ನೆಲಮಂಗಲ: ಕ್ಷುಲ್ಲಕ ಕಾರಣಕ್ಕೆ ಕುಡುಕನೊಬ್ಬ ಲಾಂಗ್ ಹಿಡಿದು ಕ್ಯಾಷಿಯರ್ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನೆಲಮಂಗಲದಲ್ಲಿ ಬಾರ್ವೊಂದರಲ್ಲಿ ನಡೆದಿದೆ.
ನೆಲಮಂಗಲ ಪಟ್ಟಣದ ಶ್ರೀನಿಧಿ ಬಾರ್ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದೆ. ಕುಡಿದ ನಷೆಯಲ್ಲಿ ವಾಜರಹಳ್ಳಿ ನಿವಾಸಿ ಅನಿಲ್ ಕುಮಾರ್ ಎಂಬಾತ ಕೈಯಲ್ಲಿ ಲಾಂಗ್ ಹಿಡಿದು ಏಕಾಏಕಿ ಕ್ಯಾಷಿಯರ್ ಸುಖೇಶ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಈ ವೇಳೆ ಅಲ್ಲೇ ಇದ್ದ ಜನರು ಅನಿಲ್ ಕುಮಾರ್ನನ್ನ ಹಿಡಿದು ಥಳಿಸಿದ್ದಾರೆ. ಸದ್ಯ ಜನರಿಂದ ಧರ್ಮದೇಟು ತಿಂದ ಅನಿಲ್ನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.