ದೊಡ್ಡಬಳ್ಳಾಪುರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸುಬ್ರಹ್ಮಣ್ಯ ದೇವಸ್ಥಾನದ ಭಕ್ತರ ಹುಂಡಿ ಎಣಿಕೆ ಮಾಡಲಾಗಿದೆ. ಒಟ್ಟು 93,08,043 ರೂಪಾಯಿ ಹಣ ಸಂಗ್ರಹವಾಗಿದೆ.
ನಾಗರಾಧನೆಯ ಕ್ಷೇತ್ರವಾಗಿರುವ ಘಾಟಿ ಸುಬ್ರಹ್ಮಣ್ಯಕ್ಕೆ ಸರ್ಪ ದೋಷ ನಿವಾರಣೆಗಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ದೇವರಿಗೆ ಕಾಣಿಕೆ ರೂಪದಲ್ಲಿ ಹುಂಡಿಗೆ ಹಣ ಹಾಕುತ್ತಾರೆ. ಸೆಪ್ಟೆಂಬರ್ 5 ರಂದು ಹುಂಡಿ ಹಣ ಎಣಿಕೆ ಮಾಡಿದಾಗ 69,04,308 ರೂಪಾಯಿ ಸಿಕ್ಕಿತ್ತು. ಹುಂಡಿ ಎಣಿಕೆ ಸಮಯದಲ್ಲಿ ಮಳೆ ಬಂದ ಹಿನ್ನೆಲೆ ಎರಡು ಹುಂಡಿಗಳ ಎಣಿಕೆ ಕಾರ್ಯ ಸ್ಥಗಿತಗೊಳಿಸಲಾಗಿತ್ತು.
ಉಳಿದ ಹುಂಡಿಗಳ ಎಣಿಕೆಯನ್ನು ಸೋಮವಾರ ಮಾಡಲಾಗಿದ್ದು, 24,03,735 ರೂಪಾಯಿ ಸಂಗ್ರಹವಾಗಿದೆ. ಒಟ್ಟಾರೆ 93,08,043 ರೂಪಾಯಿ ಸಂಗ್ರಹವಾದಂತಾಗಿದೆ. ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಜೆ.ಜೆ. ಹೇಮಾವತಿ, ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ನಾಗರಾಜ್ ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ಮಾಡಲಾಯಿತು.
ಇದನ್ನೂ ಓದಿ: ಮಂತ್ರಾಲಯ ಮಠ ಕಾಣಿಕೆ ಹುಂಡಿ ಎಣಿಕೆ.. 2.78 ಕೋಟಿ ರೂ. ಹಣ ಸಂಗ್ರಹ