ಬೆಂಗಳೂರು/ಆನೇಕಲ್: ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವಂತೆ ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಮಹಿಳಾ ಸಂಘಟಕರು ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ತಮಿಳುನಾಡು, ತೆಲಂಗಾಣದ ಪಶುವೈದ್ಯೆ ಪ್ರಕರಣ ಸೇರಿದಂತೆ ಇಂದು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ದೇಶ ತತ್ತರಿಸಿ ಹೋಗಿದೆ. ಕೇವಲ ಹೈದರಾಬಾದ್ ಪ್ರಕರಣದ ನಾಲ್ವರು ಆರೋಪಿಗಳಿಗೆ ಶಿಕ್ಷೆಯಾದರೆ ಸಾಲದು. ನಿರ್ಭಯಾ ಕೇಸ್ನ ಅಪರಾಧಿಗಳಿಗೆ ಶಿಕ್ಷ ನೀಡಬೇಕು. ಅಲ್ಲದೇ ದೇಶದಲ್ಲಿ ಅತ್ಯಾಚಾರದಂತಹ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.