ETV Bharat / state

ಯುಗಾದಿ ಹಬ್ಬದಂದು ಹಿರಿಯರ ಸಮಾಧಿಗೆ ಇಲ್ಲಿ ನಡೆಯುತ್ತೆ ವಿಶೇಷ ಪೂಜೆ! - ವಿಶೇಷ ಆಚರಣೆ

ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆ ಮತ್ತು ಕಚೇರಿ‌ಪಾಳ್ಯದ ಮಧ್ಯ ಭಾಗದಲ್ಲಿ ಬರುವ ಸ್ಮಶಾನ ಯುಗಾದಿ ಹಬ್ಬದಂದು ವಿಶೇಷ ಮೆರುಗು ಪಡೆಯುತ್ತದೆ - ಯುಗಾದಿ ಹಬ್ಬ‌ದಲ್ಲಿ ಸಂಬಂಧಿಕರ ಸಮಾಧಿ‌ಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲಿದೆ-ಹೊಸ ಬಟ್ಟೆ, ಮನೆಯಲ್ಲಿ ಹಬ್ಬಕ್ಕೆಂದು ಮಾಡಿದ ವಿಶೇಷ ಅಡುಗೆ‌ಗಳನ್ನು ಸಮಾಧಿಗೆ ತಂದು ಎಡೆ ಹಾಕುತ್ತಾರೆ.

ಸಮಾಧಿಗೆ ವಿಶೇಷ ಪೂಜೆ
author img

By

Published : Apr 7, 2019, 5:27 AM IST

ಬೆಂಗಳೂರು: ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ವರ್ಷದ ಆರಂಭ. ಯುಗಾದಿ ಬರುವ ಹದಿನೈದು ದಿನದ ಮುನ್ನವೇ ಹಬ್ಬದ ಕಳೆ ಮನೆಯಲ್ಲಿ ಕಾಣಿಸುತ್ತೆ. ಮೈಸೂರು ಮತ್ತು ಬೆಂಗಳೂರು ಕಡೆ ಯುಗಾದಿ ಹಬ್ಬದ ದಿನ ಸಂಬಂಧಿಕರ ಸಮಾಧಿಗಳಿಗೆ ಪೂಜೆ ಮಾಡುವ ವಿಶೇಷ ಆಚರಣೆ ಇದೆ. ಈ ಮೂಲಕ ಹಿರಿಯರ ನಾಮಸ್ಮರಣೆ ಮಾಡುತ್ತಾರೆ.

ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆ ಮತ್ತು ಕಚೇರಿ‌ಪಾಳ್ಯದ ಮಧ್ಯ ಭಾಗದಲ್ಲಿ ಬರುವ ಸ್ಮಶಾನ ಯುಗಾದಿ ಹಬ್ಬದಂದು ವಿಶೇಷ ಮೆರುಗು ಪಡೆಯುತ್ತದೆ. ಸುಣ್ಣ ಬಣ್ಣದ ಜೊತೆ ಸ್ಮಶಾನದಲ್ಲಿ‌ನ ಸಮಾಧಿಗಳು ಕಂಗೊಳಿಸುತ್ತಿರುತ್ತವೆ.

ಯುಗಾದಿ ಹಬ್ಬದಂದು ಸಂಬಂಧಿಕರ ಸಮಾಧಿಗೆ ವಿಶೇಷ ಪೂಜೆ

ಹೌದು, ಯುಗಾದಿ ಹಬ್ಬ‌ದಲ್ಲಿ ಸಂಬಂಧಿಕರ ಸಮಾಧಿ‌ಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲಿದೆ. ಯುಗಾದಿ ದಿನದ ಹಿಂದಿನ ದಿನವೇ ಸ್ಮಶಾನಕ್ಕೆ ಹೋಗಿ ತಮ್ಮ ಹಿರಿಯರ ಸಮಾಧಿಯನ್ನು ಸ್ವಚ್ಛ ಮಾಡುತ್ತಾರೆ. ನಂತರ ಸಮಾಧಿ‌ಗಳಿಗೆ ಸುಣ್ಣ ಬಣ್ಣ ಬಳಿದು ಅಂದವಾಗಿಡುತ್ತಾರೆ.

ಯುಗಾದಿ‌ಯಂದು ಹೊಸ ಬಟ್ಟೆ, ಮನೆಯಲ್ಲಿ ಹಬ್ಬಕ್ಕೆಂದು ಮಾಡಿದ ವಿಶೇಷ ಅಡುಗೆ‌ಗಳನ್ನು ಸಮಾಧಿಗೆ ತಂದು ಎಡೆ ಹಾಕುತ್ತಾರೆ. ಹೆತ್ತವರು ಮತ್ತು ಸಂಬಂಧಿಕರನ್ನು ನೆನೆದು ಪೂಜೆ ಮಾಡುತ್ತಾರೆ. ಈ ಮೂಲಕ ಹಿರಿಯ‌ರ ಆಶೀರ್ವಾದ ಪಡೆಯುತ್ತೇವೆ ಅನ್ನೋದು ಇಲ್ಲಿನವರ ನಂಬಿಕೆ.

