ETV Bharat / state

ರೋಗಿ ಸಂಬಂಧಿಕರ ಮೇಲೆ ಹಲ್ಲೆ ಆರೋಪ: ಖಾಸಗಿ ಆಸ್ಪತ್ರೆ ಕೊಟ್ಟ ಸ್ಪಷ್ಟನೆ ಏನು ಗೊತ್ತಾ?

author img

By

Published : May 29, 2021, 1:32 PM IST

ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಮೇ 26ರಂದು ನಡೆದ ಗಲಾಟೆಗೆ ಸಂಬಂಧಪಟ್ಟಂತೆ ಆಸ್ಪತ್ರೆಯ ಆಡಳಿತ ಮಂಡಳಿಯವರು ಸ್ಪಷ್ಟನೆ ನೀಡಿದ್ದಾರೆ.

Assault on Patient relatives
ರೋಗಿಯ ಸಂಬಂಧಿಕರ ಮೇಲೆ ಹಲ್ಲೆ

ನೆಲಮಂಗಲ: ನಗರದ ಖಾಸಗಿ ಆಸ್ಪತ್ರೆಯಲ್ಲಿ ರೋಗಿಯನ್ನು ನೋಡಲು ಬಂದ ಯುವಕರ ಮೇಲೆ ವೈದ್ಯರು ಹಲ್ಲೆ ನಡೆಸಿ ಗೂಂಡಾ ವರ್ತನೆ ತೋರಿದ್ದಾರೆ ಎಂಬ ಆರೋಪವನ್ನು ಆಸ್ಪತ್ರೆ ಆಡಳಿತ ಮಂಡಳಿ ತಳ್ಳಿಹಾಕಿದೆ. ಇದು ಕಿಡಿಗೇಡಿಗಳ ಕೃತ್ಯ, ಆಸ್ಪತ್ರೆಗೆ ಕೆಟ್ಟ ಹೆಸರು ತರುವ ಯತ್ನ ಎಂದು ವೈದ್ಯರು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ವೈದ್ಯರು

ಮೇ. 26ರಂದು ರಾತ್ರಿ 9 ಗಂಟೆಯ ವೇಳೆಗೆ ಕುಡಿದ ಮತ್ತಿನಲ್ಲಿದ್ದರೆನ್ನಲಾದ ಮೂವರು ಯುವಕರು ಆಸ್ಪತ್ರೆಯಲ್ಲಿ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರವಿಕುಮಾರ್ ಎಂಬ ರೋಗಿಯನ್ನು ನೋಡಲು ಬಂದಿದ್ದರು. ಯುವಕರ ಪೈಕಿ ಮಂಜುನಾಥ್ ಎಂಬಾತ ಆಸ್ಪತ್ರೆಯ ಭದ್ರತಾ ಸಿಬ್ಬಂದಿಯ ಅನುಮತಿ ಪಡೆದು ರೋಗಿಯನ್ನು ನೋಡಿಕೊಂಡು ಬಂದಿದ್ದ. ಮಂಜುನಾಥ್ ಜೊತೆಗೆ ಬಂದಿದ್ದ ಲೋಕೇಶ್ ಮತ್ತು ಮನೋಜ್ ಎಂಬುವರು ಕುಡಿದ ಮತ್ತಿನಲ್ಲಿ ಭದ್ರತಾ ಸಿಬ್ಬಂದಿಯನ್ನು ಹೆದರಿಸಿ ಹಲ್ಲೆ ಮಾಡಿ, ನಂತರ ಕೋವಿಡ್ ವಾರ್ಡ್ ಕಡೆ ಬಂದಿದ್ದರು. ಯುವಕರು ಕೋವಿಡ್ ವಾರ್ಡ್ ಬಳಿ ಬರುತ್ತಿದ್ದಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಅರುಣಾ ಎಂಬ ಆಸ್ಪತ್ರೆ ಸಿಬ್ಬಂದಿ ತಡೆದಿದ್ದರು. ಈ ಕಾರಣಕ್ಕೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದರು. ಅದನ್ನು ನೋಡಿ ವೈದ್ಯರು ಪ್ರಶ್ನಿಸಿದಾಗ ನಮ್ಮ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ನಾವೂ ರಕ್ಷಣೆಗಾಗಿ ಹಲ್ಲೆ ಮಾಡಿದ್ದೇವೆ ಎಂದು ಆಸ್ಪತ್ರೆ ಮುಖ್ಯಸ್ಥ ಡಾ. ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ.

ಅಸ್ಪತ್ರೆಯಲ್ಲಿ ನಡೆದ ಗಲಾಟೆಯ ದೃಶ್ಯ

ಓದಿ : ರೋಗಿಯನ್ನು ನೋಡಲು ಬಂದ ಸಂಬಂಧಿಕರ ಮೇಲೆ ಆಸ್ಪತ್ರೆ ವೈದ್ಯ, ಸಿಬ್ಬಂದಿಯಿಂದ ಹಲ್ಲೆ ಆರೋಪ

ಆಸ್ಪತ್ರೆಯೊಳಗೆ ನುಗ್ಗಿದ್ದ ಮೂವರು ಯುವಕರ ಪೈಕಿ ಓರ್ವ ತಾನು ಯಲಹಂಕ ಶಾಸಕರ ಮಗ ಎಂದು ವೈದ್ಯರು ಮತ್ತು ಸಿಬ್ಬಂದಿಗೆ ಧಮ್ಕಿ ಹಾಕಿ ಹಲ್ಲೆ ಮಾಡಿದ್ದಾನೆ. ಇದಾದ ಬಳಿಕ ನಾವು ಹಲ್ಲೆ ಮಾಡಿದ ಯುವಕರ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾದೆವು. ಈ ವೇಳೆ ಯುವಕರು ಬಂದು ನಮ್ಮದೇ ತಪ್ಪು ಎಂದು ಒಪ್ಪಿಕೊಂಡು ರಾಜಿ ಪಂಚಾಯಿತಿ ಮಾಡಿಕೊಂಡು ತೆರಳಿದ್ದರು. ಅದರೆ, ಕೆಲ ಕಿಡಿಗೇಡಿಗಳು ಆಸ್ಪತ್ರೆಗೆ ಇರುವ ಒಳ್ಳೆಯ ಹೆಸರು ಕೆಡಿಸುವ ದುರುದ್ದೇಶದಿಂದ ಆಡಳಿತ ಮಂಡಳಿ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ‌ ಸಂಬಂಧ ನಾವು ಕೂಡ ಘಟನೆಯ ಸಿಸಿಟಿವಿ ದೃಶ್ಯಾವಳಿಗಳ ಸಹಿತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಕೂಡಲೇ ಯುವಕರ ವಿರುದ್ಧ ಕಾನೂನು ರೀತಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಡಾ. ಶ್ರೀನಿವಾಸ್ ಒತ್ತಾಯಿಸಿದ್ದಾರೆ.

Assault on Patient relatives
ಆಸ್ಪತ್ರೆ ಸಿಬ್ಬಂದಿ ದೂರು ನೀಡಿರುವ ಪ್ರತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.