ETV Bharat / state

ಮಾಜಿ ಪ್ರಿಯಕರನಿಂದ ಪದೇ ಪದೆ ಫೋನ್ ಕಾಲ್​​.. ಮನನೊಂದ ಗೃಹಿಣಿ ಆತ್ಮಹತ್ಯೆ - ದೊಡ್ಡಬಳ್ಳಾಪುರ

ಮಾಜಿ ಪ್ರಿಯಕರನಿಂದ ಕಿರುಕುಳ ತಾಳಲಾರದೆ ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ನಿವೇದಿತಾ
ನಿವೇದಿತಾ
author img

By

Published : Sep 12, 2021, 2:13 PM IST

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಗೌರಿ ಹಬ್ಬಕ್ಕೆಂದು ತವರು ಮನೆಗೆ ಬಂದಿದ್ದಾಗ ಮಾಜಿ ಪ್ರಿಯತಮ(Ex lover) ಪದೇಪದೆ ಫೋನ್ ಮಾಡುತ್ತಿದ್ದುದಕ್ಕೆ ಬೇಸತ್ತ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ನಿವೇದಿತಾ
ನಿವೇದಿತಾ

ತಾಲೂಕಿನ ಪಿಂಡಕೊರತಿಮ್ಮನಹಳ್ಳಿ (ಜಯನಗರ)ಯಲ್ಲಿ ಘಟನೆ ನಡೆದಿದ್ದು, ನಿವೇದಿತಾ (22) ನೇಣಿಗೆ ಶರಣಾಗಿರುವ ಗೃಹಿಣಿ. ಮೃತ ಮಹಿಳೆಗೆ 3 ವರ್ಷದ ಹಿಂದೆ ಪಾಲನಜೋಗಿಹಳ್ಳಿಯ ಯುವಕನೊಂದಿಗೆ ಮದುವೆಯಾಗಿತ್ತು. ಮದುವೆಗೂ ಮುನ್ನ ನಿವೇದಿತಾಗೆ ಬಾಯ್ ಫ್ರೆಂಡ್ ಇದ್ದನಂತೆ. ಆದರೆ, ಆಕೆ ಮದುವೆ ನಂತರ ಎಲ್ಲ ಮರೆತು ಪತಿಯೊಂದಿಗೆ ಸಂಸಾರ ನಡೆಸುತ್ತಿದ್ದಳು. ಮದುವೆಯಾಗಿದ್ದರೂ ಮಾಜಿ ಪ್ರಿಯಕರ ಆಕೆಗೆ ಫೋನ್ ಮಾಡಿ ಕಾಡುತ್ತಿದ್ದ ಎನ್ನಲಾಗ್ತಿದೆ.

ಇದನ್ನೂ ಓದಿ : ಮೂಡಲಗಿ ಬಳಿ ಕಾರು ಅಪಘಾತ: ಯುವಕರಿಬ್ಬರು ಸ್ಥಳದಲ್ಲೇ ಸಾವು

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.