ದೇವನಹಳ್ಳಿ: ವಿಶ್ವದ ಅತಿದೊಡ್ಡ ಏರ್ ಬಸ್ A380 ವಿಮಾನ ಆಕ್ಟೋಬರ್ 14 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಕನ್ನಡಿಗರೊಬ್ಬರು ವಿಮಾನದ ಪೈಲಟ್ ಆಗಿದ್ದು, ಪ್ರಯಾಣಿಕರನ್ನ ಕನ್ನಡದಲ್ಲೇ ಸ್ವಾಗತಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಪೈಲಟ್ ಆಗಿರುವ ಹೆಮ್ಮೆಯ ಕನ್ನಡಿಗ ಸಂದೀಪ್ ಪ್ರಭು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಮೂಲತಃ ಮಂಗಳೂರು/ಬೆಂಗಳೂರಿನವರಾಗಿರುವ ಅವರು ವಿಮಾನ ಪ್ರಯಾಣಿಕರನ್ನು ಸ್ವಾಗತಿಸುವ ವೇಳೆ ಕನ್ನಡದಲ್ಲಿ ಉದ್ಘೋಷ (ಅನೌನ್ಸ್ ಮೆಂಟ್) ಮಾಡಿರುವುದು ಅಕ್ಷರಶಃ ಕನ್ನಡಿಗರ ಸಂತೋಷಕ್ಕೆ ಕಾರಣವಾಗಿದೆ. ಇದು ನಿಜವಾದ ಕನ್ನಡದ ಪ್ರೀತಿ, ಸಂದೀಪ್ ಪ್ರಭು ಕನ್ನಡಿಗರ ಹೆಮ್ಮೆ ಎಂದು ನೆಟಿಜನ್ ಹಾಡಿ ಹೊಗಳಿದ್ದಾರೆ.
ಹಿಂದಿ ಹೇರಿಕೆಯ ಮಧ್ಯೆಯೂ ಕನ್ನಡ ಮಾತುಗಳು ವಿಮಾನದಲ್ಲಿ ಕೇಳಿ ಬಂದಿರುವುದರಿಂದ ಸಂದೀಪ್ ಪ್ರಭುರವರ ಸಹೋದರ ಸತ್ಯೇಂದ್ರಪ್ರಭು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
-
Proud and overwhelmed at the time, as my brother @sandyprabhu has landed the superjumbo AirBus A380 at #BlrAirport this afternoon, creating history and achieving a first of its kind feat in Bengaluru. #Emirates #A380 #Aviationgeeks #EmiratesA380 #Karnatakatourism pic.twitter.com/iGBlfWjIYS
— Satyendra Prabhu (@sunnyprabhu) October 14, 2022 " class="align-text-top noRightClick twitterSection" data="
">Proud and overwhelmed at the time, as my brother @sandyprabhu has landed the superjumbo AirBus A380 at #BlrAirport this afternoon, creating history and achieving a first of its kind feat in Bengaluru. #Emirates #A380 #Aviationgeeks #EmiratesA380 #Karnatakatourism pic.twitter.com/iGBlfWjIYS
— Satyendra Prabhu (@sunnyprabhu) October 14, 2022Proud and overwhelmed at the time, as my brother @sandyprabhu has landed the superjumbo AirBus A380 at #BlrAirport this afternoon, creating history and achieving a first of its kind feat in Bengaluru. #Emirates #A380 #Aviationgeeks #EmiratesA380 #Karnatakatourism pic.twitter.com/iGBlfWjIYS
— Satyendra Prabhu (@sunnyprabhu) October 14, 2022
ಇದನ್ನೂ ಓದಿ: ಕೆಂಪೇಗೌಡ ನಿಲ್ದಾಣದಲ್ಲಿಂದು ಲ್ಯಾಂಡ್ ಆಗಲಿದೆ ವಿಶ್ವದ ಅತಿದೊಡ್ಡ ವಿಮಾನ
ಎಮಿರೇಟ್ಸ್ ಏರ್ಲೈನ್ಸ್ನ ಎ380 ವಿಮಾನ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕ್ಟೋಬರ್ 14 ರಂದು ಲ್ಯಾಂಡ್ ಆಗಿತ್ತು. ಅತಿದೊಡ್ಡ ವಿಮಾನ ಲ್ಯಾಂಡ್ ಆಗುವ ಸೌಲಭ್ಯವನ್ನು ಹೊಂದಿರುವ ದೆಹಲಿ, ಮುಂಬೈ ಮತ್ತು ಹೈದರಾಬಾದ್ ಏರ್ ಪೋರ್ಟ್ ಸಾಲಿಗೆ ಈಗ ಬೆಂಗಳೂರು ಸಹ ಸೇರಿದೆ.