ETV Bharat / state

ಹೊಸಕೋಟೆ ಉಪ ಚುನಾವಣಾ ಕಣ: ಎಂಟಿಬಿಗೆ ಶಾಕ್​ ಕೊಟ್ಟ ಶರತ್​​​​ ಬಚ್ಚೇಗೌಡ! - hosakote by election

ಯಾವುದೇ ಕಾರಣಕ್ಕೂ ಹೊಸಕೋಟೆ ಉಪ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳುವ ಮೂಲಕ ಅನರ್ಹ ಶಾಸಕ ಎಂಟಿಬಿ ನಾಗರಾಜ್​ಗೆ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಶಾಕ್​ ಕೊಟ್ಟಿದ್ದಾರೆ.

ಹೊಸಕೋಟೆ ಉಪಚುನಾವಣೆ ಕಣದಿಂದ ಹಿಂದೆ ಸರಿಯಲ್ಲ: ಎಂಟಿಬಿಗೆ ಶಾಕ್ ನೀಡಿದ ಶರತ್ ಬಚ್ಚೇಗೌಡ
author img

By

Published : Oct 31, 2019, 7:32 PM IST

ಹೊಸಕೋಟೆ: ಯಾವುದೇ ಕಾರಣಕ್ಕೂ ಹೊಸಕೋಟೆ ಉಪ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳುವ ಮೂಲಕ ಅನರ್ಹ ಶಾಸಕ ಎಂಟಿಬಿ ನಾಗರಾಜ್​ಗೆ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಶಾಕ್​ ಕೊಟ್ಟಿದ್ದಾರೆ.

ಎಂಟಿಬಿಗೆ ಶಾಕ್ ನೀಡಿದ ಶರತ್ ಬಚ್ಚೇಗೌಡ
ಹೊಸಕೋಟೆ ಇತಿಹಾಸದಲ್ಲಿ ಈವರೆಗೆ ಉಪ ಚುನಾವಣೆ ನಡೆದಿಲ್ಲ, ಈಗ ನಡೆಯುತ್ತಿದೆ. ತನಗೆ ಮೋಸ ಅಗಿದೆ ಎಂದು ಯಾರು ಯಾರೋ ಎಲ್ಲೆಲ್ಲೋ ಹೋಗಿ ಕಣ್ಣೀರು ಹಾಕುತ್ತಿದ್ದಾರೆ. ಆದರೆ ನಾನು ಮಾತ್ರ ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಶರತ್ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿಯಾದಾಗಲೂ ನನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಹೊಸಕೋಟೆ ತಾಲೂಕಿನ ಸ್ವಾಭಿಮಾನಕ್ಕಾಗಿ ಮತ್ತು ಇಲ್ಲಿನ ಜನರ ಆಶ್ವಾಸನೆ ಪೂರೈಸಲು ನಾನು ಚುನಾವಣೆಗೆ ಸ್ಪರ್ಧಿಸಲೇಬೇಕಾಗಿದೆ. ನನ್ನ ಈ ನಿಲುವು ಬಿಜೆಪಿ ಮುಖಂಡರ ವಿರುದ್ಧ ಅಲ್ಲ ಎಂದು ಶರತ್ ಸ್ಪಷ್ಟನೆ ನೀಡಿದ್ದಾರೆ.

Intro:ಹೊಸಕೋಟೆ

ಹೊಸಕೋಟೆ ಉಪಚುನಾವಣೆ ಕಣದಿಂದ ಹಿಂದೆ ಸರಿಯಲ್ಲ ಎಂದ ಶರತ್ ಬಚ್ಚೇಗೌಡ.

ಮೈತ್ರಿ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗೆ ಬಿಗ್ ಶಾಕ್ ಎದುರಾಗಿದ್ದು, ಯಾವುದೇ ಕಾರಣಕ್ಕೂ ಹೊಸಕೋಟೆ ಉಪಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶರತ್ ಬಚ್ಚೇಗೌಡ, ಹೊಸಕೋಟೆ ಇತಿಹಾಸದಲ್ಲಿ ಈವರೆಗೆ ಉಪಚುನಾವಣೆ ನಡೆದಿಲ್ಲ. ಈಗ ನಡೆಯುತ್ತಿದೆ. ತನಗೆ ಮೋಸ ಅಗಿದೆ ಎಂದು ಯಾರು ಯಾರೋ ಎಲ್ಲೆಲ್ಲೋ ಹೋಗಿ ಕಣ್ಣೀರು ಹಾಕುತ್ತಿದ್ದಾರೆ. ಆದರೆ ನಾನು ಮಾತ್ರ ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶರತ್ ಮೃದು ಸ್ವಭಾವದವನು. ಅವನನ್ನು ಒತ್ತಡ ಹಾಕಿ ದಾರಿಗೆ ತರಬಹುದು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಇದ್ಯಾವುದಕ್ಕೂ ನಾನು ಜಗ್ಗುವುದಿಲ್ಲ ಎಂದು ಶರತ್ ಹೇಳಿದ್ದರು.

