ETV Bharat / state

ಕನ್ನಡದಲ್ಲಿ ನಾಮಫಲಕಕ್ಕೆ ಕರವೇ​ ಆಗ್ರಹ: ಇಂಗ್ಲಿಷ್​ ಫಲಕಗಳನ್ನು​ ಕಿತ್ತುಹಾಕಿದ ಕಾರ್ಯಕರ್ತರು, ನಾರಾಯಣಗೌಡ ಸೇರಿ ಹಲವರು ಪೊಲೀಸ್​ ವಶಕ್ಕೆ - ಕರವೇ ಬೃಹತ್​ ಪ್ರತಿಭಟನೆ

ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಪ್ರತಿಭಟನಾ ರ‍್ಯಾಲಿ ನಡೆಸಿದರು.

protest-demanding-installation-of-nameplates-in-kannada
ಕನ್ನಡದಲ್ಲಿ ನಾಮಫಲಕ ಅಳವಡಿಸಲು ಆಗ್ರಹಿಸಿ ಕರವೇ ಬೃಹತ್​ ಪ್ರತಿಭಟನೆ: ಜಾಹೀರಾತು ಹರಿದು ಆಕ್ರೋಶ
author img

By ETV Bharat Karnataka Team

Published : Dec 27, 2023, 12:16 PM IST

Updated : Dec 27, 2023, 5:22 PM IST

ಕನ್ನಡದಲ್ಲಿ ನಾಮಫಲಕಕ್ಕೆ ಕರವೇ​ ಆಗ್ರಹ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ರಾಜ್ಯದಲ್ಲಿ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ವತಿಯಿಂದ ಪ್ರತಿಭಟನಾ ರ‍್ಯಾಲಿ ನಡೆಸಿದರು. ಕಾರ್ಯಕರ್ತರು ಇಂಗ್ಲಿಷ್​ ಭಾಷೆಯಲ್ಲಿದ್ದ ಜಾಹೀರಾತು ಫಲಕಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಕರ್ತರನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದರು.

ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇಕಡಾ 60 ರಷ್ಟು ಕನ್ನಡ ಅಕ್ಷರಗಳ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಿ ಫೆಬ್ರುವರಿ 28ರವರೆಗೆ ಗಡುವು ಎಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ಬೆನ್ನಲ್ಲೇ ಕರವೇ ಕಾರ್ಯಕರ್ತರು ಬೀದಿಗಿಳಿದು ವಾಣಿಜ್ಯ ಮಳಿಗೆಗಳ ವಿರುದ್ಧ ಅಕ್ರೋಶ ಹೊರಹಾಕಿದರು.

ದೇವನಹಳ್ಳಿಯ ಸಾದಹಳ್ಳಿ ಟೋಲ್​ನಿಂದ ಬೆಂಗಳೂರು ಕಬ್ಬನ್ ಪಾರ್ಕ್​ವರೆಗೆ ರ‍್ಯಾಲಿ ಹಮ್ಮಿಕೊಂಡಿದ್ದ ಕರವೇ ಕಾರ್ಯಕರ್ತರು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಯುಬಿ ಸಿಟಿ ರಸ್ತೆಗಳಲ್ಲಿ ಕನ್ನಡ ಬಳಸದ ಮಳಿಗೆಗಳ ವಿರುದ್ಧ ಆಕ್ರೋಶ ತೋರಿದರು. ಕಾರ್ಯಕರ್ತರು ಇಂಗ್ಲಿಷ್ ನಾಮಫಲಕ ಹೊಂದಿದ್ದ ಎಂ.ಜಿ ರಸ್ತೆಯ ಕೆನರಾ ಬ್ಯಾಂಕ್ ಬೋರ್ಡ್ ಸೇರಿದಂತೆ ಕೆಲ ಆಂಗ್ಲ ಭಾಷಾ ನಾಮಫಲಕಗಳನ್ನು ಪುಡಿಗಟ್ಟಿದರು. ಇದೇ ಸಂದರ್ಭದಲ್ಲಿ ಪೊಲೀಸರು ಬರುತ್ತಿದ್ದಂತೆ ಕೆಲ ಕಾರ್ಯಕರ್ತರು ದಿಕ್ಕಾಪಾಲಾಗಿ ಓಡಿದ ಪ್ರಸಂಗವೂ ನಡೆಯಿತು.

