ETV Bharat / state

ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ.. ದನಕರುಗಳ ರಕ್ಷಣೆ - ಈಟಿವಿ ಭಾರತ ಕನ್ನಡ

ದೊಡ್ಡಬಳ್ಳಾಪುರದಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ - ಸುಮಾರು 19 ದನಕರುಗಳ ರಕ್ಷಣೆ- ಪ್ರಕರಣ ದಾಖಲು

police-ride-on-illegal-cow-slaugther-house-at-doddaballapur
ಅಕ್ರಮ ಕಸಾಯಿಖಾನೆಗೆ ಪೊಲೀಸರ ದಾಳಿ : ದನಕರುಗಳ ರಕ್ಷಣೆ
author img

By

Published : Dec 25, 2022, 7:56 PM IST

ದೊಡ್ಡಬಳ್ಳಾಪುರ : ನಗರದ ಕಾಳಮ್ಮ ದೇವಾಲಯದ ಹಿಂಭಾಗದಲ್ಲಿರುವ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕಸಾಯಿಖಾನೆಯಲ್ಲಿದ್ದ ಸುಮಾರು 19 ದನಕರುಗಳನ್ನು ರಕ್ಷಣೆ ಮಾಡಲಾಗಿದೆ.

ಇಂದು ಸರ್ಕಲ್ ಇನ್ಸಪೆಕ್ಟರ್ ಹರೀಶ್ ನೇತೃತ್ವದಲ್ಲಿ ಕಸಾಯಿಖಾನೆ ಮೇಲೆ ಈ ದಾಳಿ ನಡೆಸಲಾಗಿದೆ. ಈ ವೇಳೆ ಕಸಾಯಿಖಾನೆಯಲ್ಲಿದ್ದ 15 ಹಸುಗಳು, 3 ಕರುಗಳು, 1 ಎಮ್ಮೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

ಪ್ರಕರಣ ಸಂಬಂಧ ಜಾವೀದ್ ಎಂಬವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ರೇಣುಕಾ ಯಾದವ್ ತಿಳಿಸಿದ್ದಾರೆ.

ಇದನ್ನೂ ಓದಿ : ಮಂಗಳೂರಿನಲ್ಲಿ ಕಸಾಯಿಖಾನೆ ವಿರುದ್ಧ ಕ್ರಮ: 3 ಕಡೆ ಆಸ್ತಿ ಮುಟ್ಟುಗೋಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.