ETV Bharat / state

ಜ.21ನ್ನು ದಾಸೋಹ ದಿನವನ್ನಾಗಿ ಘೋಷಿಸಿ: ಸಿಎಂಗೆ ಶ್ರೀ ರುದ್ರಮುನಿ ಶಿವಾಚಾರ್ಯ ಪತ್ರ - letter to CM

ಡಾ. ಶಿವಕುಮಾರ್ ಸ್ವಾಮೀಜಿ ಲಿಂಗೈಕ್ಯರಾದ ಜ. 21ನ್ನು ದಾಸೋಹ ದಿನವನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಶ್ರೀ ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯರು ಪತ್ರ ಬರೆದಿದ್ದಾರೆ.

Sri Rudramuni Shivacharya wrote letter to CM
ಶ್ರೀ ರುದ್ರಮುನಿ ಶಿವಾಚಾರ್ಯರು
author img

By

Published : Jan 18, 2021, 12:46 PM IST

ನೆಲಮಂಗಲ: ಡಾ. ಶಿವಕುಮಾರ್ ಸ್ವಾಮೀಜಿ ಜ. 21 ರಂದು ಲಿಂಗೈಕ್ಯರಾಗಿ ಎರಡು ವರ್ಷ ಪೂರೈಸಲಿದೆ. ಸ್ವಾಮೀಜಿಯವರ ಪುಣ್ಯಸ್ಮರಣೆಯ ದಿನವನ್ನು ದಾಸೋಹ ದಿನವನ್ನಾಗಿ ಘೋಷಣೆ ಮಾಡುವಂತೆ ನೆಲಮಂಗಲ ತಾಲೂಕು ಶಿವಗಂಗೆ ಕ್ಷೇತ್ರದ ಶ್ರೀ ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯರು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಜ.21ಅನ್ನು ದಾಸೋಹ ದಿನವನ್ನಾಗಿ ಘೋಷಿಸಿ: ಶ್ರೀ ರುದ್ರಮುನಿ ಶಿವಾಚಾರ್ಯ ಒತ್ತಾಯ

ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ಡಾ.ಶಿವಕುಮಾರ್ ಸ್ವಾಮೀಜಿ ಲಿಂಗೈಕೈರಾಗಿ ಜ. 21ಕ್ಕೆ ಎರಡು ವರ್ಷವಾಗಲಿದೆ. ಶತಾಯುಷಿ ಡಾ.ಶಿವಕುಮಾರ್ ಸ್ವಾಮೀಜಿ 82 ವರ್ಷ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾಗಿ ಶೈಕ್ಷಣಿಕ ಕ್ರಾಂತಿ ಮಾಡಿದ್ದರು. ಮಠದಲ್ಲಿ ದಾಸೋಹದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜೀವನ ಕೊಟ್ಟವರು. ಒಂದೇ ಸೂರಿನಡಿ ಏಕಕಾಲಕ್ಕೆ 10 ಸಾವಿರ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹ ನೀಡುತ್ತಿದ್ದರು.

Sri Rudramuni Shivacharya wrote letter to CM
ಸಿಎಂಗೆ ಪತ್ರ ಬರೆದ ಶ್ರೀ ರುದ್ರಮುನಿ ಶಿವಾಚಾರ್ಯರು

ಓದಿ: ಹಿಂದೂ ದೇವಾಲಯಗಳ ಮೇಲಿನ ದಾಳಿ ತಡೆಗೆ ಆಂಧ್ರ ಸರ್ಕಾರ ವಿಫಲ: ಕೇಂದ್ರದ ಮಧ್ಯ ಪ್ರವೇಶಕ್ಕೆ ಪೇಜಾವರ ಶ್ರೀ ಪತ್ರ

ಅವರ ದಾಸೋಹದ ಸೇವೆಯನ್ನ ಚಿರಸ್ಥಾಯಿ ಮಾಡಲು ಸ್ವಾಮೀಜಿ ಲಿಂಗೈಕೈರಾದ ಜ.21ಅನ್ನು ದಾಸೋಹ ದಿನವನ್ನಾಗಿ ಘೋಷಣೆ ಮಾಡುವಂತೆ ರುದ್ರಮುನಿ ಸ್ವಾಮೀಜಿ ಸಿಎಂಗೆ ಪತ್ರ ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.