ಕಾರ್ಯಕರ್ತರು ಪೊಲೀಸರು ವಶಕ್ಕೆ: ಮುನ್ನೆಚ್ಚರಿಕಾ ಕ್ರಮವಾಗಿ ನಾರಾಯಣಗೌಡ ಸೇರಿದಂತೆ ಕರವೇ ಕಾರ್ಯಕರ್ತರನ್ನು ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ವಶಕ್ಕೆ ಪಡೆದರು. ಇದೇ ವೇಳೆ 'ನಾವು ಯಾವುದೇ ಮಳಿಗೆಗಳನ್ನ ಅತಿಕ್ರಮವಾಗಿ ಪ್ರವೇಶಿಸಿರಲಿಲ್ಲ, ಕೇವಲ ಆಂಗ್ಲ ನಾಮಫಲಕಗಳಿಗೆ ಮಸಿ ಬಳಿಯುವ ಹಾಗೂ ತೆರವುಗೊಳಿಸುವ ಕೆಲಸ ಮಾಡುತ್ತಿದ್ದೆವು. ಆದರೆ, ಪೊಲೀಸರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ' ಎಂದು ಕೆಲ ಕಾರ್ಯಕರ್ತರು ಕಿಡಿಕಾರಿದರು.

ಕರವೇ ರಾಜ್ಯಾಧ್ಯಕ್ಷ ಪ್ರತಿಕ್ರಿಯೆ : ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ನಾವು ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಶೇಕಡಾ 100 ರಷ್ಟು ಪೊಲೀಸರು ಕನ್ನಡಿಗರೇ ಇದ್ದಾರೆ. ಆದರೆ ಹೊರಗಿನಿಂದ ಬಂದಿರುವ ಪೊಲೀಸ್ ಮೇಲಾಧಿಕಾರಿಗಳು ಕೆಳಗಿನ ಅಧಿಕಾರಿಗಳನ್ನು ಬಳಸಿಕೊಂಡು ನಮ್ಮನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರಾತ್ರಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರ ಜೊತೆ ಮಾತನಾಡಿರುವೆ. ರ‍್ಯಾಲಿಗೆ ಅವಕಾಶ ನೀಡಿದ್ದಾರೆ, ಪೊಲೀಸರು ರ‍್ಯಾಲಿಗೆ ಅವಕಾಶ ನೀಡದಿದ್ದರೆ ಬೆಂಗಳೂರಿನಲ್ಲಿ ಆಗುವ ಅನಾಹುತಕ್ಕೆ ಅವರೇ ಕಾರಣರಾಗುತ್ತಾರೆ ಎಂದು ಎಚ್ಚರಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್: ರ‍್ಯಾಲಿ ಹಿನ್ನೆಲೆಯಲ್ಲಿ ಸಾದಹಳ್ಳಿ ಟೋಲ್ ಸಮೀಪ ಬಿಗಿ ಪೊಲೀಸ್ ಬಂದೋಬಸ್ತ್​ ಒದಗಿಸಲಾಗಿತ್ತು. ಕೆಲ ಕಾರ್ಯಕರ್ತರು ಏರ್ಪೋಟ್ ಟೋಲ್ ಬಳಿ ಇಂಗ್ಲೀಷ್ ಭಾಷೆಗಳಲ್ಲಿದ್ದ ನಾಮಫಲಕ, ಜಾಹೀರಾತುಗಳನ್ನು ಹರಿದು ಹಾಕಿದರು. ಸಾದಹಳ್ಳಿಯ ಬ್ಲೂಮ್ ಹೋಟೆಲ್ ಬಳಿ ‌ಲೈಟಿಂಗ್ ಬೋರ್ಡ್ ಒಡೆದು ದ್ವಂಸ ಮಾಡಿದರು. ಡಿಸಿಪಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಎಸಿಪಿ, 6 ಮಂದಿ ಇನ್ಸ್​ಪೆಕ್ಟರ್, 12 ಸಬ್ ಇನ್ಸ್​ಪೆಕ್ಟರ್​ಗಳು ಸೇರಿದಂತೆ 500 ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಇದನ್ನು ಓದಿ: ಸ್ಮಶಾನಕ್ಕಿಲ್ಲ ದಾರಿ: ರಸ್ತೆ ಬದಿಯಲ್ಲೇ ಅಂತ್ಯ ಸಂಸ್ಕಾರ ಮಾಡಿದ ಗ್ರಾಮಸ್ಥರು

Last Updated : Dec 27, 2023, 5:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.