ETV Bharat / state

ನೆಲಮಂಗಲದ ಎರಡು ದೇವಾಲಯಗಳಲ್ಲಿ ಕಳವು: ಲಕ್ಷಾಂತರ ರೂ‌ ದೋಚಿ ಖದೀಮರು‌ ಎಸ್ಕೇಪ್​​ - ನೆಲಮಂಗಲದಲ್ಲಿ ಪ್ರತ್ಯೇಕ ಕಳ್ಳತನ ಪ್ರಕರಣ

ನಿನ್ನೆ ತಡರಾತ್ರಿ ನೆಲಮಂಗಲದ ಎರಡು ದೇವಾಲಯಗಳಲ್ಲಿ ಕಳ್ಳತನ ನಡೆದಿದ್ದು, ಚಿನ್ನಾಭರಣ ಸೇರಿದಂತೆ ಹಣ ದೋಚಿ ಕಳ್ಳರು ಎಸ್ಕೇಪ್​ ಆಗಿದ್ದಾರೆ.

KN_BNGRURAL
ನೆಲಮಂಗಲದ ಎರಡು ದೇವಾಲಯಗಳಲ್ಲಿ ಕಳವು
author img

By

Published : Dec 12, 2022, 11:56 AM IST

ನೆಲಮಂಗಲ (ಬೆಂಗಳೂರು ಗ್ರಾಮಾಂತರ): ತಾಲೂಕಿನಲ್ಲಿ‌ ಎರಡು ದೇವಾಲಯಗಳಿಗೆ ಖದೀಮರು ಕನ್ನ ಹಾಕಿದ್ದಾರೆ. ನೆಲಮಂಗಲದ ಕಳಲಘಟ್ಟ ಗ್ರಾಮದ ಶ್ರೀ ರಂಗನಾಥ್ ಸ್ವಾಮಿ ದೇವಾಲಯದಲ್ಲಿ ಕಿಟಕಿ ಕಂಬಿ ಮುರಿದು ಒಳಗೆ ನುಗ್ಗಿರುವ ಖದೀಮರು ಹುಂಡಿಯ ಬೀಗ ಒಡೆದು ಲಕ್ಷಾಂತರ ರೂಪಾಯಿ ಹಣ ದೋಚಿ ಎಸ್ಕೇಪ್ ಆಗಿದ್ದಾರೆ.

ದೇವಸ್ಥಾನದಲ್ಲಿ ಕಳೆದ 4 ವರ್ಷಗಳಿಂದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿರಲಿಲ್ಲ. ಮತ್ತೊಂದೆಡೆ ತಡರಾತ್ರಿ ನರಸಾಪುರದ ಶ್ರೀಮಹಾಲಕ್ಷ್ಮಿ ದೇವಾಲಯಕ್ಕೆ ಖದೀಮರು ಕನ್ನ ಹಾಕಿದ್ದಾರೆ. ದೇವಾಲಯದ ಬೀಗ ಒಡೆದು ಹುಂಡಿ ಹಣ, ಚಿನ್ನಾಭರಣ ಕಳವು‌ ಮಾಡಲಾಗಿದೆ. ದೇವರ ಮೇಲಿನ ಸುಮಾರು 2.5 ಲಕ್ಷ ಮೌಲ್ಯದ 45-50 ಗ್ರಾಂ ತೂಕದ ಚಿನ್ನಾಭರಣ ಹಾಗೂ ಹುಂಡಿಯಲ್ಲಿದ್ದ ಸುಮಾರು 25-30 ಸಾವಿರ ಹಣ ಕಳವು ಮಾಡಲಾಗಿದೆ.

ಹುಂಡಿಯನ್ನ ಹೊತ್ತೊಯ್ದ ಕಳ್ಳರು ಅದರಲ್ಲಿನ ಹಣ ದೋಚಿ, ಊರಿನ ಹೊರವಲಯದಲ್ಲಿ ಹುಂಡಿಯನ್ನು ಬಿಸಾಡಿದ್ದಾರೆ. ಘಟನಾ ಸ್ಥಳಗಳಿಗೆ ತ್ಯಾಮಗೊಂಡ್ಲು ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರತ್ಯೇಕ ಕಳ್ಳತನ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ವೃತ್ತಿಯಲ್ಲಿ ಶಿಕ್ಷಕ ಮಾಡೋದೆಲ್ಲಾ ಕಳ್ಳತನ.. 18 ದೇವಸ್ಥಾನದಲ್ಲಿ ಕನ್ನ ಹಾಕಿದವರು ಕೊನೆಗೂ ಅಂದರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.