ಬೆಂಗಳೂರು: ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ವಿವಾಹಿತ ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಂದ ಘಟನೆ ಮಗುವಿನ ಹೇಳಿಕೆಯಿಂದ ಬಯಲಾಗಿದೆ.
ಸುಮಲತಾ ಮೃತ ಗೃಹಿಣಿಯಾಗಿದ್ದು, ಆಕೆಯ ಮಗುವಿನ ಮುಂದೆಯೇ ವೆಂಕಟೇಶ್ ಎಂಬಾತ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ವೃತ್ತಿಯಲ್ಲಿ ಗಾರ್ಮೆಂಟ್ಸ್ ಕಾರ್ಮಿಕಳಾಗಿದ್ದ ಸುಮಲತಾ, ದೇವರಾಜ್ ಎಂಬುವರನ್ನು ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದರು. ಇವರ ಬಾಳಿನಲ್ಲಿ ಎಂಟ್ರಿ ಕೊಟ್ಟ ವೆಂಕಟೇಶ್ ಜೊತೆ ಮೃತ ಸುಮಲತಾ ಲವ್ವಿ ಡವ್ವಿ ಶುರು ಮಾಡಿದ್ದಾಳೆ. ಇತ್ತ ಸುಮಲತಾ ಗಂಡ ಕೂಡ ಮತ್ತೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟಕೊಂಡು ಬೆರೋಂದು ಮನೆ ಮಾಡಿದ್ದ ಎನ್ನಲಾಗಿದೆ.
ಇನ್ನು ಮಕ್ಕಳನ್ನು ಬಿಟ್ಟು ನನ್ನೊಂದಿಗೆ ಬಾ ಎಂದು ಮೃತ ಸುಮಲತಾಗೆ ಪ್ರಿಯಕರ ವೆಂಕಟೇಶ್ ಪೀಡಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಒಪ್ಪದ ಕಾರಣ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೊದಲಿಗೆ ಎಲ್ಲರು ಸುಮಲತಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆಂದು ತಿಳಿದು ಅಂತ್ಯಕ್ರಿಯೆ ಮಾಡಿದ್ದರು. ಅದೇ ದಿನ ಸಂಜೆ ಮನೆಗೆ ಬಂದು ಮಗುವಿಗೆ ಜೋಳಿಗೆ ಸೀರೆ ಎಲ್ಲಿ ಎಂದು ಕೇಳಿದಾಗ ಮೂರು ವರ್ಷದ ಮಗು 'ಮಾಮ ಬಂದಿತ್ತು ಅಮ್ಮನಿಗೆ ಹೊಡೆದು ಕತ್ತಿಗೆ ಸೀರೆ ಹಿಂಗೆ ಸುತ್ತಿತ್ತು' ಎಂದು ಹೇಳಿದಾಗಲೇ ಕೊಲೆ ಸತ್ಯ ಬಯಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.