ETV Bharat / state

ಬೈಕ್ ಮೇಲೆ ಹರಿದ ಕ್ಯಾಂಟರ್: ತಂದೆಯ ಎದುರೇ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಮಗ - ದೊಡ್ಡಬಳ್ಳಾಪುರ ರಸ್ತೆ ಅಪಘಾತ

ಇಂದು ಬೆಳಗ್ಗೆ ಕಾಲೇಜ್​ಗೆ ತನ್ನ ತಂದೆಯ ಜೊತೆ ಮಗ ಬೈಕ್​ನಲ್ಲಿ ಬರುತ್ತಿದ್ದಾಗ ಮುಂಭಾಗದಿಂದ ಬಂದ ಕ್ಯಾಂಟರ್ ಏಕಾಏಕಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ವಿದ್ಯಾರ್ಥಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.

ತಂದೆಯ ಎದುರೇ ಪ್ರಾಣ ಬಿಟ್ಟ ಮಗ
ತಂದೆಯ ಎದುರೇ ಪ್ರಾಣ ಬಿಟ್ಟ ಮಗ
author img

By

Published : Mar 14, 2022, 2:16 PM IST

ದೊಡ್ಡಬಳ್ಳಾಪುರ : ಕಾಲೇಜ್​ಗೆ ತೆರಳುತ್ತಿದ್ದ ತಂದೆ-ಮಗನ ಬೈಕ್​ಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಅಪ್ಪನ ಎದುರೇ ಮಗ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಘಟನೆ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 207ರ ಚುಂಚೇಗೌಡನ ಹೊಸಹಳ್ಳಿ ಗೇಟ್ ಬಳಿ ಈ ರಸ್ತೆ ಅಪಘಾತ ನಡೆದಿದ್ದು, ಅಂಬಲಗೆರೆಯ ನಿವಾಸಿ ವರುಣ್ (18) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಂದೆ ಸಿದ್ದಲಿಂಗಪ್ಪ (54) ಗಾಯಗೊಂಡಿದ್ದಾರೆ.

ಮೃತ ಯುವಕ ದೊಡ್ಡಬಳ್ಳಾಪುರ ನಗರದ ಶ್ರೀವಾಣಿ ಕಾಲೇಜ್​ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಇಂದು ಬೆಳಗ್ಗೆ ಕಾಲೇಜಿಗೆ ತನ್ನ ತಂದೆಯ ಜೊತೆ ಬೈಕ್​ನಲ್ಲಿ ಬರುತ್ತಿದ್ದಾಗ ಮುಂಭಾಗದಿಂದ ಬಂದ ಕ್ಯಾಂಟರ್ ಏಕಾಏಕಿ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಚಾಲಕನನ್ನ ಗ್ರಾಮಸ್ಥರು ಹಿಡಿದು ಪೊಲೀಸ್​ ವಶಕ್ಕೆ ನೀಡಿದ್ದಾರೆ. ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗೋಪಾಲಗೌಡರ ಹೆಸರಿನಲ್ಲಿ ಕೃಷಿಕ, ಸಂಸದೀಯ ಪಟು ಪ್ರಶಸ್ತಿ: ಸಿಎಂ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.