ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಲಾಕ್ಡೌನ್ ವೇಳೆ ಸುಖಾಸುಮ್ಮನೇ ಓಡಾಡುತ್ತಿದ್ದ ವಾಹನ ಸವಾರರನ್ನು ಪರಿಶೀಲನೆ ಮಾಡಿದ ಎಸ್ಪಿ ರವಿ ಡಿ. ಚನ್ನಣ್ಣನವರ್, ಪೊಲೀಸರ ಜೊತೆ ಖುದ್ದಾಗಿ ರಸ್ತೆಯಲ್ಲಿ ನಿಂತು ಕೆಲಸ ಮಾಡಿದ್ದಾರೆ.
ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಎಸ್ಪಿ ರವಿ ಡಿ.ಚನ್ನಣ್ಣನವರ್ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ರೌಂಡ್ಸ್ ಹಾಕುತ್ತಿದ್ದರು. ಹೊಸಕೋಟೆ ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದುದನ್ನು ಗಮನಿಸಿದ ಅವರು, ತಾವೇ ಖುದ್ದಾಗಿ ವಾಹನಗಳ ಪರಿಶೀಲನೆ ನಡೆಸಿ ಸುಖಾಸುಮ್ಮನೇ ರಸ್ತೆಗಿಳಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್ ವಾರ್ನಿಂಗ್ ನೀಡಿದರು.
ಈ ವೇಳೆ ಸುಖಾ-ಸುಮ್ಮನೇ ಓಡಾಡುತ್ತಿದ್ದ ವಾಹನ ಸವಾರರನ್ನ ನಿಲ್ಲಿಸಿ, ಪೊಲೀಸರ ಜೊತೆ ವಾಹನಗಳ ಪರಿಶೀಲನೆ ಮಾಡುವ ಶಿಕ್ಷೆ ಕೊಡುವ ಮೂಲಕ ಹೊಸಕೋಟೆ ಜನಕ್ಕೆ ಬಿಸಿ ಮುಟ್ಟಿಸಿದ್ದಾರೆ.