ETV Bharat / state

ಹವಾಮಾನ ವೈಪರೀತ್ಯ: ಹುಬ್ಬಳ್ಳಿಗೆ ಹೊರಟಿದ್ದ ಇಂಡಿಗೋ ವಿಮಾನ ಬೆಂಗಳೂರಿಗೆ ವಾಪಸ್​​​

ಬೆಂಗಳೂರಿನ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ಹೊರಟಿದ್ದ ಇಂಡಿಗೋ ವಿಮಾನ ಹುಬ್ಬಳ್ಳಿಗೆ ತೆರಳಿ ಮಂಜಿನ ಹಿನ್ನೆಲೆ ಬೆಂಗಳೂರಿಗೆ ವಾಪಸ್​ ಆಗಿದೆ.

ಇಂಡಿಗೋ ವಿಮಾನ
ಇಂಡಿಗೋ ವಿಮಾನ
author img

By ETV Bharat Karnataka Team

Published : Oct 13, 2023, 11:38 AM IST

Updated : Oct 13, 2023, 2:46 PM IST

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ತೆರಳಿದ್ದ ಇಂಡಿಗೋ ವಿಮಾನ ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿಗೆ ವಾಪಸ್​ ಆಗಿದೆ. ಬೆಳಗ್ಗೆ 05:50 ಕ್ಕೆ ಕೆಐಎಬಿಯಿಂದ ಹುಬ್ಬಳ್ಳಿಗೆ 6E7227 ಇಂಡಿಗೋ ವಿಮಾನ ತೆರಳಿತ್ತು, ಆದರೆ ಹುಬ್ಬಳ್ಳಿಯಲ್ಲಿ ಮಂಜಿನ ಹಿನ್ನೆಲೆ ವಿಮಾನವನ್ನು ಲ್ಯಾಂಡ್​ ಮಾಡಲು ಅನಾನುಕೂಲವಾದ್ದರಿಂದ ಇಂಡಿಗೋ ಬೆಂಗಳೂರಿಗೆ ರಿಟರ್ನ್​ ಆಗಿದೆ.

ಟೈಮಿಂಗ್ಸ್​ ಪ್ರಕಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿದ್ದ ಇಂಡಿಗೋ ಬೆಳಗ್ಗೆ 07 ಗಂಟೆಗೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು, ಆದರೆ ಸಾಧ್ಯವಾಗದೇ ವಾಪಸ್​​ ಆಗಿದೆ.

ಇಂಡಿಗೋ ರಿಟರ್ನ್ ಹಿನ್ನೆಲೆ ಪ್ರಯಾಣಿಕರ ಪರದಾಟ: ವಿಮಾನ ಬೆಂಗಳೂರಿಗೆ ವಾಪಸ್​​ ಆದ್ದರಿಂದ ಪ್ರಯಾಣಿಕರು ಪರದಾಡಿದರು. ಕೆಲ ಪ್ರಯಾಣಿಕರು ಬೆಂಗಳೂರಿಗೆ ವಾಪಸ್​ ಆದರೆ, ಇನ್ನೂ ಕೆಲ‌ ಪ್ರಯಾಣಿಕರು ಬೆಳಗಾವಿ ವಿಮಾನಗಳಲ್ಲಿ ಪ್ರಯಾಣ ಬೆಳೆಸಿದರು.

ಅಕ್ಟೋಬರ್​​ 6 ರಿಂದ ಆರಂಭವಾದ ಬೆಳಗಾವಿ-ದೆಹಲಿ ಮಧ್ಯೆಯ ವಿಮಾನಸೇವೆ: ಈಗಾಗಲೇ ಹುಬ್ಬಳ್ಳಿ-ದೆಹಲಿ ಮಧ್ಯೆ ವಿಮಾನ ಸೇವೆಯಿದ್ದು, ಬೆಳಗಾವಿ-ದೆಹಲಿ ಮಧ್ಯೆ ಕೂಡ ಬಂದ್​ ಆಗಿದ್ದ ವಿಮಾನ ಸೇವೆ ಪುನರಾರಂಭವಾಗಿದೆ. ಮೊನ್ನೇ ತಾನೇ ಕುಂದಾನಗರದಿಂದ ರಾಷ್ಟ್ರ ರಾಜಧಾನಿಗೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಚಾಲನೇ ನೀಡಿ ಆರಂಭಿಸಲಾಯಿತು. ವಿಮಾನದಲ್ಲಿ ಕನ್ನಡದಲ್ಲೇ ಅನೌನ್ಸಮೆಂಟ್ ಮಾಡುವ ಮೂಲಕ ಪ್ರಯಾಣಿಕರನ್ನು ಪೈಲಟ್​ ಸ್ವಾಗತಿಸಿದ್ದು ಎಲ್ಲರ ಗಮನ ಸೆಳೆದಿತ್ತು.

