ನೆಲಮಂಗಲ: ತಾಲೂಕಿನ ವ್ಯಾಪ್ತಿಯಲ್ಲಿ ಕೊಲೆ, ಕಳ್ಳತನ ಪ್ರಕರಣ ಹೆಚ್ಚಾದ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ನೆಲಮಂಗಲ ಟೌನ್ ಸ್ಟೇಷನ್ಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ನೆಲಮಂಗಲ ಟೌನ್ ಸ್ಟೇಷನ್ ವ್ಯಾಪ್ತಿಯ ಕಾವೇರಿ ಲೇಔಟ್ನಲ್ಲಿ ಮನೆಯಲ್ಲಿ ಒಂಟಿ ಇದ್ದ ವೇಳೆ ಮೊಬೈಲ್ ಚಾರ್ಜಾರ್ ವೈರ್ನಿಂದ ಕತ್ತು ಬಿಗಿದು ಕೊಲೆ ಮಾಡಲಾಗಿತ್ತು. ಶಾರದಮ್ಮ ಕೊಲೆ ಪ್ರಕರಣ ನೆಲಮಂಗಲ ಟೌನ್ ನಿವಾಸಿಗಳನ್ನು ಬೆಚ್ಚಿ ಬಿಳಿಸಿತ್ತು. ಪ್ರಕರಣವನ್ನ ಭೇಧಿಸಲು ಡಿವೈಎಸ್ಪಿ ನೇತೃತ್ವದಲ್ಲಿ ಇಬ್ಬರು ಸಿಪಿಐ ಮತ್ತು ಐವರು ಎಐಗಳ ತಂಡ ರಚನೆಯಾಗಿದ್ದು, ಕೊಲೆ ಪ್ರಕರಣವನ್ನು ಶೀಘ್ರವೇ ಭೇಧಿಸಲಾಗುವುದು. ಜನತೆ ಯಾವುದೇ ಅತಂಕ ಪಡುವ ಅಗತ್ಯವಿಲ್ಲವೆಂದು ಎಸ್ಪಿ ರವಿ ಡಿ ಚನ್ನಣ್ಣವರ್ ಭರವಸೆ ನೀಡಿದರು.
ತಾಲೂಕಿನಲ್ಲಿ ಇತ್ತಿಚೇಗೆ ಅಪರಾಧ ಕೃತ್ಯಗಳು ಹೆಚ್ಚಾದ ಹಿನ್ನಲೆಯಲ್ಲಿ ಜೈಲಿನಿಂದ ಹೊರಬಂದವರು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಯಾದವರ ಚಲನವಲನ ಬಗ್ಗೆ ಮಾಹಿತಿ ಸಂಗ್ರಹಿಸುವುದು ಮತ್ತು ರಾತ್ರಿ ಗಸ್ತು ಹೆಚ್ಚಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.