ETV Bharat / state

ನೇಕಾರರಲ್ಲದವರ ದಾಖಲೆ ನೀಡಿದಲ್ಲಿ ಪಟ್ಟಿಯಿಂದ ತೆಗೆಯಲಾಗುವುದು : ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕಿ ಸೌಮ್ಯ - Nekar Samman Scheme

ನೇಕಾರಿಕೆ ವೃತ್ತಿ ಮಾಡದವರು ನೇಕಾರ್ ಸನ್ಮಾನ್ ಫಲಾನುಭವಿಗಳಾಗಿದ್ದಾರೆಂಬ ಆರೋಪ-ಮಾಹಿತಿ ನೀಡಿದಲ್ಲಿ ಪಟ್ಟಿಯಿಂದ ತೆಗೆಯಲಾಗುವುದು- ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕಿ ಸೌಮ್ಯ ಮಾಹಿತಿ

ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕಿ ಸೌಮ್ಯ

author img

By

Published : Feb 5, 2023, 6:23 PM IST

ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕಿ ಸೌಮ್ಯ

ದೊಡ್ಡಬಳ್ಳಾಪುರ : ನೇಕಾರರ ಆರ್ಥಿಕ ನೆರವಿಗಾಗಿ ಕೇಂದ್ರ ಸರ್ಕಾರ ನೇಕಾರ್ ಸನ್ಮಾನ್ ಯೋಜನೆ ಜಾರಿ ಮಾಡಿದೆ. ಯೋಜನೆಯಡಿ ನೇಕಾರರ ಅಕೌಂಟ್​ಗೆ 5 ಸಾವಿರ ಹಣವನ್ನ ಜಮೆ ಮಾಡಲಾಗುವುದು. ಆದರೆ ಇಲಾಖೆಯ ಕೆಲವು ಲೋಪಗಳಿಂದ ನೇಕಾರಿಕೆ ವೃತ್ತಿ ಮಾಡದವರು ನೇಕಾರ್ ಸನ್ಮಾನ್ ಫಲಾನುಭವಿಗಳಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕಿ ಸೌಮ್ಯ ಅವರು ನೇಕಾರಿಕೆ ವೃತ್ತಿ ಮಾಡದವರ ಮಾಹಿತಿ ನೀಡಿದಲ್ಲಿ ಅವರ ಹೆಸರನ್ನು ಪಟ್ಟಿಯಿಂದ ತೆಗೆಯುವುದಾಗಿ ಹೇಳಿದ್ದಾರೆ.

ನೇಕಾರ್‌ ಸಮ್ಮಾನ್‌ ಯೋಜನೆಯ ವಿಚಾರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿನ ಶೇ. 30ರಷ್ಟು ನೇಕಾರರ ಖಾತೆಗೆ ಹಣ ಜಮೆಯಾಗದೆ ಇರುವ ಬಗ್ಗೆ ಗೊಂದಲ ಉಂಟಾಗಿದೆ. ದೊಡ್ಡಬಳ್ಳಾಪುರ ನಗರ ಹೊರವಲಯ ಅಪೆರಲ್ಸ್ ಪಾರ್ಕ್ ನಲ್ಲಿರುವ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ಕಚೇರಿಗೆ ನೇಕಾರರು ಭೇಟಿ ನೀಡುತ್ತಿದ್ದಾರೆ. ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಯಾಗದೆ ಇರುವುದು, ನೇಕಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದರ ಬಗ್ಗೆ ಅಧಿಕಾರಿಗಳ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ನೇಕಾರಿಕೆ ವೃತ್ತಿ ಮಾಡದವರು ನೇಕಾರ್ ಸನ್ಮಾನ್ ಯೋಜನೆಯ ಫಲಾನುಭವಿಗಳಾಗಿದ್ದು ಹೇಗೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೇಕಾರರ ಖಾತೆಗೆ ಸರ್ಕಾರದಿಂದ 5 ಸಾವಿರ ರೂಪಾಯಿ ಹಣ ಜಮೆ: ನೇಕಾರ್ ಸನ್ಮಾನ್ ಯೋಜನೆಯ ಬಗ್ಗೆ ಬಂದಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರಾದ ಸೌಮ್ಯರವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 13 ಸಾವಿರಕ್ಕಿಂತ ಹೆಚ್ಚು ನೇಕಾರರಿದ್ದೂ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ತಾಲೂಕಿನಲ್ಲಿ ತಲಾ 400 ರಿಂದ 500 ನೇಕಾರರಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರ ನಡೆಸಿದ ನೇಕಾರರ ಜನಗಣತಿಯಲ್ಲಿ ಸಹಕರಿಸಿದ ನೇಕಾರರ ಖಾತೆಗೆ ಸರ್ಕಾರದಿಂದ 5 ಸಾವಿರ ರೂಪಾಯಿ ಹಣ ಜಮೆಯಾಗಿದೆ ಎಂದು ಹೇಳಿದರು.