ಪ್ರತಿದಿನ ದೆಹಲಿಯಿಂದ ಮಧ್ಯಾಹ್ನ 3.45ಕ್ಕೆ ಈ ವಿಮಾನವು ಹೊರಟು ಸಂಜೆ 6.05ಕ್ಕೆ ಸಾಂಬ್ರಾ ವಿಮಾನ ನಿಲ್ದಾಣ ತಲುಪುತ್ತದೆ. ಇಲ್ಲಿಂದ ಸಂಜೆ 6.35ಕ್ಕೆ ಹೊರಟು ರಾತ್ರಿ 9 ಗಂಟೆಗೆ ದೆಹಲಿ ತಲುಪಲಿದೆ. ಇನ್‌ಸ್ಟ್ರುಮೆಂಟ್‌ ಲ್ಯಾಂಡಿಂಗ್ ಸಿಸ್ಟಂ (ಐಎಲ್‌ಎಸ್) ವ್ಯವಸ್ಥೆಯನ್ನು ಈ ವಿಮಾನಕ್ಕೆ ಅಳವಡಿಸಿದ್ದು, ಮೋಡ ಕವಿದ ವಾತಾವರಣ, ಮಳೆ ಸೇರಿದಂತೆ ವಿಷಮ ಸ್ಥಿತಿಗಳಲ್ಲೂ ಈ ವಿಮಾನ ಹಾರಾಟ ನಡೆಸಲಿದೆ.

ಈ ಹಿಂದೆಯೂ ಬೆಳಗಾವಿ- ದೆಹಲಿ ನಡುವೆ ನೇರ ವಿಮಾನ ಸೇವೆ ಇತ್ತು. ಆದರೆ, ಕಾರಣಾಂತರಗಳಿಂದ ವಿಮಾನ ಸಂಸ್ಥೆಗಳು ಸಂಚಾರ ಸ್ಥಗಿತಗೊಳಿಸಿದ್ದವು. ಈ ಕಾರಣದಿಂದ ಜನರು ಹುಬ್ಬಳ್ಳಿ ಇಲ್ಲವೇ ಗೋವಾ ವಿಮಾನ ನಿಲ್ದಾಣಗಳಿಂದ ದೆಹಲಿಗೆ ಹೋಗುವ ಅನಿವಾರ್ಯ ಸೃಷ್ಟಿಯಾಗಿತ್ತು. ಆದರೆ ಮೊನ್ನೆ ಪುನರಾರಂಭದಿಂದ ಈಗ ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಗಳ ಹಲವು ಪ್ರಯಾಣಿಕರು, ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳು, ಜನತೆಗೆ ಸಂತಸ ತಂದಿದೆ‌. ಈ ಸೇವೆಯಿಂದ 2 ಗಂಟೆ 20 ನಿಮಿಷದಲ್ಲಿ ಬೆಳಗಾವಿಯಿಂದ ದೆಹಲಿಗೆ ತಲುಪಬಹುದಾಗಿದೆ.

ಇದನ್ನೂ ಓದಿ: ಬೆಳಗಾವಿ - ದೆಹಲಿ ನೇರ ವಿಮಾನ ಸೇವೆ ಪುನಾರಂಭ: ಮೊದಲ ವಿಮಾನದಲ್ಲೇ ಕನ್ನಡತನ ಮೆರೆದ ಪೈಲಟ್

Last Updated : Oct 13, 2023, 2:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.