ETV Bharat / state

ಕೊಟ್ಟಿಗೆಯಲ್ಲಿದ್ದ ಹಸುಗಳನ್ನು ಕದ್ದೊಯ್ದ ಕಳ್ಳರು: ದಿನೇ ದಿನೆ ಹೆಚ್ಚುತ್ತಿದೆ ಜಾನುವಾರುಗಳ ಕಳ್ಳತನ - ಈಟಿವಿ ಭಾರತ್​ ಕನ್ನಡ

ಮಧ್ಯರಾತ್ರಿ ಆಗಮಿಸಿದ ಕಳ್ಳರು ಜಾನುವಾರುಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಅಲ್ಲದೇ ತಾಲೂಕಿನಲ್ಲಿ ಜಾನುವಾರು ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ.

the-thieves-who-stole-the-cows-at-doddaballapur
ಕೊಟ್ಟಿಗೆಯಲ್ಲಿದ್ದ ಹಸುಗಳನ್ನು ಕದ್ದೊಯ್ದ ಕಳ್ಳರು : ದಿನೇ ದಿನೇ ಹೆಚ್ಚುತ್ತಿದೆ ಜಾನುವಾರುಗಳ ಕಳ್ಳತನ
author img

By

Published : Nov 5, 2022, 3:18 PM IST

ದೊಡ್ಡಬಳ್ಳಾಪುರ : ಮಧ್ಯರಾತ್ರಿ ಕಳ್ಳರು ಜಾನುವಾರುಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ನಗರದ ಹೊರವಲಯದ ಬೆಸೆಂಟ್ ಪಾರ್ಕ್ ಬಳಿಯ ಶ್ರೀಸಾಯಿ ನಗರದಲ್ಲಿ ನಡೆದಿದೆ. ಕಳ್ಳರು 4 ಹಸುಗಳ ಕಳವು ಮಾಡಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇತ್ತೀಚಿಗೆ ತಾಲೂಕಿನಲ್ಲಿ ಜಾನುವಾರುಗಳ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು ಜನರನ್ನು ಆತಂಕಕ್ಕೀಡು ಮಾಡಿದೆ.

ಕೊಟ್ಟಿಗೆಯಲ್ಲಿದ್ದ ಹಸುಗಳನ್ನು ಕದ್ದೊಯ್ದ ಕಳ್ಳರು : ದಿನೇ ದಿನೇ ಹೆಚ್ಚುತ್ತಿದೆ ಜಾನುವಾರುಗಳ ಕಳ್ಳತನ

ಸಹೋದರಾದ ಮುರುಳೀಧರ್ ಮತ್ತು ಪುನೀತ್ ಜೀವನೋಪಾಯಕ್ಕೆ ಪಶುಸಂಗೋಪನೆ ಮಾಡಿಕೊಂಡಿದ್ದರು. ಒಟ್ಟು 9 ಹಸುಗಳನ್ನು ಸಾಕುತ್ತಿದ್ದ ಸಹೋದರರು ರಾತ್ರಿ ವೇಳೆ ಸಾಯಿಬಾಬಾ ದೇವಸ್ಥಾನದ ಪಕ್ಕದಲ್ಲಿನ ಕೊಟ್ಟಿಗೆಯಲ್ಲಿ ಕಟ್ಟುತ್ತಿದ್ದರು. ಅಕ್ಟೋಬರ್ 31ರ ಮಧ್ಯರಾತ್ರಿ 3 ಗಂಟೆ ಹೊತ್ತಿಗೆ ಕೊಟ್ಟಿಗೆಯ ಒಡೆದ ತೆಗೆದ ಕಳ್ಳರು 4 ಹಸುಗಳನ್ನು ಬೊಲೆರೋ ವಾಹನದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಒಟ್ಟು 6 ಜನರ ತಂಡ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದು, ಕಳ್ಳರ ಚಲನವನ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಾಲೂಕಿನಲ್ಲಿ ಹೆಚ್ಚಿರುವ ಜಾನುವಾರು ಕಳ್ಳತನ ಪ್ರಕರಣ: ಅಲ್ಲದೇ ಅಕ್ಟೋಬರ್ 28 ರಂದು ಹಾಡೋನಹಳ್ಳಿ ಗ್ರಾಮದಲ್ಲಿ ಸುಬ್ರಮಣಿ ಎಂಬುವರಿಗೆ ಸೇರಿದ 20 ಕುರಿ ಮೇಕೆಗಳ ಕಳ್ಳತನ, ಅಕ್ಟೋಬರ್ 29 ರಂದು ಸೊಣ್ಣಮಾರಪ್ಪನಹಳ್ಳಿಯಲ್ಲಿ 20 ಕುರಿ ಮೇಕೆಗಳ ಕಳ್ಳತನ, ಅಕ್ಟೋಬರ್ 30 ರಂದು ಕೋಡಿಹಳ್ಳಿಯ ಚಂದ್ರಪ್ಪ ರವರಿಗೆ ಸೇರಿದ 20 ಕುರಿಗಳ ಕಳ್ಳತನ, ಆಕ್ಟೋಬರ್ 31 ರಂದು ಮರುಳೀಧರ್ ಅವರ 4 ಹಸುಗಳ ಕಳ್ಳತನವಾಗಿದೆ. ದಿನೇ ದಿನೇ ಜಾನುವಾರುಗಳ ಕಳ್ಳತನ ಪ್ರಕರಣಗಳು ರೈತರ ನಿದ್ದೆಗೆಡಿಸಿದೆ.

ಜಾನುವಾರುಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದರೂ ಪೊಲೀಸ್​ ಇಲಾಖೆ ಕಳ್ಳರನ್ನು ಸೆರೆಹಿಡಿಯುವಲ್ಲಿ ವಿಫಲವಾಗಿದೆ. ಪೊಲೀಸರ ವೈಫಲ್ಯವೇ ಕಳ್ಳತನ ಪ್ರಕರಣ ಹೆಚ್ಚಾಗಲು ಕಾರಣ ಎಂದು ರೈತರು ದೂರಿದ್ದಾರೆ.

ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ವೃದ್ಧೆ ಸಾಕಿದ್ದ 10ಕ್ಕೂ ಹೆಚ್ಚು ಜಾನುವಾರುಗಳ ಕಳ್ಳತನ: ಬೀದಿಗೆ ಬಿದ್ದ ಹಿರಿಯ ಜೀವ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.