ದೊಡ್ಡಬಳ್ಳಾಪುರ: ನಗರದ ವೀರಭದ್ರನಪಾಳ್ಯದ ರೌಡಿಶೀಟರ್ ಹರೀಶ್ (28) ಎರಡು ದಿನಗಳ ಹಿಂದೆ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮ,ಹತ್ಯೆಗೆ ಶರಣಾಗಿದ್ದಾನೆ.
![Rowdi sheeter committed suicide in doddaballapur](https://etvbharatimages.akamaized.net/etvbharat/prod-images/4809146_thumbdbpur.jpg)
ಮನೆಯ ಸುತ್ತ ದುರ್ನಾತ ಬೀರುತ್ತಿತ್ತು. ನಂತರ ಮನೆಯ ಬಾಗಿಲನ್ನು ಒಡೆದು ನೋಡಿದಾಗ, ನೇಣು ಬಿಗಿದ ಸ್ಥಿತಿಯಲ್ಲಿಯೇ ಕೊಳೆತ ದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.