲಿ ಭಾಗಿ :ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ 21 ವರ್ಷದ ಅಭಿಷೇಕ್ ಅಲಿಯಾಸ್ ಉಮೇಶ್, ಮಾರತ್ತಹಳ್ಳಿಯ ಯಮಲೂರು ನಿವಾಸಿ ಓಲಾ ಕ್ಯಾಬ್ ಡ್ರೈವರ್ ಕೆಲಸ ಮಾಡುತ್ತಿದ್ದ. ಇನ್ನುಳಿದ ಮೂವರು ಅಪ್ರಾಪ್ತರಾದ ಕಾರಣಕ್ಕೆ ಬಾಲ ನ್ಯಾಯ ಮಂಡಳಿಗೆ ಕಳುಹಿಸಲಾಗಿದೆ. ಈ ಹಿಂದೆಯೂ ಮೊಬೈಲ್ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದರು.

ಕಳ್ಳರು ಬಲೆಗೆ ಬಿದ್ದಿದ್ದು ಹೇಗೆ?: ಅಂದಹಾಗೆ ಆರೋಪಿಗಳ ಪತ್ತೆಗೆ ಸಹಾಯಕವಾಗಿದ್ದು ಕಮ್ಮನಹಳ್ಳಿಯಲ್ಲಿನ ಸಿಸಿಟಿವಿ​. ಸಿಸಿಟಿವಿಯಿಂದ ಕೃತ್ಯಕ್ಕೆ ಬಳಸಲಾದ ಕಾರು ಪತ್ತೆಯಾಗಿತ್ತು. ನಂತರ ಕೋರಮಂಗಲ ಆರ್​​​ಟಿಒ ಕಚೇರಿಯಲ್ಲಿ ನೋಂದಣಿಯಾಗಿದ್ದ ಕಾರಿನ ಮಾಹಿತಿ ಕಲೆಹಾಕಿ ಕಾರಿನ ಮಾಲೀಕನನ್ನ ಪತ್ತೆ ಮಾಡಲಾಗಿತ್ತು. ಆ ಮೂಲಕ ಕ್ಯಾಬ್ ಡ್ರೈವರ್ ಅಭಿಷೇಕ್ ಪೊಲೀಸರ ಬಲೆಗೆ ಬಿದ್ದ. ಈತನ ಮೂಲಕ ಇನ್ನುಳಿದವರು ಸಹ ಸಿಕ್ಕಿಬಿದ್ದಿದ್ದಾರೆ ಎಂದು ಎಸ್​ಪಿ ರವಿ ಡಿ. ಚನ್ನಣ್ಣನವರ್​ ಮಾಹಿತಿ ನೀಡಿದ್ದಾರೆ.

Intro:ವಿದೇಶಿ ಯುವತಿಯ ಬೆತ್ತಲೆಗೊಳಿಸಿ ಹಣ ದೋಚಿದ ಆರೋಪಿಗಳ ಬಂಧನ

Body:ವಿದೇಶಿ ಯುವತಿಯ ಬೆತ್ತಲೆಗೊಳಿಸಿ ಹಣ ದೋಚಿದ ಆರೋಪಿಗಳ ಬಂಧನ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.