ನೇಕಾರರ ಖಾತೆಗೆ ಹಣ ಜಮೆಯಾಗದೆ ಗೊಂದಲಕ್ಕೆ ಕಾರಣ: ನೇಕಾರರ ಗಣತಿ ವೇಳೆ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ನೀಡದೆ ನಿರ್ಲಕ್ಷ್ಯ, ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಮಾಡದಿರುವುದು, ಬ್ಯಾಂಕ್ ಅಕೌಂಟ್ ಡೀ ಆಕ್ಟಿವ್ ಆಗಿರುವುದು ಇದರಿಂದ ನೇಕಾರರ ಖಾತೆಗೆ ಹಣ ಜಮೆಯಾಗದೆ ಗೊಂದಲಕ್ಕೆ ಕಾರಣವಾಗಿದೆ. ಕಳೆದ ಬಾರಿ ನೇಕಾರರ ಗಣತಿ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ಮತ್ತು ವಿದ್ಯುತ್ ಮಗ್ಗಗಳ ಘಟಕದ‌ ಮಾಲೀಕರು ಮಾಹಿತಿ ನೀಡಲು ನಿರ್ಲಕ್ಷಿಸಿದ್ದರು ಮತ್ತು ಕೆಲವು ನೇಕಾರರು ಗಣತಿಯ ವೇಳೆ ಬೇರೆ ಊರಿಗೆ ಹೋಗಿದ್ದೆವು ಎಂದಿದ್ದಾರೆ.

ಇದನ್ನೂ ಓದಿ : ಜನಪ್ರಿಯ ಬಜೆಟ್​​ಗಾಗಿ ಸಿಎಂ ಬೊಮ್ಮಾಯಿ ಸಿದ್ಧತೆ; ಹಣ ಹೊಂದಿಸಲು ರಾಜಸ್ವಗಳ ಮೇಲೆ ಕಣ್ಣು

ನೇಕಾರಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಖಾತರಿ: ಇದರಿಂದಾಗಿ ನಾವು ಗಣತಿಯಲ್ಲಿ ಪಾಲ್ಗೊಳ್ಳಲು ಆಗಿಲ್ಲ. ಆದ್ದರಿಂದ ನೇಕಾರರ ಮರು ಗಣತಿಗೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಹೀಗಾಗಿ ಗಣತಿಗೊಳಪಡದ ನೇಕಾರರು ಕಚೇರಿಗೆ ಬಂದು ದಾಖಲೆಗಳನ್ನು ಸಲ್ಲಿಸಿದ್ದಲ್ಲಿ ಅಧಿಕಾರಿಗಳನ್ನು ನೇಕಾರರ ಮನೆಯ ಬಳಿಗೆ ಕಳುಹಿಸಿ ನೇಕಾರಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಖಾತರಿಪಡಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ : 7ನೇ ರಾಜ್ಯ ವೇತನ ಆಯೋಗದಿಂದ ಪ್ರಶ್ನಾವಳಿ ಬಿಡುಗಡೆ: ಸಲಹೆ, ಅಭಿಪ್ರಾಯ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.