ದೇವನಹಳ್ಳಿ(ಬೆಂ.ಗ್ರಾಮಾಂತರ): ಗ್ರಾಮ ಪಂಚಾಯಿತಿ ಚುನಾವಣೆಯ ಎರಡನೇ ಹಂತದ ಮತದಾನ ನಾಳೆ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಒಟ್ಟು 45 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.
ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ 45 ಗ್ರಾಮ ಪಂಚಾಯಿತಿಗಳ ಒಟ್ಟು 374 ಕ್ಷೇತ್ರಗಳ 770 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎರಡೂ ತಾಲೂಕುಗಳಿಂದ 374 ಮೂಲ ಮತದಾನ ಕೇಂದ್ರಗಳು, 35 ಹೆಚ್ಚುವರಿ(ಆಕ್ಸಿಲರಿ) ಮತಗಟ್ಟೆಗಳು ಸೇರಿದಂತೆ ಒಟ್ಟು 409 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇದರಲ್ಲಿ 102 ಸೂಕ್ಷ್ಮ ಮತಗಟ್ಟೆಗಳು, 88 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 219 ಸಾಮಾನ್ಯ ಮತಗಟ್ಟೆಗಳಿವೆ. 1,22,037 ಪುರುಷ ಮತದಾರರು, 1,21,329 ಮಹಿಳಾ ಮತದಾರರು ಹಾಗೂ 5 ಇತರೆ ಮತದಾರರು ಸೇರಿದಂತೆ ಒಟ್ಟು 2,43,371 ಮತದಾರರಿದ್ದಾರೆ.
ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲೂಕಿನ 409 ಮತಗಟ್ಟೆಗಳಿಗೆ 409 ಪಿಆರ್ಒ, 409 ಎಪಿಆರ್ಒ, 818 ಪಿಒಗಳು ಸೇರಿದಂತೆ 1636 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಶೇ. 10ರಷ್ಟು ಅಂದರೆ 164 ಸಿಬ್ಬಂದಿಯನ್ನು ಮೀಸಲು ಸಿಬ್ಬಂದಿಯಾಗಿ ನಿಯೋಜನೆ ಮಾಡಲಾಗಿದೆ.
ದೇವನಹಳ್ಳಿ ತಾಲೂಕಿನ 20 ಪಂಚಾಯಿತಿಗಳ ಒಟ್ಟು 150 ಕ್ಷೇತ್ರಗಳ 327 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ತಾಲೂಕಿನಲ್ಲಿ 150 ಮೂಲ ಮತದಾನ ಕೇಂದ್ರ, 20 ಹೆಚ್ಚುವರಿ(ಆಕ್ಸಿಲರಿ) ಮತಗಟ್ಟೆಗಳು ಸೇರಿದಂತೆ ಒಟ್ಟು 170 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇದರಲ್ಲಿ 8 ಸೂಕ್ಷ್ಮ ಮತಗಟ್ಟೆಗಳು, 43 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 119 ಸಾಮಾನ್ಯ ಮತಗಟ್ಟೆಗಳಿವೆ. 50,830 ಪುರುಷ ಮತದಾರರು, 50,556 ಮಹಿಳಾ ಮತದಾರರು ಹಾಗೂ 5 ಇತರೆ ಮತದಾರರು ಸೇರಿದಂತೆ ಒಟ್ಟು 1,01,391 ಮತದಾರರಿದ್ದಾರೆ. ದೇವನಹಳ್ಳಿ ತಾಲೂಕಿನ 170 ಮತಗಟ್ಟೆಗಳಿಗೆ 170 ಪಿಆರ್ಒ, 170 ಎಪಿಆರ್ಒ, 340 ಪಿಒಗಳು ಸೇರಿದಂತೆ 680 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಶೇ. 10ರಷ್ಟು ಅಂದರೆ 68 ಸಿಬ್ಬಂದಿಯನ್ನು ಮೀಸಲು ಸಿಬ್ಬಂದಿಯಾಗಿ ನಿಯೋಜನೆ ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ 25 ಪಂಚಾಯಿತಿಗಳ ಒಟ್ಟು 224 ಕ್ಷೇತ್ರಗಳ 443 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ತಾಲೂಕಿನಲ್ಲಿ 224 ಮೂಲ ಮತದಾನ ಕೇಂದ್ರಗಳು, 15 ಹೆಚ್ಚುವರಿ(ಆಕ್ಸಿಲರಿ) ಮತಗಟ್ಟೆಗಳು ಸೇರಿದಂತೆ ಒಟ್ಟು 239 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇದರಲ್ಲಿ 94 ಸೂಕ್ಷ್ಮ ಮತಗಟ್ಟೆಗಳು, 45 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 100 ಸಾಮಾನ್ಯ ಮತಗಟ್ಟೆಗಳಿವೆ. 71,207 ಪುರುಷ ಮತದಾರರು, 70,773 ಮಹಿಳಾ ಮತದಾರರು ಸೇರಿದಂತೆ ಒಟ್ಟು 1,41,980 ಮತದಾರರಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ 239 ಮತಗಟ್ಟೆಗಳಿಗೆ 239 ಪಿಆರ್ಒ, 239 ಎಪಿಆರ್ಒ, 478 ಪಿಒಗಳು ಸೇರಿದಂತೆ 956 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಶೇ. 10ರಷ್ಟು ಅಂದರೆ 96 ಸಿಬ್ಬಂದಿಯನ್ನು ಮೀಸಲು ಸಿಬ್ಬಂದಿಯಾಗಿ ನಿಯೋಜನೆ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಮತದಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮತ ಚಲಾಯಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ. ಕೆ.ಜಗದೀಶ್ ನಾಯಕ್ ಮನವಿ ಮಾಡಿದರು.