ETV Bharat / state

ಟ್ಯೂಷನ್​ಗೆ ಬರುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಬಂಧನ - Nelamangala rape issue

ಎಸ್​ಎಸ್​ಎಲ್​ಸಿ ಓದುವ (15)ರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನೊಬ್ಬನನ್ನು ಬಂಧಿಸಲಾಗಿದೆ. ಮಗಳ ಮೇಲೆ ಅತ್ಯಾಚಾರವಾಗಿದ್ದರೂ ಮರ್ಯಾದೆಗೆ ಅಂಜಿ ಸಂತ್ರಸ್ತ ಬಾಲಕಿಯ ಪೋಷಕರು ಗೌಪ್ಯತೆ ಕಾಪಾಡಿಕೊಂಡಿದ್ದರು. ಆದರೆ..!

Rape on minor girl in Nelamangala
ಬಂಧಿತ ಆರೋಪಿ
author img

By

Published : Dec 15, 2020, 8:07 PM IST

ನೆಲಮಂಗಲ: ಟ್ಯೂಷನ್​​ಗಾಗಿ ಮನೆಗೆ ಬರುತ್ತಿದ್ದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಕಾಮುಕನನ್ನು ಬಂಧಿಸಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರವಿಕಿರಣ್ @ಕಿರಣ್ (26) ಬಂಧಿತ ಆರೋಪಿ. ಪೋಕ್ಸೋ ಕಾಯ್ದೆಯಡಿ ಕಾಮುಕ ರವಿಕಿರಣ್​ನನ್ನು ಬಂಧಿಸಲಾಗಿದೆ.

ಆರೋಪಿಯ ಪತ್ನಿ ಬಳಿ ಟ್ಯೂಷನ್​ಗೆ ಬರುತ್ತಿದ್ದ ಎಸ್​ಎಸ್​ಎಲ್​ಸಿ ಓದುವ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗುತ್ತಿದೆ. ಮಗಳ ಮೇಲೆ ಅತ್ಯಾಚಾರವಾಗಿದ್ದರೂ ಮರ್ಯಾದೆಗೆ ಅಂಜಿ ಸಂತ್ರಸ್ತ ಬಾಲಕಿಯ ಪೋಷಕರು ಗೌಪ್ಯತೆ ಕಾಪಾಡಿಕೊಂಡಿದ್ದರು.

ಇದನ್ನೂ ಓದಿ: ಸ್ನೇಹಿತನ ಪತ್ನಿಯ ಮೇಲೆಯೇ ಅತ್ಯಾಚಾರ ಎಸಗಿದ ಕರ್ನಲ್!!

ಆದರೆ, ಆರೋಪಿಯು ತಾನು ಎಸಗಿದ ಅತ್ಯಾಚಾರ ಕೃತ್ಯವನ್ನ ಸ್ನೇಹಿತರ ಮುಂದೆ ಬಾಯ್ಬಿಟ್ಟಿದ್ದರಿಂದ ಮನನೊಂದ ಪೋಷಕರು ಮಾದನಾಯಕನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

ದೂರು ಪಡೆದ ಪೊಲೀಸರು ಅರೋಪಿಯನ್ನ ಪೋಕ್ಸೋ ಅಡಿ ಬಂಧಿಸಿ ನ್ಯಾಯಾಂಗ ವಶಕ್ಕೆ ಪಡೆದಿದ್ದಾರೆ. ವರ್ಷದ ಹಿಂದೆ ಆರೋಪಿ ಕೆಂಗೇರಿ ಠಾಣೆಯಲ್ಲಿ ದರೋಡೆ ಕೇಸ್​​ನಲ್ಲಿ ಬಂಧನವಾಗಿದ್ದ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.