ETV Bharat / state

'ಡೇಟಿಂಗ್‌ಗೆ ಬಾ..' ಹಿಮಾಲಯ ಡ್ರಗ್ಸ್‌ ಕಂಪನಿ ಮುಖ್ಯಸ್ಥರ ವಿರುದ್ಧ ಲೈಂಗಿಕ ಕಿರುಕುಳ ಆರೋಪ - sexual harrassment

ಬೆಂಗಳೂರು ನಗರದ ಉತ್ತರ ತಾಲೂಕಿನ ಮಾಕಳಿಯಲ್ಲಿರುವ ಹಿಮಾಲಯ ಡ್ರಗ್​ ಕಂಪನಿಯ ಮುಖ್ಯಸ್ಥ ಸುಂದರ್​ರಾಮ್​ ರಾಮಚಂದ್ರನ್​ ಸಹೋದ್ಯೋಗಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಮಾಲಯ ಡ್ರಗ್​ ಕಂಪನಿಯ ಮುಖ್ಯಸ್ಥ ಸುಂದರ್​ರಾಮ್​ ರಾಮಚಂದ್ರನ್
author img

By

Published : Sep 13, 2019, 7:29 PM IST

ಬೆಂಗಳೂರು: ನಗರದ ಉತ್ತರ ತಾಲೂಕಿನ ಮಾಕಳಿಯಲ್ಲಿರುವ ಹಿಮಾಲಯ ಡ್ರಗ್​ ಕಂಪನಿಯ ಮುಖ್ಯಸ್ಥ ಸುಂದರ್​ರಾಮ್​ ರಾಮಚಂದ್ರನ್,​ ಸಹೋದ್ಯೋಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

bengaluru
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲು

ಮನೆಗೆ ಡ್ರಾಪ್ ಮಾಡುವ ನೆಪದಲ್ಲಿ ಸಂತ್ರಸ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಪ್ರತಿನಿತ್ಯ ಡೇಟಿಂಗ್‌ಗೆ ಬಾ.. ಗಂಡನನ್ನು ಬಿಟ್ಟು ಬಾ ಎಂದು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಈ ಕುರಿತು ಪೊಲೀಸರಿಗೆ ದೂರು ನೀಡಿದರೆ, ನೀನೇ ಕೋರ್ಟ್ ಕಚೇರಿ ಅಲೆದಾಡಬೇಕಾದೀತು ಎಂದು ಆರೋಪಿ ಬೆದರಿಕೆ ಹಾಕಿದ್ದರಂತೆ. ಇದರಿಂದ ಬೇಸತ್ತ ಮಹಿಳೆ, ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದರಂತೆ. ಆದರೆ ಆರೋಪಿ ವಿರುದ್ಧ ಕಂಪನಿ ಮಾತ್ರ ಯಾವುದೇ ಕ್ರಮ ಕೈಗೊಳ್ಳದ ಕಾರಣ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಪೊಲೀಸರ ಪ್ರಕರಣ ತನಿಖೆ ನಡೆಸುತ್ತಿದ್ದಾರೆ.

Intro:ಪತಿಯನ್ನು ಬಿಟ್ಟು ನನ್ನ ಜೊತೆ ಬಾ..ರೆಸಾರ್ಟ್ನಲ್ಲಿ ಎನ್ಜಾಯ್ ಮಾಡೋಣ..ಅಂತಾನೆ ಬಾಸ್

ಹಿಮಾಲಯ ಡ್ರಗ್ ಕಂಪೆನಿಯ ಮುಖ್ಯಸ್ಥನಿಂದ ಲೈಂಗಿಕ ಕಿರಕುಳ..!
Body:ನೆಲಮಂಗಲ : ಸಹೋದ್ಯೋಗಿ ಮಹಿಳೆಗೆ ಲೈಂಗಿಕ ಕಿರುಕುಳ ನಡೆಸಿದ ಆಕೆಯ ಬಾಸ್ ನಿನ್ನ ಪತಿಯನ್ನು ಬಿಟ್ಟು ನನ್ನ ಜೊತೆ ಬಾ ರೆಸಾರ್ಟ್ ನಲ್ಲಿ ಎಂಜಾಯ್ ಮಾಡೋಣವೆಂದು ಕರೆದಿದ್ದಾನೆ.

ಬೆಂಗಳೂರು ಉತ್ತರ ತಾಲೂಕಿನ ಮಾಕಳಿಯಲ್ಲಿರುವ ಹಿಮಾಲಯ ಡ್ರಗ್ ಕಂಪೆನಿ ಮುಖ್ಯಸ್ಥನಿಂದ ಲೈಂಗಿಕ ಕಿರಕುಳ ಆರೋಪ ಕೇಳಿ ಬಂದಿದೆ. ಕಂಪೆನಿಯಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿದ್ದ ಮಹಿಳೆಗೆ ಹಿಮಾಲಯ ಡ್ರಗ್ ಕಂಪೆನಿಯ ಮುಖ್ಯಸ್ಥ ಸುಂದರಂ ರಾಮಚಂದ್ರನ್ ಲೈಂಗಿಕ ಕಿರುಕುಳ ನೀಡುತ್ತಿದ್ದರು.

ಮನೆಗೆ ಡ್ರಾಪ್ ಮಾಡುವ ನೆಪದಲ್ಲಿ ಸಂತ್ರಸ್ತೆಯೊಂದಿಗೆ ಅಸಭ್ಯ ವರ್ತನೆ ಮಾಡುತ್ತಿದ್ದು ಮತ್ತು ಡೆಟಿಂಗ್ ಬರುವಂತೆ ನಿತ್ಯ ಕಿರುಕುಳ ಕೊಡುತ್ತಿದ್ದ ಬಗ್ಗೆ ಆರೋಪವಿದೆ.

"ಪತಿಯನ್ನು ಬಿಟ್ಟು ನನ್ನ ಜೊತೆ ಬಾ..ರೆಸಾರ್ಟ್ನಲ್ಲಿ ಎನ್ಜಾಯ್ ಮಾಡೋಣ.."ವೆಂದು ಕೆರೆಯುತ್ತಾನೆ.
"ನೀನು ಪೊಲೀಸರಿಗೆ ದೂರು ಕೊಟ್ಟರೇ..ನೀನೇ ಕೋರ್ಟು-ಕಚೇರಿ ಅಲಿಯಬೇಕೆಂದ ಬೆದರಿಕೆ ಹಾಕುತ್ತಿದ್ದನೆಂದು ಸಂತ್ರಸ್ತ ಮಹಿಳೆಯ ಆರೋಪ. ಕಾಮುಕ ಸುಂದರಂ ರಾಮಚಂದ್ರನ್ ವರ್ತನೆಗೆ ಬೇಸತ್ತು ಮಹಿಳಾ ಆಯೋಗಕ್ಕೆ ದೂರು ನೀಡಲಾಯಿತು. ಮಹಿಳಾ ಆಯೋಗದ ಮುಂದೆ ತಪ್ಪೊಪ್ಪಿಕೊಂಡಿದ್ದ ಕಾಮುಕ ಸುಂದರಂ ರಾಮಚಂದ್ರನ್ ಆದರೆ
ಆತನ ವಿರುದ್ಧ ಹಿಮಾಲಯ ಡ್ರಗ್ ಕಂಪೆನಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಹಿಳೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.