Intro:ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ವರ್ಷದ ಆರಂಭ. ಯುಗಾದಿ ಬರುವ ಹದಿನೈದು ದಿನದ ಮುನ್ನವೇ ಹಬ್ಬದ ಕಳೆ ಮನೆಯಲ್ಲಿ ಕಾಣಿಸುತ್ತೆ. ಮೈಸೂರು ಮತ್ತು ಬೆಂಗಳೂರು ಕಡೇ ಯುಗಾದಿ ಹಬ್ಬದ ದಿನ ಸಂಬಂಧಿಕರ ಸಮಾಧಿಗಳಿಗೆ ಪೂಜೆ ಮಾಡುವೆ ವಿಶೇಷ ಆಚರಣೆ ಇದೆ. ಈ ಮೂಲಕ ಹಿರಿಯರ ನಾಮಸ್ಮರಣೆ ಮಾಡುತ್ತಾರೆ.

Body:ಯುಗಾದಿ ಹೊಸ ವರ್ಷ‌ದ ಆರಂಭ. ಮರಗಳಲ್ಲಿ ಹೊಸ ಚಿಗುರು ಮೂಡಿ ಹೊಸ ಕಳೆಯನ್ನೇ ಸೃಷ್ಠಿ ಮಾಡಿರುತ್ತದೆ. ಮುಂಜಾನೆಯೇ ಎಣ್ಣೆ ಸ್ನಾನ ಮಾಡ್ಕೊಂಡು. ಹೊಸ ಬಟ್ಟೆ ತೊಟ್ಟು. ದೇವರ ಪೂಜೆಗೆ ಮಾಡಿ ಬೇವು ಬೆಲ್ಲ ತಿನ್ನುವುದರೊಂದಿಗೆ ಯುಗಾದಿ ಸಂಭ್ರಮ ಆರಂಭವಾಗುತ್ತೆ. ಹೊಳಿಗೆ ತುಪ್ಪ. ಚಿತ್ರಾನ್ನ. ವಡೆ. ಹಬ್ಬದ ವಿಶೇಷ. ಊಟ ಮಾಡುವ ಮುನ್ನ ಬೆಂಗಳೂರು ಮತ್ತು ಮೈಸೂರು ಕಡೇ ಯುಗಾದಿ‌ಯಂದು ವಿಶೇಷ ಸಂಪ್ರದಾಯ ಆಚರಿಸುತ್ತಾ ಬಂದಿದ್ದಾರೆ.

ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆ ಮತ್ತು ಕಚೇರಿ‌ಪಾಳ್ಯದ ಮಧ್ಯ ಭಾಗದಲ್ಲಿ ಬರುವ ಸ್ಮಶಾನ ಯುಗಾದಿ ಹಬ್ಬದೊಂದು ವಿಶೇಷ ಮೆರುಗು ಪಡೆಯುತ್ತದೆ. ಸ್ಮಶಾನದಲ್ಲಿ‌ನ ಸಮಾಧಿಗಳು ಸುಣ್ಣ ಬಣ್ಣ ಬಳಿದು‌ಕೊಂಡು ಕಂಗೊಳಿಸುತ್ತಿರುತ್ತವೆ. ಹೌದು ಯುಗಾದಿ ಹಬ್ಬ‌ದಲ್ಲಿ ಸಂಬಂಧಿಗಳ ಸಮಾಧಿ‌ಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲದೆ. ಯುಗಾದಿ ದಿನದ ಹಿಂದಿನ ದಿನವೇ ಸ್ಮಶಾನಕ್ಕೆ ಹೋಗಿ ತಮ್ಮ ಹಿರಿಯರ ಸಮಾಧಿಯನ್ನು ಸ್ವಚ್ಛ ಮಾಡುತ್ತಾರೆ. ನಂತರ ಸಮಾಧಿ‌ಗಳಿಗೆ ಸುಣ್ಣ ಬಣ್ಣ ಬಳಿದು ಅಂದವಿಗಿಸುತ್ತಾರೆ.

ಯುಗಾದಿ‌ಯಂದು ಹೊಸ ಬಟ್ಟೆ, ಮನೆಯಲ್ಲಿ ಹಬ್ಬಕ್ಕೆಂದು ಮಾಡಿದ ವಿಶೇಷ ಅಡುಗೆ‌ಗಳನ್ನು ಸಮಾಧಿಯ ಬಳಿಗೆ ತಗೊಂಡ್ ಹೋಗಿ ಎಡೆ ಹಾಕುತ್ತಾರೆ..ಹೆತ್ತವರು ಮತ್ತು ಸಂಂಧಿಕರನ್ನು ನೆನೆದು ಪೂಜೆ ಮಾಡುತ್ತಾರೆ. ಈ ಮೂಲಕ ಹಿರಿಯ‌ರ ಅರ್ಶಿವಾದ ಪಡೆಯುತ್ತೆವೆ ಅನ್ನೂದು ಇಲ್ಲಿನವರ ನಂಬಿಕೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.