ETV Bharat / state

ವಿದ್ಯುತ್ ಸ್ಪರ್ಶಿಸಿ ಗೃಹಿಣಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಾರಣಕ್ಕೆ ಕೊಲೆ ಆರೋಪ - ಈಟಿವಿ ಭಾರತ ಕರ್ನಾಟಕ

ವಿದ್ಯುತ್ ಸ್ವರ್ಶಿಸಿ ಗೃಹಿಣಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ

suspicious-death-of-housewife-due-to-electric-shock-in-doddaballapura
ವಿದ್ಯುತ್ ಸ್ಪರ್ಶಿಸಿ ಗೃಹಿಣಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಾರಣಕ್ಕೆ ಕೊಲೆ ಆರೋಪ
author img

By

Published : May 15, 2023, 5:09 PM IST

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಹಸುಗಳ ಮೇವಿಗಾಗಿ ವಿದ್ಯುತ್ ಮಷಿನ್ ನಿಂದ ಹುಲ್ಲು ಕಟ್ ಮಾಡುತ್ತಿದ್ದ ಸಮಯದಲ್ಲಿ ವಿದ್ಯುತ್ ಸ್ವರ್ಶಿಸಿ ಗೃಹಿಣಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಪಾಲ್ ಪಾಲ್ ದಿನ್ನೆ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಮನುಶ್ರೀ (29) ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ಕುಟುಂಬಸ್ಥರು ಕೊಲೆಯ ಸಂಶಯ ವ್ಯಕ್ತಪಡಿಸಿದ್ದು, ವರದಕ್ಷಿಣೆ ಹಣಕ್ಕಾಗಿ ಮಗಳನ್ನ ಕೊಲೆ ಮಾಡಿದ್ದಾರೆಂದು ಆರೋಪಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮನುಶ್ರೀಯನ್ನು 10 ವರ್ಷಗಳ ಹಿಂದೆ ಪಾಲ್ ಪಾಲ್ ದಿನ್ನೆ ಗ್ರಾಮದ ಮೋಹನ್ ಕುಮಾರ್​ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆ ಸಮಯದಲ್ಲಿ 10 ಲಕ್ಷ ಮೌಲ್ಯದ ಚಿನ್ನಾಭರಣ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಲಾಗಿತ್ತು. ದಂಪತಿಗೆ ಒಂದು ಗಂಡು ಮಗು ಸಹ ಇದೆ.
ಮದುವೆಯಾದ ಮೊದಲ ಎರಡು ವರ್ಷ ಇಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಗಂಡ ಮೋಹನ್ ಕುಮಾರ್ ಮತ್ತು ಆತನ ಕುಟುಂಬದವರು ಮನುಶ್ರೀಗೆ ಕಿರುಕುಳ ಕೊಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ತವರು ಮನೆಯಿಂದ 10 ಲಕ್ಷ ಹಣ ತರುವಂತೆ ಕಿರುಕುಳ ಕೊಡುತ್ತಿದ್ದಾಗಿ ಮೃತ ಮಹಿಳೆ ಹೆತ್ತವರಿಗೆ ತಿಳಿಸಿದ್ದರಂತೆ.

ಇದನ್ನೂ ಓದಿ:ಕಾಲೇಜಿಗೆ ಹೋಗುವಾಗ ಚಿಗುರಿದ ಪ್ರೀತಿ.. ಮದುವೆ ಸದ್ಯಕ್ಕೆ ಬೇಡ ಅಂದಿದ್ದಕ್ಕೆ ಪ್ರೇಮಿಗಳಿಬ್ಬರು ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.