ETV Bharat / state

'ಊಟ ಖಾಲಿ' ಎಂದ ಹೋಟೆಲ್​ ಮಾಲೀಕನ ಎದೆಗೆ ಚಾಕುವಿನಿಂದ ಇರಿದ ರೌಡಿಶೀಟರ್‌ - ಹೋಟೆಲ್​ ಮಾಲೀಕನಿಗೆ ಚಾಕು ಇರಿದ ರೌಡಿಶೀಟರ್​

ಊಟ ಖಾಲಿ ಎಂದು ಹೇಳಿದ್ದಕ್ಕೆ ಕೋಪಗೊಂಡು ಹೋಟೆಲ್​​ ಮಾಲೀಕನಿಗೆ ರೌಡಿಶೀಟರ್​ ಒಬ್ಬ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ದೊಡ್ಡಬಳ್ಳಾಪುರದಲ್ಲಿ ವರದಿಯಾಗಿದೆ.

rowdy sheeter stabbed hotel owner in doddaballapur
ಹೋಟೆಲ್​ ಮಾಲೀಕನ ಎದೆಗೆ ಚಾಕುವಿನಿಂದ ಇರಿದು ಎಸ್ಕೇಪ್
author img

By

Published : Nov 6, 2021, 5:45 PM IST

ದೊಡ್ಡಬಳ್ಳಾಪುರ: ರಾತ್ರಿ ಊಟಕ್ಕೆಂದು ಹೋಟೆಲ್​​ಗೆ ಬಂದ ರೌಡಿಶೀಟರ್​ 'ಊಟ ಇಲ್ಲ ಖಾಲಿ' ಎಂದು ಹೇಳಿದ ಹೋಟೆಲ್​​ ಮಾಲೀಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಹೋಟೆಲ್​ ಮಾಲೀಕನ ಎದೆಗೆ ಚಾಕು ಇರಿದ ರೌಡಿಶೀಟರ್

ದೊಡ್ಡಬಳ್ಳಾಪುರ ನಗರದಲ್ಲಿ ಹೋಟೆಲ್‌ ಮಾಲೀಕನ ಎದೆ ಮತ್ತು ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದ ರೌಡಿಶೀಟರ್ ಯಲಪ್ಪ ಪರಾರಿಯಾಗಿದ್ದಾನೆ. ತ್ಯಾಗರಾಜನಗರ ನಿವಾಸಿ ಚಂದ್ರಶೇಖರ್‌ (30) ಚಾಕು ಇರಿತಕ್ಕೊಳಗಾದವರು. ಚಾಕುವಿನಿಂದ ಇರಿದ ಆರೋಪಿ ರೌಡಿಶೀಟರ್‌ ಯಲ್ಲಪ್ಪ ಹಾಗೂ ಆತನ ಇಬ್ಬರು ಸಹಚರರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಚಂದ್ರಶೇಖರ್‌ ಹಲವು ವರ್ಷಗಳಿಂದ ಕೊಂಗಾಡಿಯಪ್ಪ ರಸ್ತೆಯಲ್ಲಿ ಹಲವು ಶಿವಗಂಗಾ ಹೆಸರಿನ ಹೋಟೆಲ್‌ ನಡೆಸುತ್ತಾರೆ. ಶುಕ್ರವಾರ ರಾತ್ರಿ ಹೋಟೆಲ್‌ ಮುಗಿಸಿಕೊಂಡು 10.15ರ ಸುಮಾರಿಗೆ ಮನೆಗೆ ತೆರಳಲು ನಿಂತಿದ್ದರು. ಈ ವೇಳೆ ಯಲ್ಲಪ್ಪ ಆತನ ಇಬ್ಬರು ಸಹಚರರ ಜೊತೆ ಬಿಯರ್‌ ಬಾಟೆಲ್‌ ಹಿಡಿದುಕೊಂಡು ಅಲ್ಲಿಗೆ ಬಂದಿದ್ದಾರೆ. ಊಟ ಇದೆಯೇ ಎಂದು ಕೇಳಿದ್ದಾರೆ. ಇದಕ್ಕೆ ಚಂದ್ರಶೇಖರ್‌ ಊಟ ಖಾಲಿಯಾಗಿದೆ ಎಂದು ತಿಳಿಸಿದ್ದಾರೆ. ಇಷ್ಟಕ್ಕೆ ಆಕ್ರೋಶಗೊಂಡ ಯಲ್ಲಪ್ಪ ಚಾಕು ತೆಗೆದುಕೊಂಡು ಚಂದ್ರಶೇಖರ್‌ ಎದೆ ಮತ್ತು ಹೊಟ್ಟೆ ಭಾಗಕ್ಕೆ ಮೂರು ಬಾರಿ ಇರಿದಿದ್ದಾರೆ. ಗಾಯಾಳು ಚಂದ್ರಶೇಖರ್‌ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಕುರಿತು ಮಾತನಾಡಿದ ಗಾಯಾಳು ಚಂದ್ರಶೇಖರ್ ರಕ್ತ ಸುರಿಸಿಕೊಂಡೇ ಸುಮಾರು 80 ಮೀಟರ್‌ ಓಡಿದೆ. ಸಹಾಯಕ್ಕೆ ನನ್ನ ಸಹೋದರ ಬಂದ ಕೂಡಲೇ ಆಟೋ ಹತ್ತಿ ಆಸ್ಪತ್ರೆಗೆ ದಾಖಲಾದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜಿಗಣಿಯಲ್ಲಿ ಅಡುಗೆ ಅನಿಲ ಪೈಪ್ ಸೋರಿಕೆಯಾಗಿ ಸ್ಫೋಟ: ಏಳು ಮಂದಿಗೆ ಗಾಯ

ರೌಡಿಶೀಟರ್ ಯಲ್ಲಪ್ಪ ನಗರದ ವೀರಭದ್ರನ ಪಾಳ್ಯದ ನಿವಾಸಿ, ಈತ ಜೀವಬೆದರಿಕೆ, ಸುಲಿಗೆ, ದರೋಡೆ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಕೃತ್ಯವೊಂದರಲ್ಲಿ ಜೈಲು ಸೇರಿದ್ದ ಆರೋಪಿ ಯಲ್ಲಪ್ಪ ಎರಡು ತಿಂಗಳ ಹಿಂದೆ ಜೈಲಿನಿಂದ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.