Body:ಮುಖ್ಯಮಂತ್ರಿಗಳನ್ನು ಭೇಟಿಯಾದಾಗಲೂ ನನ್ನ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದೇನೆ. ಹೊಸಕೋಟೆ ತಾಲೂಕಿನ ಸ್ವಾಭಿಮಾನಕ್ಕಾಗಿ ಮತ್ತು ಇಲ್ಲಿನ ಜನರ ಆಶ್ವಾಸನೆ ಪೂರೈಸಲು ನಾನು ಚುನಾವಣೆಗೆ ಸ್ಪರ್ಧಿಸಲೇ ಬೇಕಾಗಿದೆ. ನನ್ನ ಈ ನಿಲುವು ಬಿಜೆಪಿ ಮುಖಂಡರ ವಿರುದ್ದ ಅಲ್ಲ ಎಂದು ಶರತ್ ಸ್ಪಷ್ಟನೆಯನ್ನು ನೀಡಿದ್ದಾರೆ.

ಅತೃಪ್ತ ಶಾಸಕರಿಗೆ ಅನುಕೂಲ
ಮಾಡಿಕೊಡಲೆಂದು, ಕ್ಷೇತ್ರಗಳ ಸೋತ ಬಿಜೆಪಿ ಅಭ್ಯರ್ಥಿಗಳಿಗೆ ಯಡಿಯೂರಪ್ಪ ಅವರು ನಿಗಮ ಮಂಡಳಿ ಸ್ಥಾನದ ಉಡುಗೊರೆ ನೀಡಿದ್ದರು, ಆದರೆ ಇದನ್ನು ಶರತ್ ಬಚ್ಚೇಗೌಡ ಅವರು ತಿರಸ್ಕರಿಸಿದ್ದರು. ಈ ಮೂಲಕ ಬಿಜೆಪಿ ಟಿಕೆಟ್ ಪಡೆದು ಉಪಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಇಟ್ಟುಕೊಂಡಿದ್ದ ಎಂಟಿಬಿ ನಾಗರಾಜ್ ಗೆ ಶರತ್ ಬಚ್ಚೇಗೌಡ ಶಾಕ್ ನೀಡಿದ್ದಾರೆ.

Conclusion:ನಮ್ಮ ತಂದೆ ಚುನಾವಣಾ ಪ್ರಚಾರಕ್ಕೆ ಬಂದು ಪ್ರಚಾರ ಮಾಡೋಕ್ಕೆ ಆಗಲ್ಲ. ಬಚ್ಚೇಗೌಡರು ನಾನು ತಂದೆ ಮಕ್ಕಳಾದ್ರು ನಾವು ಒಟ್ಟಾಗಿ ಇರ್ತಿಲ್ಲ.ನಾನು ಚುನಾವಣೆಗೆ ನಿಂತ್ರೆ ತಂದೆ ಬಚ್ಚೇಗೌಡರಿಗೆ ತೊಂದರೆ ಮಾಡ್ತಾರೆ ಅಂತ ಪ್ರಚಾರ ಮಾಡಿದ್ದಾರೆ. ತಂದೆಗೆ ತೊಂದರೆಯಾಗಬಾರದು ಅಂತ ನಾನು ನಮ್ಮ ತಂದೆಯವರ ಮನೆ ಲಾಲ್ ಬಾಗ್‌ನಿಂದ ಬಿಟ್ಟು ನಮ್ಮ ಸ್ವಂತ ಮನೆ ಇರುವ ಬೆಂಡಿಗಾನಹಳ್ಳಿಯಲ್ಲಿ ಬಂದು ಕಳೆದ ಹದಿನೈದು ದಿನಗಳಿಂದ ನೆಲೆಸಿದ್ದೆನೆ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.